ದೈಹಿಕ ಕ್ಷಮತೆ ಕಾಪಾಡಿಕೊಳ್ಳಿ: ವೇದಮೂರ್ತಿ

Spread the love

ದೈಹಿಕ ಕ್ಷಮತೆ ಕಾಪಾಡಿಕೊಳ್ಳಿ: ವೇದಮೂರ್ತಿ

ಮಂಗಳೂರು: ಜಿಲ್ಲಾ ಗೃಹರಕ್ಷಕದಳ ದ.ಕ, ಜಿಲ್ಲೆ ಮಂಗಳೂರು ಇವರ ಜಿಲ್ಲಾ ಮಟ್ಟದ ವೃತ್ತಿಪರ ಕ್ರೀಡಾಕೂಟದ 2018 ಇದರ ಸಮಾರೋಪ ಸಮಾರಂಭ ಡಿಸೆಂಬರ್ 23 ರಂದು ಜಿಲ್ಲಾ ಗೃಹರಕ್ಷಕದಳದ ಕಚೇರಿ ಆವರಣದ ಮೇರಿಹಿಲ್ ಇಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಪೊಲೀಸ್ ಅಧೀಕ್ಷಕರು, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಮಂಗಳೂರು ವೇದಮೂರ್ತಿ ಇವರು ದೀಪ ಬೆಳಗಿಸಿ ನೆವೇರಿಸಿದರು. ಗೃಹರಕ್ಷಕರು ದಿನದ 24 ಘಂಟೆಯು ಕೆಲಸ ನಿರ್ವಹಿಸುವ ಅನಿವಾರ್ಯತೆ ಇರುತ್ತದೆ. ಪೊಲೀಸ್ ಇಲಾಖೆಗೆ ಹೆಗಲು ಕೊಟ್ಟು ಕೆಲಸ ನಿರ್ವಹಿಸುವ ಗೃಹರಕ್ಷಕರಿಗೆ ದೈಹಿಕ ಕ್ಷಮತೆ ಅತೀ ಅಗತ್ಯ ಈ ನಿಟ್ಟಿನಲ್ಲಿ ಇಂತಹಾ ಕ್ರೀಡಾಕೂಟಗಳು ಅತೀ ಅವಶ್ಯಕ ಮತ್ತು ಎಲ್ಲಾ ಗೃಹರಕ್ಷಕರಿಗೂ ಆಟೋಟಗಳಲ್ಲಿ ಪಾಲುಗೊಳ್ಳುವ ಅವಕಾಶ ಸಿಗಬೇಕು ಎಂದು ಅಭಿಪ್ರಾಯ ಪಟ್ಟರು.

ಬಹುಮಾನ ವಿತರಣೆಯನ್ನು ಲಯನ್ಸ್ ಕ್ಲಬ್ ಮಂಗಳೂರು ಇದರ ಉಪಾಧ್ಯಕ್ಷರಾದ ಸತಿಶ್ ರೈ ಇವರು ನೆರವೇರಿಸಿದರು. ಆಟೋಟಗಳಿಂದ ಗೃಹರಕ್ಷಕರ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.

ವಿಕಾಸ್ ಸಮೂಹ ಸಂಸ್ಥೆ ಮಂಗಳೂರು ಇದರ ಡೀನ್ ಮಂಜುಳಾ ಅನೀಲ್ ರಾವ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಾನಸಿಕ ಒತ್ತಡದಿಂದಾಗಿ ದೇಹಕ್ಕೆ ಹೆಚ್ಚಿನ ರೋಗಗಳು ಬರುತ್ತದೆ ಇಂತಹ ಕ್ರೀಡಾಕೂಟಗಳಿಂದ ಮಾನಸಿಕ ಒತ್ತಡ ಕಡಿ ಆಗಿ ಮಾನಸಿಕ ಆರೋಗ್ಯ ವೃದ್ದಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.

ಗೃಹರಕ್ಷಕರು ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತೀ ಅಗತ್ಯ ಎಂದರು. ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಈ ಸಮಾರಂಭ ಜರುಗಿತು. ಆಟದಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು, ಸೋಲೇ ಗೆಲುವಿನ ಸೋಪಾನ ಆಟೋಟಗಳಿಂದ ನಾವೆಲ್ಲ ಬದುಕಿನ ಪಾಠ ಕಲಿಯಬೇಕು ಎಂದು ಕರೆ ನೀಡಿದರು.

ರಮೇಶ್ ಡೆಪ್ಯೂಟಿ ಕಮಾಂಡೆಂಟ್ ಸ್ವಾಗತಿಸಿದರು. ಮೊಹಮ್ಮದ್ ಇಸ್ಮಾಯಿಲ್ ಸೆಕೆಂಡ್ ಇನ್ ಕಮಾಂಡೆಂಟ್ ಇವರು ವಂದನಾರ್ಪಣೆ ಮಾಡಿದರು ಸನತ್ ಆಳ್ವ ಪ್ರಾರ್ಥನೆ ನಿರ್ವಹಿಸಿದರು, ಕಾರ್ಯಕ್ರಮ ನಿರ್ವಹಣೆಯನ್ನು ರಮೇಶ್ ಭಂಡಾರಿ ಇವರು ನಿರ್ವಹಿಸಿದರು.

ಪಣಂಬೂರು ಘಟಕದ ಪರಮೇಶ್ವರ್ ಅವರು ಪುರುಷ ವೈಯಕ್ತಿಕ ಚಾಂಪಿಯನ್ ಆಗಿ ಹೊರಹೊಮ್ಮಿದರು ಮತ್ತು ಬಂಟ್ವಾಳ ಘಟಕದ ಗೀತಾ ಅವರು ಮಹಿಳಾ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ ಪಡೆದರು.

ಜಿಲ್ಲಾ ಗೃಹರಕ್ಷಕದಳದ 35 ಮಂದಿ ಗೃಹರಕ್ಷಕರು ಆಯ್ಕೆಯಾಗಿ ಜನವರಿ 6,7,8 ರಂದು ಮಂಗಳೂರಿನಲ್ಲಿ ನಡೆಯುವ ಪಶ್ಚಿಮ ವಲಯದ ಕ್ರೀಡಾಕೂಟಕ್ಕೆ ಆಯ್ಕೆಯಾದರು. ಕಚೇರಿ ಅಧೀಕ್ಷರಾದ ರತ್ನಾಕರ್, ಪ್ರಥಮ ದರ್ಜೆ ಸಹಾಯಕರಾದ ಅನಿತಾ.ಟಿ.ಎಸ್ , ಲಯನ್ಸ್ ಕ್ಲಬ್ ಮಂಗಳೂರು ಇದರ ಕಾರ್ಯದರ್ಶಿ ಹೇಮರಾವ್ ಮತ್ತು ಲಯನ್ಸ್ ಕ್ಲಬ್ ಅಧ್ಯಕ್ಷೆ ಗೀತಾ ಇವರು ಉಪಸ್ಥಿತರಿದ್ದರು. ವಿವಿಧ ಘಟಕಗಳ ಘಟಕಾಧಿಕಾರಿಗಳಾದ ಶ್ರೀನಿವಾಸ ಆಚಾರ್ಯ(ಬಂಟ್ವಾಳ ಘಟಕ) ,ದಿನೇಶ್( ಉಪ್ಪಿನಂಗಡಿ ಘಟಕ), ಹರೀಶ್ ಆಚಾರ್ಯ( ಪಣಂಬೂರು ಘಟಕ), ರಮೇಶ್.( ಸುರತ್ಕಲ್ ಘಟಕ) ಸಂಜೀವ,( ವಿಟ್ಲ ಘಟಕ) ಅಬ್ದುಲ್ ಗಫೂರ್ (ಸಾಜೇಂಟ್ ಸುಳ್ಯ ಘಟಕ), ಪಿ.ವಸಂತ ಕುಮಾರ್ (ಸುಬ್ರಹ್ಮಣ್ಯ ಘಟಕ) ಉಪಸ್ಥಿತರಿದ್ದರು.


Spread the love