ಪಿಲಿಕುಳ ಮೃಗಾಲಯಕ್ಕೆ ಆಧುನಿಕ ಬ್ಯಾಟರಿ ಚಾಲಿತ ವಾಹನಗಳು 

Spread the love

ಪಿಲಿಕುಳ ಮೃಗಾಲಯಕ್ಕೆ ಆಧುನಿಕ ಬ್ಯಾಟರಿ ಚಾಲಿತ ವಾಹನಗಳು 

ಮಂಗಳೂರು : ಪಿಲಿಕುಳ ಮೃಗಾಲಯದಲ್ಲಿ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು ಸುಮಾರು ಎರಡು ಕಿ.ಮೀ. ದೂರ ಕ್ರಮಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆಸಕ್ತ ವೀಕ್ಷಕರಿಗೆ ಆರಾಮವಾಗಿ ಕುಳಿತುಕೊಂಡು ಪ್ರಯಾಣಿಸಲು ನಾಲ್ಕು ಗಾಲಿಯ ಆಕರ್ಷಕ ಪರಿಸರ ಸ್ನೇಹಿ ಬ್ಯಾಟರಿ ಚಾಲಿತ ವಾಹನಗಳು ಜೈವಿಕ ಉದ್ಯಾನವನಕ್ಕೆ ಆಗಮಿಸಿವೆ.

ಈ ಹಿಂದೆ ಇದ್ದ ಮೂರು ಗಾಲಿಗಳ ಹಳೇ ವಾಹನಗಳ ಬದಲಿಗೆ ಹೊಸ ವಿನ್ಯಾಸದ ಆರಾಮವಾಗಿ ಸಂಚರಿಸುವ ವಾಹನಗಳನ್ನು ಅಳವಡಿಸಲಾಗಿದೆ, ಈಗಾಗಲೆ 4 ರಿಂದ 10 ಆಸನಗಳ ನಾಲ್ಕು ವಾಹನಗಳು ಆಗಮಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಇನ್ನಷ್ಟು ವಾಹನಗಳು ಸೇರಿಕೊಳ್ಳಲಿವೆ. ವಾಹನಗಳನ್ನು ನಡೆಸಲು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡಲಾಗಿದೆ. ಎಂದು ಪಿಲಿಕುಳ ಜೈವಿಕ ಉದ್ಯಾನವನದ ಪ್ರಕಟಣೆ ತಿಳಿಸಿದೆ.


Spread the love