Spread the love
ಪುತ್ತೂರು: ಕಾಣೆಯಾಗಿದ್ದ ಯುವಕನ ಮೃತದೇಹ ಪತ್ತೆ
ಪುತ್ತೂರು: ರವಿವಾರ (ನ.30) ನಾಪತ್ತೆಯಾಗಿದ್ದ ನಗರದ ಪಡೀಲ್ ನ ಚಿಕನ್ ಸೆಂಟರ್’ ನಲ್ಲಿ ಕೆಲಸ ಮಾಡುತ್ತಿದ್ದ ಬದ್ರುದ್ದೀನ್ ಡಿ.ಕೆ (29) ಎಂಬವರ ಮೃತದೇಹವು ಸೇಡಿಯಾಪು ಬಳಿಯ ಕಾಡಿನಲ್ಲಿ ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ಆರ್ಥಿಕ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕಿಸಲಾಗಿದೆ. ಕಾಣೆಯಾದ ಒಂದು ದಿನದ ನಂತರ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಬದ್ರುದ್ದೀನ್ ಅವಿವಾಹಿತನಾಗಿದ್ದು, ತಾಯಿ, ಅಣ್ಣ, ಅಕ್ಕ, ತಮ್ಮ ಹಾಗೂ ತಂಗಿಯನ್ನು ಅಗಲಿದ್ದಾರೆ.
ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Spread the love













