ದ್ವಿಚಕ್ರ ವಾಹನಗಳಿಗೂ ಟೋಲ್ ಶುಲ್ಕ ಎನ್ನುವುದು ಸುಳ್ಳು ಸುದ್ದಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ

Spread the love

ದ್ವಿಚಕ್ರ ವಾಹನಗಳಿಗೂ ಟೋಲ್ ಶುಲ್ಕ ಎನ್ನುವುದು ಸುಳ್ಳು ಸುದ್ದಿ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸ್ಪಷ್ಟನೆ

 

ನವದೆಹಲಿ: ದ್ವಿಚಕ್ರ ವಾಹನ ಚಾಲಕರೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಟೋಲ್‌ ಶುಲ್ಕ ಪಾವತಿಸಬೇಕು ಎಂದು ಕೆಲವು ಮಾಧ್ಯಮಗಳು ವರದಿ ಮಾಡುತ್ತಿದ್ದು, ಇದು ಸುಳ್ಳು ಸುದ್ದಿ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸ್ಪಷ್ಟನೆ ನೀಡಿದೆ.

https://x.com/NHAI_Official/status/1938155675445588222

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಾಧಿಕಾರ, ‘ಕೆಲವು ಮಾಧ್ಯಮಗಳಲ್ಲಿ ಭಾರತ ಸರ್ಕಾರ ದ್ವಿಚಕ್ರ ವಾಹನ ಚಾಲಕರೂ ಟೋಲ್ ಶುಲ್ಕ ಕಟ್ಟಬೇಕು ಎನ್ನುವ ಯೋಜನೆ ಜಾರಿಗೆ ತರುತ್ತಿದೆ ಎನ್ನುವ ಸುದ್ದಿ ಹರಡುತ್ತಿದೆ. ಆದರೆ ಅದು ಸುಳ್ಳು, ಈ ರೀತಿಯ ಪ್ರಸ್ತಾವ ಇದುವರೆಗೂ ಬಂದಿಲ್ಲ, ದಿಚಕ್ರ ವಾಹನ ಸವಾರರಿಗೆ ಟೋಲ್ ವಿಧಿಸುವ ಯೋಜನೆಯಿಲ್ಲ’ ಎಂದು ಸ್ಪಷ್ಟನೆ ನೀಡಿದೆ.

 

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೂಡ ಕೆಲವು ಮಾಧ್ಯಮಗಳು ಸುಳ್ಳು ಸುದ್ದಿ ಹರಡುತ್ತಿವೆ ಖಂಡಿಸಿದ್ದು, ದ್ವಿಚಕ್ರ ವಾಹನಗಳಿಗೆ ಟೋಲ್ ವಿಧಿಸುವ ಯಾವುದೇ ರೀತಿಯ ಪ್ರಸ್ತಾವವಿಲ್ಲ. ಹಿಂದಿನಂತೆ ದ್ವಿಚಕ್ರ ವಾಹನ ಚಾಲಕರು ಉಚಿತಾಗಿ ಟೋಲ್ ಗೇಟ್ ದಾಟಬಹುದು. ಸತ್ಯ ತಿಳಿಯದೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಆರೋಗ್ಯಕರ ಪತ್ರಿಕೋದ್ಯಮ ಅಲ್ಲ, ಇದನ್ನು ನಾನು ಖಂಡಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ..

https://x.com/nitin_gadkari/status/1938158967978397755


Spread the love