ದುರುಸ್ತಿಯಾದ ಕೂಳೂರು ಹಳೇ ಸೇತುವೆಯನ್ನು ಸಂಸದ ನಳಿನ್ ಉದ್ಘಾಟನೆ

Spread the love

ದುರುಸ್ತಿಯಾದ ಕೂಳೂರು ಹಳೇ ಸೇತುವೆಯನ್ನು ಸಂಸದ ನಳಿನ್ ಉದ್ಘಾಟನೆ

ಮಂಗಳೂರು: ಕೂಳೂರು ಹಳೇ ಸೇತುವೆ ನೂತನ ತಂತ್ರಜ್ಞಾನದೊಂದಿಗೆ ದುರಸ್ತಿ ಯಾಗಿದ್ದು ಬುಧವಾರ ಸಾಂಕೇತಿಕವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಮೈಕ್ರೋ ಕೊನ್ಟೆಸ್ಟ್ ತಂತ್ರಜ್ಞಾನದೊಂದಿಗೆ ಇದನ್ನು 38ಲಕ್ಷ ರೂ.ವೆಚ್ಚದಲ್ಲಿ ದುರಸ್ತಿ ಗೊಳಿಸಲಾಗಿದೆ.ಈ ಸೇತುವೆ ಜೀರ್ಣಾವಸ್ಥೆಯಲ್ಲಿತ್ತು.ಇದನ್ನು ದುರಸ್ತಿ ಮಾಡದೆ ನೂತನ ಸೇತುವೆ ನಿರ್ಮಾಣಕ್ಕಿಳಿದರೆ ವಾಹನ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಇದನ್ನು ದುರಸ್ತಿ ಗೊಳಿಸಲಾಗಿದೆ.ಹೊಸ ಸೇತುವೆ ಶೀಘ್ರ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು.

ಇದೇ ವೇಳೆ ಗುರುಪುರ ಸೇತುವೆ ಕುರಿತಂತೆ ಉತ್ತರಿಸಿದ ಅವರುಸೇತುವೆ ಕೆಲಸ ಪೂರ್ಣವಾಗಿದ್ದು ಸಂಪರ್ಕ ರಸ್ತೆ ನಿರ್ಮಾಣವಾಗಬೇಕಿದೆ.ಕೊರೊನಾ ಸಮಸ್ಯೆಯಿಂದ ವಿಳಂಬವಾಗಿದೆ ಎಂದರು.ಪಂಪ್ ವೆಲ್ ಮೇಲ್ಸೇತುವೆ ಬಗ್ಗೆ ಯಾವುದೇ ಭೀತಿ ಬೇಡ.ತಜ್ಞರು ಇದರಿಂದ ಸಮಸ್ಯೆ ಇಲ್ಲ ಎಂದಿದ್ದಾರೆ ಎಂದರು.

ಶಾಸಕ ಡಾ.ಭರತ್ ಶೆಟ್ಟಿ, ನಿತಿನ್ ಕುಮಾರ್,ತಿಲಕ್ ರಾಜ್ ಕೃಷ್ಣಾಪುರ,ಹೆದ್ದಾರಿ ಅಧಿಕಾರಿಗಳಾದ ಶಿಶು ಮೋಹನ್ ಉಪಸ್ಥಿತರಿದ್ದರು.


Spread the love