ಪ್ರಚೋದನಕಾರಿ ಹೇಳಿಕೆ ಪ್ರಕರಣ: ಬಿ.ಸಿ.ರೋಡ್ ನಲ್ಲಿ ಬಿಗುವಿನ ವಾತಾವರಣ

Spread the love

ಪ್ರಚೋದನಕಾರಿ ಹೇಳಿಕೆ ಪ್ರಕರಣ: ಬಿ.ಸಿ.ರೋಡ್ ನಲ್ಲಿ ಬಿಗುವಿನ ವಾತಾವರಣ

ಬಂಟ್ವಾಳ: ವಿಹಿಂಪ ಮುಂದಾಳು ಶರಣ್ ಪಂಪುವೆಲ್ ಗೆ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಸವಾಲು ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿ.ಸಿ.ರೋಡಿನಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಸೇರಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಿದ್ದಾರೆ.

YouTube player

ಬಿ.ಸಿ.ರೋಡ್ ದೇವಸ್ಥಾನದ ಮುಂಭಾಗದಲ್ಲಿ ದ.ಕ ಜಿಲ್ಲೆಯ ಹಲವು ಭಾಗಗಳಿಂದ ಭಾರೀ ಸಂಖ್ಯೆಯ ಕಾರ್ಯಕರ್ತರು ಆಗಮಿಸಿದ್ದು, ರಕ್ತೇಶ್ವರಿ ದೇವಸ್ಥಾನಕ್ಕೆ ವಿಎಚ್ ಪಿ ಮುಖಂಡರು ಬರೋ ಸಾಧ್ಯತೆ ಇದೆ. ಅಲ್ಲದೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್, ಭಜರಂಗದಳ ಮುಖಂಡ ಪುನೀತ್ ಅತ್ತಾವರ್ ಬುರುವ ಸಾಧ್ಯತೆ ಇದೆ ಎನ್ನಲಾಗಿದೆ. ಭಾನುವಾರ ರಾತ್ರಿಯೇ ಮಂಡ್ಯದಿಂದ ಇಬ್ಬರು ನಾಯಕರು ಮಂಗಳೂರು ತಲುಪಿದ್ದು ಪೊಲೀಸರು ಬಂಧನಕ್ಕೆ ಯತ್ನಿಸಿದರೂ ಸಾಧ್ಯವಾಗಿರಲಿಲ್ಲ

ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿ.ಸಿ.ರೋಡ್ ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದ್ದು ಹೆಚ್ಚುವರಿ ಪೊಲೀಸರ ನಿಯೋಜನೆ. ಹಿಂದೂ ಕಾರ್ಯಕರ್ತರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಮಾತುಕತೆ ನಡೆಸಿದ್ದು ಸ್ಥಳದಿಂದ ತೆರಳುವಂತೆ ಮನವೊಲಿಕೆ ಮಾಡಿದ್ದಾರೆ.


Spread the love