ವೈರಲಾದ ಕರ್ತವ್ಯ ನಿರತ ತುಂಬು ಗರ್ಭಿಣಿ ಪೊಲೀಸ್ ಫೋಟೊ ; ಕ್ಷಮೆ ಕೋರಿದ ಕಮೀಷನರ್ ಡಾ.ಪಿ.ಎಸ್ ಹರ್ಷ

Spread the love

ವೈರಲಾದ ಕರ್ತವ್ಯ ನಿರತ ತುಂಬು ಗರ್ಭಿಣಿ ಪೊಲೀಸ್ ಫೋಟೊ ; ಕ್ಷಮೆ ಕೋರಿದ ಕಮೀಷನರ್ ಡಾ.ಪಿ.ಎಸ್ ಹರ್ಷ

ಮಂಗಳೂರು; ಉಪಮುಖ್ಯಮಂತ್ರಿಯವರ ಆಗಮನ ಹಿನ್ನೆಲೆಯಲ್ಲಿ ಮುಲ್ಕಿ ಬಸ್ ನಿಲ್ದಾಣದಲ್ಲಿ ತುಂಬು ಗರ್ಭಿಣಿ ಮಹಿಳಾ ಪೊಲೀಸ್ ಒರ್ವರು ಕರ್ತವ್ಯದಲ್ಲಿ ತೊಡಗಿದ್ದ ಕುರಿತ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಕುರಿತು ಮಂಗಳೂರು ನಗರ ಪೊಲೀಸ್ ಕಮೀಷನರ್ ಡಾ.ಪಿ.ಎಸ್ ಹರ್ಷ ಅವರು ನೋವು ವ್ಯಕ್ತಪಡಿಸಿ, ಕ್ಷಮೆಯಾಚಿಸಿದ್ದಾರೆ.

ಶುಕ್ರವಾರ ರಾಜ್ಯದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಮಂಗಳೂರಿನಿಂದ ಉಡುಪಿಗೆ ಆಗಮಿಸುವ ಸಂದರ್ಭದಲ್ಲಿ ಮುಲ್ಕಿ ಪೊಲೀಸ್ ಠಾಣೆಯ ತುಂಬು ಗರ್ಭಿಣಿ ಮಹಿಳಾ ಪೊಲೀಸ್ ಒಬ್ಬರು ಸುಮಾರು 3 ಗಂಟೆ ಕರ್ತವ್ಯ ನಿರ್ವಹಿಸಿದ್ದರು ಎನ್ನಲಾಗಿದೆ.

ಕರ್ತವ್ಯ ನಿರತ ಗರ್ಭಿಣಿ ಮಹಿಳಾ ಪೊಲೀಸರ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಮಾಹಿತಿ ತಿಳಿದ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಡಾ.ಪಿ.ಎಸ್ ಹರ್ಷ ಅವರು ನೋವು ವ್ಯಕ್ತಪಡಿಸಿ ಕ್ಷಮೆಯಾಚಿಸಿದ್ದು ಮಾತ್ರವಲ್ಲದೇ ತಕ್ಷಣದಿಂದಾಲೇ ಆ ಗರ್ಭಿಣಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ರಜೆಯಲ್ಲಿ ಕಳುಹಿಸಿದ್ದಾರೆ ಹಾಗೂ ಈ ಪ್ರಕರಣದ ಕುರಿತು ಮುಲ್ಕಿ ಠಾಣಾಧಿಕಾರಿ ಅವರು ತಕ್ಷಣವೇ ವರದಿ ನೋಡುವಂತೆ ಸೂಚನೆಯನ್ನು ನೀಡಿದ್ದಾರೆ


Spread the love