ದ.ಕ. ಜಿಲ್ಲೆಗೆ 25,800 ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್- ಸಚಿವ ಕೋಟಾ ಶ್ರೀನಿವಾಸ ಪೂಜಾರಿ 

Spread the love

ದ.ಕ. ಜಿಲ್ಲೆಗೆ 25,800 ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್- ಸಚಿವ ಕೋಟಾ ಶ್ರೀನಿವಾಸ ಪೂಜಾರಿ 

ಮಂಗಳೂರು :  ಕೋವಿಡ್ ತ್ವರಿತ ಪರೀಕ್ಷಗೆಗಾಗಿ ರಾಜ್ಯ ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಗೆ 25,800 ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕಿಟ್‍ನ್ನು ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ವೆನ್ಲಾಕ್‍ನಲ್ಲಿ ಆರ್.ಟಿ.ಪಿ.ಸಿ.ಆರ್. ಲ್ಯಾಬ್ ತೆರೆದು ಉಚಿತ ಕೋವಿಡ್-19 ಟೆಸ್ಟ್ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಒಟ್ಟು 66 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ನಗರ ಪ್ರದೇಶಗಳಲ್ಲಿ 12 ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಜಿಲ್ಲೆಯಲ್ಲಿ 78 ಪಿ.ಹೆಚ್.ಸಿಗಳಿಂದ ಉಚಿತ ಕೋವಿಡ್ ಟೆಸ್ಟ್ ನಡೆಸಲಾಗುತ್ತದೆ. ಜಿಲ್ಲೆಯ 6 ಸಮುದಾಯ ಆಸ್ಪತ್ರೆ ಸೇರಿದಂತೆ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಆಸ್ಪತ್ರೆಯಲ್ಲಿ ಉಚಿತ ಕೋವಿಡ್ ಟೆಸ್ಟ್ ನಡೆಸಲಾಗುತ್ತದೆ. ಈಗಾಗಲೇ ರ್ಯಾಪಿಡ್ ಟೆಸ್ಟ್ ಕಿಟ್‍ನಿಂದ 8000ಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ 600 ಜನರಿಗೆ ಪಾಸಿಟಿವ್ ಬಂದಿವೆ.

ದ.ಕ.ದಲ್ಲಿ 8 ಮೆಡಿಕಲ್ ಕಾಲೇಜ್ ಸೇರಿ ಒಟ್ಟು 23 ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನೀಡಲಾಗುತ್ತಿದೆ. ಈ ಪೈಕಿ 9 ಆಸ್ಪತ್ರೆಗಳಲ್ಲಿ ಸರಕಾರ ನಿಗದಿಪಡಿಸಿದ ದರದಲ್ಲಿ ಆಯುಷ್‍ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಎಲ್ಲಾ ಆಸ್ಪತ್ರೆಗಳಿಗೆ ಪ್ರಸ್ತುತ ಚಿಕಿತ್ಸೆ ವೆಚ್ಚವನ್ನು ಜನರೇ ಭರಿಸಬೇಕುತ್ತದೆ. 20 ಹಾಸಿಗೆಗಿಂತ ಹೆಚ್ಚಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಆಯುಷ್‍ಮಾನ್ ಭಾರತ ಯೋಜನೆಯಡಿ ನೊಂದಾಯಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಒಂದು ವಾರದೊಳಗೆ ಆ ಪ್ರಕ್ರಿಯೆ ಮುಗಿಯಲಿದ್ದು, ಅಲ್ಲಿಯ ತನಕ ಸಾರ್ವಜನಿಕರು ಜಾಗೃತೆ ವಹಿಸಿ ಅಯುಷ್‍ಮಾನ್ ಭಾರತ ಯೋಜನೆ ಇರುವ ಆಸ್ಪತ್ರೆಗಳಲ್ಲಿ ದಾಖಲಾಗುವಂತೆ ಸಚಿವರು ಸೂಚಿಸಿದರು.

ಖಾಸಗಿ ಆಸ್ಪತ್ರೆಯಲ್ಲಿ ಸಾರ್ವಜನಿಕರು ಟೆಸ್ಟ್ ಮಾಡಿಸಿದಾಗ ಅವರಿಗೆ ಕೋವಿಡ್ ಪಾಸಿಟಿವ್ ಇದ್ದು ಸೋಂಕಿನ ಲಕ್ಷಣಗಳು ಇಲ್ಲದೆ ಇದ್ದರೆ, ಅವರನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳದೆ, ಹೋಂ ಕ್ವಾರಂಟೈನ್‍ಗೆ ಸಲಹೆ ನೀಡಬೇಕು. ಒಂದು ವೇಳೆ ಮನೆಯಲ್ಲಿ ಕ್ವಾರಂಟೈನ್ ಆಗಲು ವ್ಯವಸ್ಥೆ ಇಲ್ಲದಿದ್ದಲ್ಲಿ ಕೋವಿಡ್ ಕೇರ್ ಸೆಂಟರ್‍ಗೆ ಕಳುಹಿಸಲು ತಿಳಿಸಿದರು.

ಗ್ರಾಮೀಣ ಪ್ರದೇಶದ ಪಿ.ಎಸ್. ಗೆ 21 ಜನ ಲ್ಯಾಬ್ ಟೆಕ್ನೀಶನ್‍ನ್ನು ನೇಮಕಮಾಡಿಕೊಂಡು ಇನ್ನೂ ಕೆಲವೇ ದಿನದಲ್ಲಿ ಪಿ.ಎಸ್ ಗಳಿಗೆ ಕೋವಿಡ್ ಟೆಸ್ಟ್ ಮಾಡಲು ತರಬೇತಿ ನೀಡಿಲಾಗುವುದು. ಜಿಲ್ಲೆಯಲ್ಲಿ ವಿವಿಧ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ವೆಂಟಿಲೇಟರ್‍ಗಳು ಹಾಗೂ ಹೈ ಫೆÇ್ಲೀ ಆಕ್ಸಿಜನ್ ಬೆಡ್‍ಗಳ ವಿವರ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ವೆನ್ಲಾಕ್‍ನಲ್ಲಿ 48 ವೆಂಟಿಲೇಟರ್‍ಗಳು ಕಾರ್ಯನಿರ್ವಹಿಸುತ್ತಿದ್ದು, 38 ವೆಂಟಿಲೇಟರ್‍ಗಳ ಅಳವಡಿಕೆ ಬಾಕಿಯಿದ್ದು ಅವುಳನ್ನು ಅದಷ್ಟು ಬೇಗನೆ ಅಳವಡಿಸಲಾಗುವುದು ಹಾಗೂ ಇನ್ನೂ ಹೆಚ್ಚುವರಿಯಾಗಿ 15 ವೆಂಟಿಲೇಟರ್ ಅಳವಡಿಸಲು ಶೀಘ್ರ ಕ್ರಮ ಕೈಗೊಳ್ಳುವ ಜೊತೆಗೆ ಲೇಡಿಗೋಷನ್‍ನಲ್ಲಿ ಒಂದು ವೆಂಟಿಲೇಟರ್‍ವಿದ್ದು, ಹೆಚ್ಚುವರಿಯಾಗಿ ಇನ್ನೂ 5 ವೆಂಟಿಲೇಟರ್ ಅಳವಡಿಸಲಾಗುವುದು ಎಂದು ತಿಳಿಸಿದರು.

ವೆನ್ಲಾಕ್‍ನಲ್ಲಿ 210 ಹೈ ಫ್ಲೋ ಆಕ್ಸಿಜನ್ ಬೆಡ್ ಇದ್ದು, ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ 50 ಹೈ ಫೆÇ್ಲೀ ಆಕ್ಸಿಜನ್ ಬೆಡ್ ಹಾಗೂ ಸಮುದಾಯ ಆಸ್ಪತ್ರೆಗಳಲ್ಲಿ 30 ಹೈ ಫೆÇ್ಲೀ ಆಕ್ಸಿಜನ್ ಬೆಡ್‍ಗಳನ್ನು ಇನ್ನೂ ಒಂದು ವಾರದಲ್ಲಿ ಉಪಯೋಗಕ್ಕೆ ದೊರಕಲಿದೆ ಎಂದರು.

ಇದುವರೆಗೂ 160 ಕ್ಕೂ ಹೆಚ್ಚು ಮರಣ ಪ್ರಕರಣ ದಾಖಲಾಗಿದ್ದು, ಅದು ಕೋವಿಡ್‍ನಿಂದ ಆಗಿದೆಯೇ ಅಥವಾ ಬೇರೆ ರೋಗದಿಂದ ಆಗಿದೆಯೇ ಎನ್ನುವ ಕುರಿತು ವರದಿ ನೀಡಲು ಡಿ.ಎಚ್.ಒ ನೇತ್ರತ್ವದಲ್ಲಿ ತಜ್ಞರನ್ನು ಒಳಪಟ್ಟ ಸಮಿತಿಯನ್ನು ನೇಮಕ ಮಾಡಿ ವರದಿಯನ್ನು ಪಡೆಯಲಾಗುತ್ತದೆ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಶುಲ್ಕ ವಸೂಲಾತಿ ಮಾಡುತ್ತಿರುವ ಬಗ್ಗೆ ದೂರು ಬಂದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು ಆಸ್ಪತ್ರೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶೀನಿವಾಸ ಪೂಜಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love