ನಕಲಿ ಚಿನ್ನ ಗಿರವಿ ಇಟ್ಟು ವಂಚನೆ: ದೂರು ದಾಕಲು

Spread the love

ನಕಲಿ ಚಿನ್ನ ಗಿರವಿ ಇಟ್ಟು ವಂಚನೆ: ದೂರು ದಾಕಲು
ಉಡುಪಿ : ಉಡುಪಿ ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಗಿರವಿ ಇಟ್ಟು ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿಯಲ್ಲಿ ಚಿನ್ನದಂಗಡಿ ನಡೆಸುತ್ತಿದ್ದ ಕೆ.ರಾಘವೇಂದ್ರ ಶೇಟ್‌ ಎಸ್‌ಸಿಡಿಸಿಸಿ ಬ್ಯಾಂಕ್‌ನ ಉಡುಪಿ ಮುಖ್ಯ ಶಾಖೆಯಲ್ಲಿ ಆಗಾಗ ಚಿನ್ನದ ಒಡವೆಗಳನ್ನು ಗಿರವಿ ಇಟ್ಟು ಬ್ಯಾಂಕಿನಿಂದ ಸಾಲ ಪಡೆಯುತ್ತಿದ್ದರು ಎನ್ನಲಾಗಿದೆ. ಆದರೆ ಬ್ಯಾಂಕ್‌ ಸಿಬ್ಬಂದಿಗೆ ರಾಘವೇಂದ್ರ ಶೇಟ್‌ ಮತ್ತು ಬ್ಯಾಂಕ್‌ನ ಚಿನ್ನ ಪರಿಶೋಧಕ ಎನ್‌.ರಾಮದಾಸ ಶೇಟ್‌ರ ಬಗ್ಗೆ ಅನುಮಾನ ಬಂದು ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ಬ್ಯಾಂಕ್ ನವರು ಬೇರೆ ಚಿನ್ನ ಪರಿಶೋಧಕರನ್ನು ಕಳುಹಿಸಿ ಪರಿಶೀಲಿಸಿದಾಗ ಸಾಲಗಾರರ ಚಿನ್ನದಲ್ಲಿ ನಕಲಿ ಚಿನ್ನಗಳು ಸೇರಿರುವುದು ಕಂಡು ಬಂದಿದೆ. ಇವರು ಚಿನ್ನ ನಕಲಿ ಎಂದು ಗೊತ್ತಿದ್ದರೂ ಬ್ಯಾಂಕ್‌ಗೆ ಮೋಸ ಮಾಡುವ ಇರಾದೆಯಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ವಂಚನೆ, ಮೋಸ ಹಾಗೂ ನಂಬಿಕೆ ದ್ರೋಹ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.


Spread the love