ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಚನ ಗಾಯನ ಸ್ಪರ್ಧೆ

Spread the love

ಪದವಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಚನ ಗಾಯನ ಸ್ಪರ್ಧೆ

ಕರ್ನಾಟಕ ರಾಜ್ಯ ಸರ್ಕಾರವು ʼಸಾಂಸ್ಕೃತಿಕ ನಾಯಕ ಬಸವಣ್ಣʼ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಜನಮನದಲ್ಲಿ ಬಿತ್ತುವ, ಜನರ ಮನಸ್ಸುಗಳನ್ನು ಕಟ್ಟುವ ಜೊತೆಗೆ ಪರಸ್ಪರ ಭಾಂದವ್ಯದ ಬೆಸುಗೆ ಹಾಕುವ ಸದುದ್ದೇಶದಿಂದ ಲಿಂಗಾಯತ ಮಠಾದೀಶರ ಒಕ್ಕೂಟವು ಕರ್ನಾಟಕ ರಾಜ್ಯದಾದ್ಯಂತ ಸೆಪ್ಟೆಂಬರ್‌ 1 ರಿಂದ ಅಕ್ಟೋಬರ್‌ 5 ರ ತನಕ ‘ಬಸವ ಸಂಸ್ಕೃತಿ ಅಭಿಯಾನ’ವನ್ನು ಹಮ್ಮಿಕೊಂಡಿದೆ.

ಇದರ ಭಾಗವಾಗಿ ದ.ಕ. ಜಿಲ್ಲಾ ಸಹಮತ ವೇದಿಕೆಯ ಆಶ್ರಯದಲ್ಲಿ ಸೆಪ್ಟೆಂಬರ್‌ 19ರಂದು ಮಂಗಳೂರಿನ ಉರ್ವಸ್ಟೋರ್‌ ಬಳಿಯ ತುಳು ಭವನದಲ್ಲಿ ಅಭಿಯಾನದ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಪದವಿ ವಿದ್ಯಾರ್ಥಿಗಳಿಗೆ ದ.ಕ. ಜಿಲ್ಲಾ ಮಟ್ಟದ ಸಮೂಹ ವಚನ ಗಾಯನ ಸ್ಪರ್ಧೆ ಏರ್ಪಡಿಲಾಗಿದೆ.

ಸೆಪ್ಟೆಂಬರ್‌ 16 ರಂದು ಬೆಳಿಗ್ಗೆ 9.30 ರಿಂದ ಮಂಗಳೂರಿನ ಬಲ್ಮಠ ಡಾ. ಬಿ.ಆರ್.‌ ಅಂಬೇಡ್ಕರ್‌ ವೃತ್ತದ ಬಳಿಯಿರುವ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಈ ಸ್ಪರ್ಧೆ ನಡೆಯಲಿದೆ. ಪ್ರಥಮ, ದ್ವಿತೀಯ ಮತ್ತು ತೃತೀಯ ನಗದು ಬಹುಮಾನ ಕ್ರಮವಾಗಿ ರೂ. 3000, ರೂ. 2000, ರೂ. 1000 ನಿಗದಿಪಡಿಸಲಾಗಿದೆ. ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗುವುದು.

ಆಸಕ್ತರು ಹೆಸರು ನೋಂದಾವಣೆ ಮತ್ತು ಮಾಹಿತಿಗಳಿಗಾಗಿ ಸೆ. 14ರ ಒಳಗಾಗಿ ದೂರವಾಣಿ ಸಂಖ್ಯೆ: 9980951074 (ಪ್ರವೀಣ್‌ ಬಿ.ಎಂ.) 9448911777 (ಮೀನಾಕ್ಷಿ ರಾಮಚಂದ್ರ), 9482969468 (ಸುಮಾ ಮಾನ್ವಿ) ಇವರನ್ನು ಸಂಪರ್ಕಿಸಬಹುದು ಎಂದು ಅಭಿಯಾನದ ಜಿಲ್ಲಾ ಸಂಚಾಲಕ ಉಮರ್‌ ಯು.ಹೆಚ್.‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments