ದುಡಿಯುವ ವರ್ಗದ ರಾಜಕೀಯದಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ – ಜೆ.ಬಾಲಕ್ರಷ್ಣ ಶೆಟ್ಟಿ

Spread the love

ದುಡಿಯುವ ವರ್ಗದ ರಾಜಕೀಯದಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ – ಜೆ.ಬಾಲಕ್ರಷ್ಣ ಶೆಟ್ಟಿ

ಮಂಗಳೂರು: ಬಂಡವಾಳಶಾಹಿ ವ್ಯವಸ್ಥೆಯೇ ಅಂತಿಮವೆಂದು ಬೀಗುತ್ತಿರುವ ಜಾಗತಿಕ ಬಂಡವಾಳಶಾಹಿಗಳು ತನ್ನ ಲಾಭಕೋರತನದ ದ್ರಷ್ಠಿಯಿಂದ ಮನುಕುಲದ ರಕ್ತ ಹೀರುತ್ತಿವೆಯೇ ಹೊರತು ಜನಸಾಮಾನ್ಯರ ಸಂಕಷ್ಟಗಳಿಗೆ ಪರಿಹಾರವನ್ನು ಕಂಡಿಲ್ಲ.ಇಡೀ ಜಗತ್ತನ್ನು ತನ್ನ ಕಪಿಮುಷ್ಠಿಯಲ್ಲಿಡಲು ಹವಣಿಸುತ್ತಿರುವ ಬಂಡವಾಳಶಾಹಿಗಳು, ನೆರೆಹೊರೆ ದೇಶಗಳೊಳಗೆ ಯುದ್ದವನ್ನು ನಡೆಸಿ ಬೇಳೆ ಬೇಯಿಸಿಕೊಳ್ಳುತ್ತಿದೆ.ಇಂತಹ ಬಲಪಂಥೀಯ ರಾಜಕೀಯದಿಂದ ಸಮಾಜದ ಅಭಿವೃದ್ಧಿ ಖಂಡಿತಾ ಸಾಧ್ಯವಿಲ್ಲ. ಬದಲಾಗಿ ಎಡಪಂಥೀಯ ವಿಚಾರಧಾರೆಯುಳ್ಳ ದುಡಿಯುವ ವರ್ಗದ ರಾಜಕೀಯದಿಂದ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಿ.ಐ.ಟಿ.ಯು ದ.ಕ.ಜಿಲ್ಲಾಧ್ಯಕ್ಷರಾದ ಜೆ.ಬಾಲಕ್ರಷ್ಣ ಶೆಟ್ಟಿಯವರು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಿಂದಲೇ ದ.ಕ.ಜಿಲ್ಲೆಯ ಕಾರ್ಮಿಕ ಚಳುವಳಿಯಲ್ಲಿ ಮಹತ್ವದ ಛಾಪನ್ನು ಮೂಡಿಸಿದ ಮೈದಾನ ಕಚೇರಿ ಸ್ಥಳಾಂತರ ಗೊಂಡಿದ್ದು,ಅದರ ನೂತನ ಕಚೇರಿಯನ್ನು ಉದ್ಘಾಟಿಸುತ್ತಾ, ಈ ಮಾತುಗಳನ್ನು ಹೇಳಿದರು._

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿ.ಐ.ಟಿ.ಯು ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು ಮಾತನಾಡುತ್ತಾ, *ಜಾತಿ ಧರ್ಮದ ಹೆಸರಿನಲ್ಲಿ, ಜನತೆಯ ಭಾವನೆಗಳನ್ನು ಕೆರಳಿಸಿ ಸುಳ್ಳಿನ ಸಾಮ್ಯಾಜ್ಯವನ್ನು ಕಟ್ಟುವ ಮೂಲಕ ಅಧಿಕಾರದ ಗದ್ದುಗೆಯೇರಿದ ನರೇಂದ್ರ ಮೋದಿ ಸರಕಾರವು,ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಂಟಕವಾಗಿದೆ.ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಬಾರತವನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಹೊರಟಿದೆ. ಕೋಮುವಾದದ ವಿರಾಟ್ ಸ್ವರೂಪ ತಾಂಡವವಾಡುತ್ತಿದೆ. ಸಮಾಜದ ಪ್ರಧಾನ ಶಕ್ತಿಯಾದ ಕಾರ್ಮಿಕ ವರ್ಗ ಹಾಗೂ ರೈತಾಪಿ ಜನತೆಯ ಮೇಲೆ ಧಾಳಿ ತೀವ್ರಗೊಂಡಿದೆ.ಇವೆಲ್ಲವನ್ನು ಸೋಲಿಸಲು ಬಲಿಷ್ಟವಾದ ಕಾರ್ಮಿಕ ಚಳುವಳಿಯಿಂದ ಮಾತ್ರವೇ ಸಾಧ್ಯ  ಎಂದು ಹೇಳಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಸಿ.ಐ.ಟಿ.ಯು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು, *ಸ್ವಾತಂತ್ರ್ಯ ಪೂರ್ವದಿಂದಲೇ ದುಡಿಯುವ ವರ್ಗದ ಚಳುವಳಿಯ ಕೇಂದ್ರವಾಗಿ ಮೂಡಿ ಬಂದ ಮೈದಾನ ಕಚೇರಿಯು ರೈತ ಕಾರ್ಮಿಕರ ಅನೇಕ ಯಶಸ್ವಿ ಹೋರಾಟಗಳಿಗೆ ಮಾರ್ಗದರ್ಶನ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಬಲ ಚಳುವಳಿ ಬೆಳೆದು ಬರುವ ಮೂಲಕ ಜಿಲ್ಲೆಯ ಸೌಹಾರ್ದ ಪರಂಪರೆಯನ್ನು ಬೆಳೆಸಬೇಕಾಗಿದೆ.ಹಾಗೂ ಕರಾವಳಿಯ ರಾಜಕೀಯವನ್ನು ತೀರ್ಮಾನ ಮಾಡುವಲ್ಲಿ ಕಾರ್ಮಿಕ ವರ್ಗ ಮುಂದಡಿ ಇಡಬೇಕಾಗಿದೆ* ಎಂದು ಹೇಳಿದರು

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಾದವ ಶೆಟ್ಟಿಯವರು ಮಾತನಾಡುತ್ತಾ, *ಅಂದು ರೈತ ಚಳುವಳಿಯ ಮೂಲಕ ಪ್ರಾರಂಭಗೊಂಡ ಮೈದಾನ ಕಚೇರಿ ಇಂದು ಅದಷ್ಟೋ ಕಾರ್ಮಿಕರ ಹೋರಾಟಗಳಿಗೆ ಕೇಂದ್ರವಾಗಿ ಮಿಂಚಿದೆ.ನೂತನ ಕಚೇರಿಯು ಮುಂದಿನ ದಿನಗಳಲ್ಲಿ ಇನ್ನಷ್ಟು ಹೋರಾಟಗಳಿಗೆ ಸ್ಪೂರ್ತಿ ನೀಡುವಂತಾಗಲಿ ಎಂದು ಆಶಿಸಿದರು.

ಈ ಸಂಧರ್ಭದಲ್ಲಿ ಜಿಲ್ಲಾ ರೈತ ನಾಯಕರಾದ ಕ್ರಷ್ಣಪ್ಪ ಸಾಲ್ಯಾನ್, ಸಿ.ಐ.ಟಿ.ಯು ಜಿಲ್ಲಾ ಮುಖಂಡರಾದ ಪದ್ಮಾವತಿ ಶೆಟ್ಟಿ,ಜಯಂತ ನಾಯಕ್, ಜಯಂತಿ ಶೆಟ್ಟಿ, ಸಿಪಿಐಮ್ ನಾಯಕರಾದ ಸುರೇಶ್ ಬಜಾಲ್, ಡಿವೈಎಫ್ ಐ ನಾಯಕರಾದ ಮುನೀರ್ ಕಾಟಿಪಳ್ಳ, ಬಿ.ಕೆ.ಇಮ್ತಿಯಾಜ್, ಸಂತೋಷ್ ಬಜಾಲ್,ನವೀನ್ ಕೊಂಚಾಡಿ,JMS ನಾಯಕರಾದ ಭಾರತಿ ಬೋಳಾರ, ಜಯಲಕ್ಷ್ಮಿ, ಎಸ್ ಎಫ್ ಐ ಮುಖಂಡರಾದ ಮಾಧುರಿ ಬೋಳಾರ, ವಿಕಾಸ್ ಕುತ್ತಾರ್, ಕಟ್ಟಡ ಕಾರ್ಮಿಕರ ಮುಖಂಡರಾದ ದಿನೇಶ್ ಶೆಟ್ಟಿ, ಅಶೋಕ್ ಸಾಲ್ಯಾನ್, ಬೀದಿಬದಿ ವ್ಯಾಪಾರಸ್ಥರ ಸಂಘದ ಮುಖಂಡರಾದ ಮಹಮ್ಮದ್ ಮುಸ್ತಫಾ, ಸಂತೋಷ್ ಆರ್.ಎಸ್, ಮುಝಾಫರ್,ಹಸೈನಾರ್, ದಲಿತ ಹಕ್ಕುಗಳ ಸಮಿತಿಯ ನಾಯಕರಾದ ಕ್ರಷ್ಣ ತಣ್ಣೀರುಬಾವಿ,ಅಟೋರಿಕ್ಷಾ ಚಾಲಕರ ಸಂಘದ ಮುಖಂಡರಾದ ಸ್ಟಾನ್ಲಿ ನೊರೋನ್ಹಾ,ಮಹಮ್ಮದ್ ಅನ್ಸಾರ್ ಮುಂತಾದವರು ಉಪಸ್ಥಿತರಿದ್ದರು._


Spread the love