ನಾಪತ್ತೆಯಾಗಿದ್ದ ಫಿಯೊನಾ ಸ್ವೀಡಲ್ ಶವವಾಗಿ ಪತ್ತೆ – ಸಹೋದರನಿಂದ ಕೊಲೆ ಶಂಕೆ

Spread the love

ನಾಪತ್ತೆಯಾಗಿದ್ದ ಫಿಯೊನಾ ಸ್ವೀಡಲ್ ಶವವಾಗಿ ಪತ್ತೆ – ಸಹೋದರನಿಂದ ಕೊಲೆ ಶಂಕೆ

ಮಂಗಳೂರು: ಕಳೆದ ಹಲವಾರು ದಿನಗಳಿಂದ ನಾಪತ್ತೆಯಾಗಿದ್ದ ಕೊಣಾಜೆ ಠಾಣೆ ವ್ಯಾಪ್ತಿಯ ಮುಡಿಪು ಬಳಿಯ ನಿವಾಸಿ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಶವವಾಗಿ ಶನಿವಾರ ಪತ್ತೆಯಾಗಿದ್ದಾಳೆ.

ಮೃತ ವಿದ್ಯಾರ್ಥಿನಿಯನ್ನು ಮುಡಿಪು ನಿವಾಸಿ ಫ್ರಾನ್ಸಿಸ್ ಕುಟಿನ್ಹಾ ಎಂಬವರ ಮಗಳು, ಮಂಗಳೂರಿನ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಫಿಯೊನಾ ಸ್ವೀಡಲ್ ಕುಟಿನ್ಹಾ (16) ಎಂದು ಗುರುತಿಸಲಾಗಿದೆ.

ಅಕ್ಟೋಬರ್ 8ರಂದು ದಸರಾ ರಜೆ ಹಿನ್ನೆಲೆಯಲ್ಲಿ ಬಾಲಕಿ, ಆಕೆಯ ಸಹೋದರ ಸ್ಯಾಮ್ಸನ್ ಕುಟಿನ್ಹಾ ಮತ್ತು ತಂದೆ ಮನೆಯಲ್ಲಿದ್ದರು. ಮಕ್ಕಳಿಗೆ ತಿಂಡಿ ತರಲೆಂದು ತಂದೆ ಮನೆಯಿಂದ ಹೊರಹೋಗಿದ್ದು ಮಧ್ಯಾಹ್ನ ಹಿಂದಿರುಗಿದಾಗ ಮಗಳು ಮನೆಯಲ್ಲಿರಲಿಲ್ಲ. ಈ ಬಗ್ಗೆ ಮಗನನ್ನು ಕೇಳಿದಾಗ ಮಂಗಳೂರಿಗೆ ಹೋಗುತ್ತೇನೆ ಎಂದು ಹೋಗಿರುವುದಾಗಿ ತಿಳಿಸಿದ್ದ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಾಲಕಿಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬಾಲಕಿಯ ಸಹೋದರನನ್ನು ಹೆಚ್ಚಿನ ರೀತಿಯಲ್ಲಿ ಪೊಲೀಸರು ವಿಚಾರಣೆ ನಡೆಸಿದಾಗ ಫಿಯೋನಾಳನ್ನು ಕೊಂದು ಆಕೆಯ ಶವವನ್ನು ಮನೆಯ ಸಮೀಪ ಪೊದೆಗಳಲ್ಲಿ ಎಸೆಯುವುದನ್ನು ಸ್ಯಾಮ್ಸನ್ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಶೋಧದ ಸಮಯದಲ್ಲಿ, ಪೊಲೀಸರು ಅಸ್ಥಿಪಂಜರದ ಅವಶೇಷಗಳನ್ನು ಪತ್ತೆ ಹಚ್ಚಿದ್ದು ಮತ್ತು ಈಗ ವಿಧಿವಿಜ್ಞಾನ ತಂಡದ ವರದಿಗಾಗಿ ಕಾಯುತ್ತಿದ್ದಾರೆ.


Spread the love