ನೀತಿ ಸಂಹಿತೆ ಉಲ್ಲಂಘನೆ; ಬಿಜೆಪಿಯ ಗೀತಾಂಜಲಿ ಸುವರ್ಣ, ಕಾಂಗ್ರೆಸಿನ ನವೀನ್ ಚಂದ್ರ ವಿರುದ್ದ ಪ್ರಕರಣ ದಾಖಲು

Spread the love

ನೀತಿ ಸಂಹಿತೆ ಉಲ್ಲಂಘನೆ; ಬಿಜೆಪಿಯ ಗೀತಾಂಜಲಿ ಸುವರ್ಣ, ಕಾಂಗ್ರೆಸಿನ ನವೀನ್ ಚಂದ್ರ ವಿರುದ್ದ ಪ್ರಕರಣ ದಾಖಲು

ಉಡುಪಿ: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಿಜೆಪಿಯ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಮತ್ತು ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಎಂಬವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ ಸಂಬಂಧ ಕಾಪು ಮತ್ತು ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

ಮೊದಲ ಪ್ರಕರಣದಲ್ಲಿ ರವೀಂದ್ರ ಉಪಾಧ್ಯಾಯ ಕಾರ್ಯನಿರ್ವಹಣಾ ದಂಢಾದಿಕಾರಿ, ಪ್ಲಾಯಿಂಗ್ಸ್ಕ್ವಾಡ್-1, 121 ಕಾಪು ವಿಧಾನಸಭಾ ಕ್ಷೇತ್ರ ಇವರು ಎಪ್ರಿಲ್ 4 ಕರ್ತವ್ಯದಲ್ಲಿರುವಾಗ ಕಟಪಾಡಿಯ ಜೆ.ಸಿ.ಭವನದಲ್ಲಿ ಗೀತಾಂಜಲಿ ಸುವರ್ಣ,ಜಿಲ್ಲಾ ಪಂಚಾಯತ್ ಸದಸ್ಯರು ಇವರ ನೇತೃತ್ವದಲ್ಲಿ ನಡೆದ ಬಿ.ಜೆ.ಪಿ. ಪಕ್ಷದವರ ಮಹಿಳಾ ಸಭೆಯಲ್ಲಿ ಹಾಜರಿದ್ದವರಿಗೆ 01:20 ಗಂಟೆಗೆ ಚುನಾವಣೆ ನೀತಿ ಸಂಹಿತೆ ವಿರುದ್ಧವಾಗಿ ಫಲಹಾರ ನೀಡಿ ಚುನಾವಣೆ ನೀತಿ ಸಂಹಿತೆ ಉಲಂಘಿಸಿದ್ದು ಅದರಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎರಡನೇ ಪ್ರಕರಣದಲ್ಲಿ ಎಪ್ರೀಲ್ 3 ರಂದು ಬೆಳಪು ಗ್ರಾಮದ ಶಿವಾಲಯದಲ್ಲಿ ಭಾರತೀಯ ಕಾಂಗ್ರೆಸ್ ಪಕ್ಷದ ಗ್ರಾಮ ಮಟ್ಟದ ಸಭೆಯಲ್ಲಿ ನವೀನ್ಚಂದ್ರ ಜೆ ಶೆಟ್ಟಿ , ಅಧ್ಯಕ್ಷರು, ಕಾಪು ಬ್ಲಾಕ್ಕಾಂಗ್ರೆಸ್ ಸಮಿತಿ ಇವರು ಮಧ್ಯಾಹ್ನ 2:00 ಗಂಟೆಯಿಂದ 03:00 ಗಂಟೆಯ ಅವಧಿಗೆ ಕಾಪು ವಿಧಾನ ಸಭಾ ಕ್ಷೇತ್ರದ ಚುನಾವಣಾ ಅಧಿಕಾರಿಯವರಿಂದ ಅನುಮತಿ ಪಡೆದಿದ್ದು ಸಭೆ ನಡೆಯುವಾಗ ಸುಮಾರು 100 ಜನರಿಗೆ ಊಟ ಬಡಿಸಿರುವುದನ್ನು ವಿಡೀಯೋ ಸರ್ವೆಲೆನ್ಸ್ ತಂಡದ ರಘುನಾಥ ಎಸ್ರವರು ವಿಡೀಯೋ ಚಿತ್ರೀಕರಣ ನಡೆಸಿರುವುದಾಗಿ, ಸಭೆಯ ಸಂಘಟಕರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಅನಿಲ್ಕುಮಾರ್, ಫ್ಲೈಯಿಂಗ್ಸ್ಕ್ವಾಡ್ತಂಡ- 1, ಕಾಪು ವಿಧಾನಸಭಾ ಕ್ಷೇತ್ರ ಇವರು ನೀಡಿದ ದೂರಿನಂತೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


Spread the love