ದೇಶದಾದ್ಯಂತ ‘ರಾಷ್ಟ್ರೀಯ ಪೌರತ್ವ ನೊಂದಣಿ’  ಅನ್ವಯಗೊಳಿಸಿರಿ 

Spread the love

ದೇಶದಾದ್ಯಂತ ‘ರಾಷ್ಟ್ರೀಯ ಪೌರತ್ವ ನೊಂದಣಿ’  ಅನ್ವಯಗೊಳಿಸಿರಿ 

ಅಸ್ಸಾಮನಲ್ಲಿ ಬಾಂಗ್ಲಾದೇಶೀ ನುಸುಳುಕೋರರು ಯಾರು ಮತ್ತು ಮೂಲ ಅಸ್ಸಾಮೀ ನಾಗರಿಕರು ಯಾರು ಎಂಬ ಮಾಹಿತಿಯನ್ನು ನೀಡುವ “ರಾಷ್ಟ್ರೀಯ ಪೌರತ್ವ ನೊಂದಣಿ’ (ನಾಶನಲ್ ರಿಜಿಸ್ಟರ್ ಆಫ್ ಸಿಟಿಝನ್’) ಅಂತಿಮ ಪಟ್ಟಿಯನ್ನು ಪ್ರಕಾಶಿಸಲಾಗಿದೆ. ಅದರಲ್ಲಿ ೧೧ ಲಕ್ಷ ೬ ಸಾವಿರ ೬೫೭ ನಾಗರಿಕರ ಹೆಸರುಗಳನ್ನು ಸೇರಿಸಿಲ್ಲ. ಇದರ ಅರ್ಥವೇನೆಂದರೆ ಇಷ್ಟೊಂದು ಜನರು ಕಾನೂನುಬಾಹಿರವಾಗಿ ಅಂದರೆ ನುಸುಳಿಕೊಂಡು ವಾಸಿಸುತ್ತಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ತನಿಖಾ ದಳವು (ಎನ್.ಐ.ಏ) ಯು ಏನು ಹೇಳಿದೆಯೆಂದರೆ ‘ಜಮಾತ್-ಉಲ್- ಮುಜಹಿದೀನ ಬಾಂಗ್ಲಾದೇಶ(ಜೆ.ಎಮ್.ಬಿ) ಈ ಬಾಂಗ್ಲಾದೇಶೀ ಭಯೋತ್ಪಾದಕ ಸಂಘಟನೆಯು ಬಾಂಗ್ಲಾದೇಶೀ ನುಸುಳುಕೋರರ ಮಾಧ್ಯಮದಿಂದ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಈ ನುಸುಳುಕೋರರಿಂದಾಗಿ ಸುರಕ್ಷೆಯ ಸಮಸ್ಯೆಯು ಉತ್ಪನ್ನವಾಗಿದೆ. ಅದರ ಜೊತೆಗೆ ಈ ಸಮಸ್ಯೆಯು ರಾಷ್ಟ್ರೀಯವಾಗಿ ಬಿಟ್ಟಿದೆ. ಆದರೂ ಕೇಂದ್ರ ಸರಕಾರವು ದೇಶದಾದ್ಯಂತದ ಬಾಂಗ್ಲಾದೇಶೀ ಹಾಗೂ ಮ್ಯಾನಮಾರ್ ಮತ್ತು ಪಾಕಿಸ್ತಾನದಿಂದ ಬಂದಿರುವ ನುಸುಳುಕೋರರ ಸಂಖ್ಯೆ ನಿರ್ದಿಷ್ಠವಾಗಿ ಎಷ್ಟಿದೆ ಎಂದು ತಿಳಿದುಕೊಳ್ಳಲು ಎಲ್ಲ ರಾಜ್ಯಗಳಿಗೆ “ರಾಷ್ಟ್ರೀಯ ನಾಗರಿಕ ನೊಂದಣಿ’(ನಾಶನಲ್ ರಿಜಿಸ್ಟರ್ ಆಫ್ ಸಿಟಿಝನ್’) ಪಟ್ಟಿಯನ್ನು ನಿಗದಿತ ಸಮಯಮಿತಿಯೊಳಗೆ ತಯಾರು ಮಾಡಲು ತಕ್ಷಣ ಆದೇಶ ನೀಡಬೇಕು, ದೇಶದ ಗಡಿಯನ್ನು ಸುರಕ್ಷಿತವಾಗಿಡಲು ಕಠೋರ ಹೆಜ್ಜೆಗಳನ್ನು ಇಡಬೇಕು ಮತ್ತು ಗಡಿಯಲ್ಲಿ ಅವಶ್ಯವಿರುವಂತಹ ಪರಿಹಾರೋಪಾಯಗಳನ್ನು ತಕ್ಷಣ ಮಾಡಬೇಕು ಎಂಬ ಬೇಡಿಕೆಯನ್ನು ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಚಂದ್ರ ಮೊಗೇರ್ ಇವರು ಮಾಡಿದ್ದಾರೆ. ಅವರು 25.11.2019 ಈ ದಿನ ಜಿಲ್ಲಾಧಿಕಾರಿ ಕಚೇರಿಯ ಎದುರು ಆಯೋಜಿಸಲಾದ ರಾಷ್ಟ್ರೀಯ ಹಿಂದೂ ಆಂದೋಲನದಲ್ಲಿ ಮಾತನಾಡುತ್ತಿದ್ದರು.

ಕಮಲೇಶ ತಿವಾರಿ ಸಹಿತ ಇತರ ಹಿಂದುತ್ವನಿಷ್ಠರ ಹತ್ಯೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು!

ಉತ್ತರಪ್ರದೇಶದಲ್ಲಿನ ಹಿಂದೂ ಮಹಾಸಭೆಯ ಹಾಗೂ ಹಿಂದೂ ಸಮಾಜ ಪಕ್ಷದ ಅಧ್ಯಕ್ಷ ಕಮಲೇಶ ತಿವಾರಿ ಇವರನ್ನು ೧೮ ಅಕ್ಟೋಬರನಂದು ಹಾಡುಹಗಲೇ ಅವರ ಕಚೇರಿಯೊಳಗೆ ನುಗ್ಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ಸಂಚನ್ನು ದುಬೈಯಲ್ಲಿ ರಚಿಸಲಾಗಿತ್ತು ಎಂದು ತನಿಖೆಯಲ್ಲಿ ಕಂಡುಬಂದಿದೆ. ಇದರ ಜೊತೆಗೆ ಉತ್ತರಪ್ರದೇಶದಲ್ಲಿ ಅಕ್ಟೋಬರ ತಿಂಗಳಿನಲ್ಲಿ ೫ ಮಂದಿ ಹಿಂದುತ್ವನಿಷ್ಠರನ್ನು ಹತ್ಯೆ ಮಾಡಲಾಗಿತ್ತು. ಹಾಗೂ ಪ್ರಧಾನಮಂತ್ರಿ ಮೋದಿ ಸಹಿತ ಕೆಲವು ಹಿಂದುತ್ವನಿಷ್ಠ ನೇತಾರರು ಮತ್ತು ಕ್ರಿಕೆಟ್ ಕ್ರೀಡಾಳುಗಳ ಮೇಲೆ ಭಯೋತ್ಪಾದಕರು ಆಕ್ರಮಣ ಮಾಡುವ ಸಂಚನ್ನು ರೂಪಿಸಲಾಗಿದೆ ಎಂಬ ಮಾಹಿತಿಯು ಗುಪ್ತಚರ ವಿಭಾಗಕ್ಕೆ ದೊರಕಿದೆ. ಹಾಗಾಗಿ ಹೆಚ್ಚುತ್ತಿರುವ ಹಿಂದುತ್ವನಿಷ್ಠರ ಹತ್ಯೆ, ಅವರ ಮೇಲಾಗುತ್ತಿರುವ ಆಕ್ರಮಣಗಳು ಮತ್ತು ಅವರಿಗೆ ಬರುತ್ತಿರುವ ಬೆದರಿಕೆಗಳು ಇದರ ಹಿಂದಿನ ಷಡ್ಯಂತ್ರಗಳನ್ನು ಕಂಡುಹಿಡಿಯಬೇಕು ಹಾಗೂ ಕಮಲೇಶ ತಿವಾರಿ ಸಹಿತ ಇತರ ಹಿಂದುತ್ವನಿಷ್ಠರ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಅದಕ್ಕಾಗಿ ಈ ಎಲ್ಲ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (ಎನ್.ಐ.ಎ.) ಗೆ ಒಪ್ಪಿಸಬೇಕು ಎಂದು ಈ ಸಮಯದಲ್ಲಿ ಅಪರ ಜಿಲ್ಲಾಧಿಕಾರಿಯಾದ ಎಂ. ಜೆ. ರೂಪ ಇವರಿಗೆ ಬೇಡಿಕೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ಉಪೇಂದ್ರ ಆಚಾರ್ಯ, ಶ್ರೀರಾಮಸೇನೆಯ ಶ್ರೀ ಲೋಕೇಶ್, ಧರ್ಮಪ್ರೇಮಿಯಾದ ಸತೀಶ್, ಶಶಿಧರ್ ಬಾಳಿಗಾ, ಸನಾತನ ಸಂಸ್ಥೆಯ ಸೌ ಲೀಲಾವತಿ ನಾಯಕ್, ವನಜಾ ಸುರತ್ಕಲ್, ಮಮತಾ ಹೊಸಬೆಟ್ಟು ಇವರು ಉಪಸ್ಥಿತರಿದ್ದರು.


Spread the love