ದೈಹಿಕ ಶಿಕ್ಷಕ ಪ್ರವೀಣರನ್ನು ತನಿಖೆ ಒಳಪಡಿಸಿ ; ಕಾವ್ಯ ತಾಯಿ ಬೇಬಿ ಆಗ್ರಹ

Spread the love

ದೈಹಿಕ ಶಿಕ್ಷಕ ಪ್ರವೀಣರನ್ನು ತನಿಖೆ ಒಳಪಡಿಸಿ ; ಕಾವ್ಯ ತಾಯಿ ಬೇಬಿ ಆಗ್ರಹ

ಮಂಗಳೂರು: ಜುಲೈ 20 ರಂದು ತನ್ನ ಮಗಳು ಅನುಮಾಸ್ಪದವಾಗಿ ಸಾವನಪ್ಪಿದ್ದು, ಹಲವಾರು ಸಂಘಟನೆಗಳು ನ್ಯಾಯಕ್ಕಾಗಿ ಹೋರಾಡಲು ಮುಂದೆ ಬಂದಿವೆ. ಘಟನೆ ನಡೆದು 16 ದಿನಗಳಾದರೂ ನಾವು ಯಾವುದೇ ರೀತಿಯ ಕಾವ್ಯ ಸಾವಿನ ಕುರಿತು ತನಿಖಾಧಿಕಾರಿಯಿಂದ ನಮಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಮೋಹನ್ ಆಳ್ವಾ ಅವರು ಯಾವ ಉದ್ದೇಶದಿಂದ ದೈಹಿಕ ಶಿಕ್ಷಕರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ? ಅವರನ್ನು ವಿಚಾರಣೆ ನಡೆಸಲೇಬೇಕು ನನ್ನ ಮಗಳು ಕಾವ್ಯ ಆತ್ಮಹತ್ಯೆ ಮಾಡಿಕೊಂಡಿಲ್ಲ ಬದಲಾಗಿ ಕೊಲೆಯಾಗಿದ್ದಾಳೆ ಎಂದು ಕಾವ್ಯಳ ತಾಯಿ ಬೇಬಿ ಆರೋಪಿಸಿದ್ದಾರೆ.

ಅವರು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಾವ್ಯ ಸಾವಿಗೀಡಾಗುವ ಮುನ್ನಾ ದಿನ ರಾತ್ರಿ ನನ್ನಲ್ಲಿ ಹಾಗೂ ತನ್ನ ಪತಿಯೊಂದಿಗೆ ಫೋನಿನಲ್ಲಿ ಮಾತನಾಡಿದ್ದು ಯಾವುದೇ ರೀತಿಯ ಮಾನಸಿಕ ಖಿನ್ನತೆ ಒಳಗಾಗಿರಲಿಲ್ಲ. ಅವಳು ಸಂಪೂರ್ಣ ಸಂತೋಷದಿಂದ ಇದ್ದಳು ಮತ್ತು ತನಗೆ ಮಾರನೇ ದಿನ 4.30 ಕ್ಕೆ ತರಬೇತಿಗೆ ದೈಹಿಕ ಶಿಕ್ಷಕರು ಕರೆದಿದ್ದಾರೆ ಎಂದು ನಮ್ಮಲ್ಲಿ ಹೇಳಿಕೊಂಡಿದ್ದಳು. ದೈಹಿಕ ಶಿಕ್ಷಕರು 4.30 ಕರೆದ ಉದ್ದೇಶವೇನು? ನನಗೆ ಸಂಪೂರ್ಣ ನಂಬಿಕೆ ಕಳೆದು ಹೋಗಿದೆ. ಕಾವ್ಯಾಳ ಸಾವಿನ ಬಳಿಕ ಆಳ್ವಾಸಿನ ಇತರ ವಿದ್ಯಾರ್ಥಿಗಳು ಕೂಡ ಭಯದಿಂದ ಬದುಕುತ್ತಿದ್ದಾರೆ ಎಂದರು.

 ಕಾವ್ಯಾಳ ಸಾವು ಸಂಭವಿಸಿ 16 ದಿನಗಳು ಕಳೆದರೂ ಕೂಡ ಯಾವುದೇ ರೀತಿಯ ಮಾಹಿತಿ ನಮಗೆ ಲಭಿಸಿಲ್ಲ. ವಿವಿಧ ಸಂಘಟನೆಗಳು ನ್ಯಾಯಾಕ್ಕಾಗಿ ಹೋರಾಟ ಮಾಡುತ್ತಿವೆ. ಎಸಿಪಿ ರಾಜೇಂದ್ರ ಅವರ ತನಿಖಾ ತಂಡವು ಕೂಡ ಯಾವುದೇ ರೀತಿಯ ಮಾಹಿತಿ ನಮಗೆ ನೀಡುತ್ತಿಲ್ಲ. ಅಗೋಸ್ತ್ 9 ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿರುವ ಜಸ್ಟೀಸ್ ಫಾರ್ ಕಾವ್ಯ ಪ್ರತಿಭಟನಾ ಜಾಥಾಕ್ಕೆ ಪೋಲಿಸ್ ಇಲಾಖೆ ಪರವಾನಿಗೆ ನೀಡಲು ನಿರಾಕರಿಸಿದೆ ಆದರೂ ನಾವು ಪ್ರತಿಭಟಿಸಿಯೇ ಸಿದ್ದ ಎಂದರು.

ನ್ಯಾಯವಾದಿ ದಿನಕರ ಶೆಟ್ಟಿ, ಅನಿಲ್ ದಾಸ್, ಕಾವ್ಯಾಳ ತಂದೆ ಲೋಕೇಶ್, ಸುನಿಲ್ ಕುಮಾರ್ ಬಜಾಲ್, ರೋಬಾರ್ಟ್ ರೋಸಾರಿಯೊ, ರಘುವೀರ್ ಸೂಟರ್ ಪೇಟೆ ಹಾಗೂ ಇತರರು ಉಪಸ್ಥಿತರಿದ್ದರು.


Spread the love

1 Comment

  1. At least the basic questions should be answered. Why not the Physical director is not interrogated? As he is not legally appointed by the college thorough investigation need to be carried out, even the old cases investigation may highlight the true happenings. The supporters of Dr Alva should remember that the parents have not blamed him but requesting for investigation.

Comments are closed.