ನೀರು ಮರುಪೂರಣಕ್ಕೆ ಕರಾವಳಿಯಲ್ಲಿ ಉತ್ತಮ ಅವಕಾಶ: ಜಿ.ಪಂ. ಸಿಇಓ

Spread the love

ನೀರು ಮರುಪೂರಣಕ್ಕೆ ಕರಾವಳಿಯಲ್ಲಿ ಉತ್ತಮ ಅವಕಾಶ: ಜಿ.ಪಂ. ಸಿಇಓ

ಮಂಗಳೂರು : ಕರಾವಳಿಯಲ್ಲಿ ಮಳೆ ನೀರನ್ನು ಸಂಗ್ರಹಿಸಿ, ಮರುಪೂರಣ ಮಾಡಲು ಉತ್ತಮ ಅವಕಾಶಗಳಿದ್ದು, ಇದು ಯಶಸ್ವಿಯಾದರೆ ಇಲ್ಲಿ ಕುಡಿಯುವ ನೀರಿನ ಸಮಸ್ಯೆಯೇ ಉದ್ಭವಿಸುವುದಿಲ್ಲ ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಂ.ಆರ್.ರವಿ ಅಭಿಪ್ರಾಯ ಪಟ್ಟರು.

ನಗರದ ಜಿಲ್ಲಾ ಪಂಚಾಯತ್‍ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಮಳೆ ನೀರಿನ ಸಂಗ್ರಹಣೆ ಮತ್ತು ಮರು ಬಳಕೆ, ಅಂತರ್ಜಲ ಸಂರಕ್ಷಣೆ, ಕಲುಷಿತತೆ ತಡೆಗಟ್ಟುವಿಕೆ, ತೆರೆ/ ತ್ಯಕ್ತ ಕೋಳವೆ ಬಾವಿಗಳಲ್ಲಿ ಚಿಕ್ಕ ಮಕ್ಕಳು ಬೀಳದಂತೆ ನಿಯಂತ್ರಿಸುವ ಹಾಗೂ ಅಂತರ್ಜಲ ಅಭಿವೃದ್ಧಿ, ಸದ್ಭಳಕೆ ಕುರಿತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ದಿನದ ಕಾರ್ಯಗಾರವನ್ನು ಉದ್ಘಾಟಿಸಿ ಮಾತ್ತಾನಾಡಿದರು.

ದ.ಕ ಜಿಲ್ಲೆ ಹೇರಳವಾಗಿ ಮಳೆ ಬೀಳುವಂತಹ ಪ್ರದೇಶವಾಗಿದೆ. ಆದರೆ ಮಳೆನೀರನ್ನು ಹಿಡಿದಿಡುವುದು ಸವಾಲಾಗಿದೆ. ಕಾಲುವೆ, ತೋಡುಗಳ ಮೂಖಾಂತರ ನೀರನ್ನು ಶೇಖರಿಸಿಡುವಂತಹ ಪ್ರಯತ್ನ ಮಾಡಬಹುದು. ಈಗಾಗಲೇ ಕಿಂಡಿ ಅಣೆಕಟ್ಟು ಮೂಲಕ ನೀರಿ ಸಂಗ್ರಹಿಡುವ ಪ್ರಯತ್ನ ಮಾಡಲಾಗಿದೆ. ಇದರಿಂದ 20-25 ಎಕರೆ ಜಮೀನಿನಲ್ಲಿ ಸುತ್ತ ಮುತ್ತ ಬಾವಿ, ಕೆರೆಗಳಲ್ಲಿ ನೀರು ನಳನಳಿಸುತ್ತಿದೆ. ಅಂತರ್ಜಲದ ಬಳಕೆ, ಪೂರೈಕೆ ವೈಜ್ಞಾನಿಕವಾಗಿ, ತಾರ್ಕಿಕವಾಗಿ ಸರಿಯಾದ ವಿಧಾನವನ್ನು ಬಳಸುತ್ತಿಲ್ಲ. ಒಂದು ಕೊಳವೆ ಬಾವಿ ನಿಷ್ಕ್ರೀಯವಾದಾಗ, ಇನ್ನೊಂದು ಕೊಳವೆ ಬಾವಿ ತೆಗೆಯಲು ಪ್ರಯತ್ತಿಸುತ್ತಾರೆ. ಕೊಳವೆ ಬಾವಿಯ ನಿಷ್ಕ್ರಿಯಕ್ಕೆ ಏನು ಕಾರಣ ಎಂದು ತಿಳಿಯುವ ಪ್ರಯತ್ನವನ್ನು ನಾವು ಮಾಡುವುದಿಲ್ಲ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದರು.

ಜಿಲ್ಲೆಯಲ್ಲಿ ಸರ್ಕಾರಿ ಕೊಳವೆ ಬಾವಿಗಳು 2836 ಇದ್ದು, 4 ಪಟ್ಟು ಜಾಸ್ತಿ ಖಾಸಗಿ ಕೊಳವೆ ಬಾವಿಗಳು ಇದೆ. ಅಂತರ್ಜಲ ಬಳಕೆಯಲ್ಲಿ ವಿವೇಚನೆ ರಹಿತ ಬಳಕೆಯಾಗಿದೆ. 2010ರಲ್ಲಿ ಬಂಟ್ವಾಳದಲ್ಲಿ ಅಂತರ್ಜಲದ ಮಟ್ಟವು 8.52 ಮೀಟರ್, ಬೆಳ್ತಂಗಡಿಯಲ್ಲಿ 6.92 ಮೀಟರ್, ಮಂಗಳೂರು 10.01 ಮೀಟರ್ , ಪತ್ತೂರು 5.70 ಮೀಟರ್, ಸಳ್ಯ 9.12 ಮೀಟರ್ ಆಗಿದ್ದು, 2016ರಲ್ಲಿ ಬಂಟ್ವಾಳದಲ್ಲಿ ಅಂತರ್ಜಲದ ಮಟ್ಟವು 9.53 ಮೀಟರ್,ಬೆಳ್ತಂಗಡಿಯಲ್ಲಿ 6.67ಮೀಟರ್, ಮಂಗಳೂರು 12.96 ಮೀಟರ್ , ಪತ್ತೂರು 7.12 ಮೀಟರ್, ಸಳ್ಯ 10.68 ಮೀಟರ್ ನಷ್ಟು ವ್ಯತ್ಯಾಸವಾಗಿರುತ್ತದೆ. ರಾಜ್ಯ ಸರ್ಕಾರ ಮಾಹಿತಿ ಪ್ರಕಾರ 43 ತಾಲೂಕು ಅಂತರ್ಜಲವನ್ನು ಅತಿಯಾವಾಗಿ ಬಳಕೆ ಮಾಡಿದೆ. ಆದರೆ ಇದರಲ್ಲಿ ಜಿಲ್ಲೆಯ ಯಾವುದೇ ತಾಲೂಕು ಸೇರಿಲ್ಲ ಆದರೆ ಪುತ್ತೂರು ಅಂತರ್ಜಲವನ್ನು 80-70 % ಅತೀಯವಾಗಿ ಬಳಕೆಯಾಗಿವೆ. ಪುತ್ತೂರು ಅಪಾಯಕಾರಿವಲಯ ಎಂದು ಪರಿಗಣಿಸಬಹುದು. ಮುಂದಿನ ದಿನಗಳಲ್ಲಿ 100 % ಅಂತರ್ಜಲವನ್ನು ಹೆಚ್ಚು ಬಳಸಿಕೊಂಡಲ್ಲಿ ರಾಜ್ಯದ ಅಂತರ್ಜಲವನ್ನು ಅತಿಯಾಗಿ ಬಳಸಿಕೊಡಿರುವ ಪಟ್ಟಿಯಲ್ಲಿ ಸೇರಿ ಕೊಳ್ಳುವ ಸಾಧ್ಯತೆ ಇದೆ ಎಂದು ಡಾ. ರವಿ ವಿವರಿಸಿದರು.

ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಹೆಚ್.ಆರ್. ನಾಯಕ್ ಮಾತನಾಡಿ, ಕೋಲಾರದಂತಹ ಪ್ರದೇಶದಲ್ಲಿ 1200 ಅಡಿಯಲ್ಲಿಯೂ ನೀರು ಸಿಗುತಿಲ್ಲ. ನೀರಿನ ಉಪಯೋಗ ಜಾಸ್ತಿಯಾಗುತ್ತಿದೆ ಆದರೆ ಮರು ಪೂರ್ಣವಾಗುತ್ತಿಲ್ಲ, ಅಂತರ್ಜಲವು ವೃದ್ಧಿಯಾಗುತ್ತಿಲ್ಲ.ನೀರು ಮಣ್ಣಿನ ಕಣಗಳ ಮೂಲಕ ಅಂತರ್ಜಲ ಸೇರುವುದರಿಂದ ವಿಷಾಂಶಗಳು ನಾಶವಾಗುವುದರಿಂದ, ಅಂತರ್ಜಲವು ಪರಿಶುಧ್ಧ ನೀರು ಆಗಿರತ್ತದೆ. ಇಂದು ಸಾಕಷ್ಟು ಪ್ರಾಮಾಣದಲ್ಲಿ ರಾಸಾಯನಿಕ ಪದಾರ್ಥಗಳು ಅಂತರ್ಜಲವನ್ನು ಸೇರುವುದರಿಂದ ಅಂತರ್ಜಲವು ವಿಷಾಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪನಿರ್ದೇಶಕಿ ಡಾ.ಸುಮಿತ್ರ ಎಸ್, ಇಲಾಖೆಯ ನಿವೃತ್ತ ಉಪನೀರ್ದೇಶಕ ಡಾ.ಬಿ.ಎಂ. ರವೀಂದ್ರ, ಉಡುಪಿ, ಜಿಲ್ಲಾ ಅಂತರ್ಜಲ ಕಛೇರಿ ಪ್ರಭಾರ ಹಿರಿಯ ಭೂವಿಜ್ಞಾನಿ, ಡಾ.ಎಂ. ದಿನಕರ ಶೆಟ್ಟಿ ಉಪಸ್ಥಿತರಿದ್ದರು. ಅಂತರ್ಜಲ ಇಲಾಖೆ ಉಪನಿರ್ದೇಶಕಿ ಜಾನಕಿ ಸ್ವಾಗತಿಸಿದರು.

 


Spread the love