ನ್ಯೂ ಶೈನ್ ಎಂಟರ್ ಪ್ರೈಸಸ್ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಮೋಸ – ಇಬ್ಬರ ಬಂಧನ

Spread the love

ನ್ಯೂ ಶೈನ್ ಎಂಟರ್ ಪ್ರೈಸಸ್ ಲಕ್ಕಿ ಸ್ಕೀಮ್ ಹೆಸರಿನಲ್ಲಿ ಮೋಸ ಇಬ್ಬರ ಬಂಧನ

ಮಂಗಳೂರು: ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ ನಲ್ಲಿ 9 ತಿಂಗಳು 1000/- ಪಾವತಿಸಿ ಕೊನೆಯ 2 ತಿಂಗಳು 1500/- ಹೀಗೆ ಒಟ್ಟು 11 ತಿಂಗಳ ಅವಧಿಗೆ ದುಡ್ಡನ್ನು ಸ್ವೀಕರಿಸಿ ಈ ಮಧ್ಯೆ 9 ತಿಂಗಳು 1000/- ಪಾವತಿಸಿ ಕೊನೆಯ 2 ತಿಂಗಳು 1500/- ಹೀಗೆ ಒಟ್ಟು 11 ತಿಂಗಳ ಲಕ್ಕಿ ಸ್ಕೀಮ್ ನ ಹೆಸರಿನಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಪ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ಲಕ್ಕಿ ಡ್ರಾ ನಲ್ಲಿ ಸಿಕ್ಕಿದವರಿಗೆ ಇವುಗಳನ್ನು ಕೊಡುವುದಾಗಿ ತಿಳಿಸಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಸುಮಾರು 4 ಕೋಟಿ 20 ಲಕ್ಷಕ್ಕೂ ಮೀರಿದ 3 ಸಾವಿರ ಜನರಿಗೆ ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಸರಿಯಾದ ಬಹುಮಾನಗಳನ್ನು ನೀಡದೇ ಮತ್ತು ಎಲ್ಲರಿಗೂ ಹಣವನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾ ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಆಯಿಷಾ ಕಟ್ಟಡದಲ್ಲಿರುವ ನ್ಯೂ ಶೈನ್ ಎಂಟರ್ ಪ್ರೈಸಸ್ ಕಛೇರಿಯನ್ನು ಏಕಾಏಕಿಯಾಗಿ ಬಂದ್ ಮಾಡಿ ಸಾರ್ವಜನಿಕರಿಗೆ ಆಸೆ ಹುಟ್ಟಿಸಿ ವಂಚಿಸಿದ್ದು ಆರೋಪಿಗಳಾದ ಕಾಟಿಪಳ್ಳ ನಿವಾಸಿ ಅಹಮ್ಮದ್ ಖುರೇಶ್ (34) ಮತ್ತು ನಝೀರ್ @ ನಾಸೀರ್ (39) ರವರ ವಿರುದ್ಧ ಶ್ರೀ ಶಿವ ಪ್ರಸಾದ್, ಪ್ರಾಯ 38 ವರ್ಷ, ತಂದೆ: ಆನಂದ ಸಾಲ್ಯಾನ್, ವಾಸ: ಮನೆ ನಂಬ್ರ 2/53/6, ಚಂದ್ರವತಿ ನಿಲಯ, ಪೊನ್ನಗಿರಿ ರಸ್ತೆ, ಸೂರಿಂಜೆ ಗ್ರಾಮ, ಸುರತ್ಕಲ್, ಮಂಗಳೂರು ತಾಲೂಕು, ದ.ಕ ಜಿಲ್ಲೆ ರವರು ದೂರು ನೀಡಿದ್ದು ಇದೊಂದು ಅನಿಯಂತ್ರಿತ ಠೇವಣಿ ಯೋಜನೆ ಆಗಿದ್ದು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕರಿಂದ ನ್ಯೂ ಶೈನ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ಸುಮಾರು 4 ಕೋಟಿ 20 ಲಕ್ಷಕ್ಕಿಂತ ಅಧಿಕ ಹಣ ಸಂಗ್ರಹಣೆ ಮಾಡಿ ವಂಚನೆಗೈದು, ನಂಬಿಕೆ ದ್ರೋಹ, ವಂಚನೆಗೈದ ಬಗ್ಗೆ ದಿನಾಂಕ: 16.08.2025 ರಂದು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ 107/2025 ಕಲಂ 316(2), 318(4) ಬಿ.ಎನ್.ಎಸ್ ಮತ್ತು ಕಲಂ 21 ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆ (BUDS Act) ರಂತೆ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಅಹಮ್ಮದ್ ಖುರೇಶಿ ಹಾಗೂ ನಜೀರ್ @ ನಾಸೀರ್ ರವರನ್ನು ದಿನಾಂಕ: 19.08.2025 ರಂದು ದಸ್ತಗಿರಿ ಮಾಡಿ ದಿನಾಂಕ:19.08.2025 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆಯ ಸಂಬಂಧ ಆರೋಪಿತರನ್ನು ದಿನಾಂಕ: 25.08.2025 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದು ತನಿಖೆಯನ್ನು ಮುಂದುವರೆಸಿರುವುದಾಗಿದೆ. ಆರೋಪಿ ಅಹಮ್ಮದ್ ಖುರೇಶಿಯ ಹೇಳಿಕೆಯಲ್ಲಿ ವಫಾ ಎಂಟರ್ ಪ್ರೈಸಸ್ ಲಕ್ಕಿ ಸ್ಕೀಂ ನ ಅಬ್ದುಲ್ ವಹಾಬ್ ಮತ್ತು ಬಶೀರ್ ಇವರೊಂದಿಗೆ ಸೇರಿ ಈ ಹಿಂದೆ ನಡೆಸಿರುವ ಲಕ್ಕಿ ಸ್ಕೀಮ್ ನ ಯೋಜನೆಗಳ ಬಗ್ಗೆ ಕೂಡ ತನಿಖೆಯನ್ನು ಮಾಡಲಾಗುತ್ತಿದೆ.

ಆರೋಪಿತರ ಪೈಕಿ ಅಹಮ್ಮದ್ ಖುರೇಶಿ ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕೊಲೆಯತ್ನ ಪ್ರಕರಣಗಳು, ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸರಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ 1 ಪ್ರಕರಣ ದಾಖಲಾಗಿರುತ್ತದೆ. ಆರೋಪಿ ನಝೀರ್ ಯಾನೇ ನಾಸೀರ್ ಈತನ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ ದಾಖಲಾಗಿರುತ್ತದೆ.

ಆರೋಪಿತರು ಆಯಿಷಾ ಕಾಂಪ್ಲೆಕ್ಸ್ ನ ಕಛೇರಿ, ಬಿ.ಎಂ.ಆರ್ ಕಾಂಪ್ಲೆಕ್ಸ್ ನ ಕಛೇರಿ ಹಾಗೂ ಶೈನ್ ಮಾರ್ಟ್ ಕಛೇರಿಯಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್ ಗಳು, ಡಿವಿಆರ್ ಗಳನ್ನು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಮನೆ, ಕಛೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

ಈ ಕಾಯ್ದೆಯಂತೆ ಆರೋಪಿತರು ಲಕ್ಕಿ ಸ್ಕೀಮ್ ನ ಹಣದಲ್ಲಿ ಖರೀದಿಸಿದ ಮನೆ, ನಿವೇಶನ, ಪ್ಯ್ಲಾಟ್, ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ಮಾನ್ಯ ಜಿಲ್ಲಾಧಿಕಾರಿಯವರಿಗೆ, ಉಪ ವಿಭಾಗ ದಂಡಾಧಿಕಾರಿಯವರಿಗೆ, ಕಂದಾಯ ಇಲಾಖೆಯವರಿಗೆ ಪತ್ರ ವ್ಯವಹಾರವನ್ನು ಮಾಡಲಾಗಿರುತ್ತದೆ.

ಸದ್ರಿ ಲಕ್ಕಿ ಸ್ಕೀಮ್ ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟ್ ರವರುಗಳು ಸಂಬಂಧಿಸಿದ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆಯನ್ನು ನೀಡುವುದು.

ಸದ್ರಿ ಪ್ರಕರಣದ ಆರೋಪಿತರ ಪತ್ತೆಯ ಬಗ್ಗೆ ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಪ್ರಮೋದ್ ಕುಮಾರ್ ಪಿ ರವರ ನೇತೃತ್ವದಲ್ಲಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಘುನಾಯಕ, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್.ಐ ರವರಾದ ರಾಧಾಕೃಷ್ಣ, ಸುಕೇತ್ ಜಿ ಕೋಟ್ಯಾನ್ ಹಾಗೂ ಸಿಬ್ಬಂದಿಯವರಾದ ಅಣ್ಣಪ್ಪ, ಉಮೇಶ್, ನಾಗರಾಜ್, ಸತೀಶ್ ಸತ್ತಿಗೇರಿ, ಮಹೇಶ್ ಎನ್, ಶಫೀವುಲ್ಲಾ ಸನತಾಯಿ, ದೇವರಾಜ್, ಸುನೀಲ್ ಕುಸನಾಳ ರವರು ಆರೋಪಿ ಪತ್ತೆಯ ಬಗ್ಗೆ ಭಾಗವಹಿಸಿರುತ್ತಾರೆ.


Spread the love
Subscribe
Notify of

0 Comments
Inline Feedbacks
View all comments