ಪ್ರವಾಸಿ ಕ್ಯಾಬ್ ಚಾಲಕನ ಕಿಡ್ನಾಪ್ ಪ್ರಕರಣ ಭೇಧಿಸಿದ ಎಸ್ಪಿ ಅಣ್ಣಾಮಲೈ ತಂಡ

Spread the love

ಪ್ರವಾಸಿ ಕ್ಯಾಬ್ ಚಾಲಕನ ಕಿಡ್ನಾಪ್ ಪ್ರಕರಣ ಭೇಧಿಸಿದ ಎಸ್ಪಿ ಅಣ್ಣಾಮಲೈ ತಂಡ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಪ್ರವಾಸಿಗರನ್ನು ಟಾರ್ಗೆಟ್ ಮಾಡಿ ಕ್ಯಾಬ್ ಡ್ರೈವರ್ ಗಳನ್ನು ಕಿಡ್ನಾಪ್ ಮಾಡುವ ಖದೀಮರ ತಂಡವನ್ನು ಹೆಡೆಮುರಿ ಕಟ್ಟಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಣ್ಣಾಮಲೈ ನೇತೃತ್ವದ ತಂಡ ಜೈಲಿಗೆ ಕಳುಹಿಸಿದೆ.

ಸೋಮವಾರ ಶಿವಮೊಗ್ಗದಿಂದ ಕೆಮ್ಮಣ್ಣುಗುಂಡಿಗೆ ಬರುತ್ತಿದ್ದ ಪ್ರವಾಸಿ ಕ್ಯಾಬೊಂದಕ್ಕೆ ತಂಡವೊಂದು ತಮ್ಮ ವಾಹನವನ್ನು ಗುದ್ದಿ, ಕ್ಯಾಬಿನಲ್ಲಿದ್ದ ಪ್ರವಾಸಿ ಮಹಿಳೆಯರನ್ನು ಶಿವಮೊಗ್ಗಕ್ಕೆ ವಾಪಾಸ್ ಕಳುಹಿಸಿ ಕ್ಯಾಬಿನ ಡ್ರೈವರನ್ನು ಅಪಹರಣ ಮಾಡಿಕೊಂಡು ತಂಡ ಹೋಗಿತ್ತು.
ಅಪಹರಣ ಮಾಡಿಕೊಂಡು ಹೋದ ತಂಡ ಚಿಕ್ಕಮಗಳೂರಿನ ರೆಸಾರ್ಟ್ ಒಂದಕ್ಕೆ ಕ್ಯಾಬಿನ ಡ್ರೈವರನ್ನು ಕೂಡಿ ಹಾಕಿ ಕಾರಿನ ಮ್ಹಾಲಕರಿಗೆ ಫೋನ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು.

ಡ್ರೈವರ್ ಪ್ರಕಾರ ಅಫಘಾತದಲ್ಲಿ ತಂಡದ ವಾಹನಕ್ಕೆ ಹೆಚ್ಚಿನ ಡ್ಯಾಮೇಜ್ ಆಗದೇ ಹೋದರು ಮಾಲಿಕನಲ್ಲಿ ರೂ 20000 ಬೇಡಿಕೆ ಇಟ್ಟಿದ್ದರು. ಗಾಡಿಯ ಮಾಲಕ ತಾನು ಬೆಂಗಳೂರಿನಲ್ಲಿದ್ದು ಚಿಕ್ಕಮಗಳೂರಿಗೆ ಬರುವುದಾಗಿ ಹಾಗೂ ತಮ್ಮ ಡ್ರೈವರನ್ನು ಬಿಡುವಂತೆ ಕೇಳಿದರೂ ಕಿಡ್ಯಾಪರ್ಸ್ ತಂಡ ಬಿಡಲು ಕೇಳಲಿಲ್ಲ. ಕೂಡಲೇ ಅವರು ತಮ್ಮ ಸ್ನೇಹಿತನನ್ನು ಚಿಕ್ಕಮಗಳೂರಿಗೆ ಕಳುಹಿಸಿದ್ದು ಆತನ ಮೊಬೈಲ್ ಕಿತ್ತುಕೊಂಡು ಹೊಡೆದು ಆತನ್ನನ್ನು ಕೂಡ ಕೂಡಿ ಹಾಕಿಕೊಂಡಿದ್ದರು.

ಇದರಿಂದ ಹತಾಶರಾದ ಮ್ಹಾಲಕ ನೇರವಾಗಿ ಜಿಲ್ಲಾ ವರಿಷ್ಠಾಧಿಕಾರಿ ಅಣ್ಣಾಮಲೈ ಅವರಿಗೆ ದೂರು ನೀಡಿದ್ದು, ಕಿಡ್ನಾಪರ್ಸ್ ತಂಗಿರೋ ಲಾಡ್ಜಿನ ಮಾಹಿತ ಪಡೆದು ಲಾಡ್ಜಿನ ಮೇಲೆ ರೇಡ್ ಮಾಡಿ ಮೂರು ಮಂದಿ ಕಿಡ್ನಾಪರ್ಸ್ ಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಕಾಫಿನಾಡಲ್ಲಿ ಇಂತಹ ಪ್ರಕರಣ ಇದೇ ಮೊದಲೇನಲ್ಲ. ಕಳೆದ ಕೆಲ ದಿನಗಳ ಹಿಂದೆ ಮೂಡಿಗೆರೆಯ ಕಳಸದಲ್ಲೂ ನಡೆದಿತ್ತು. ಒಟ್ಟಾರೆಯಾಗಿ ನಿಜಕ್ಕೂ ಈ ಘಟನೆಯಿಂದ ಪ್ರವಾಸಿಗರು ಹಾಗೂ ಕಾಫಿನಾಡಿನ ಜನ ಬೆಚ್ಚಿ ಬಿದ್ದಿದ್ದಾರೆ. ನಾವೆಷ್ಟೇ ಹುಷಾರಾಗಿದ್ರು ಅವರೇ ಅಪಘಾತ ಮಾಡಿ ಕಿಡ್ನಾಪೂ ಮಾಡಿ ಹಣ ಕೀಳುತ್ತಾರೆ ಅಂತಾರೆ ಸಂತ್ರಸ್ತರು. ಈಗ ಪೊಲೀಸ್ ಇಲಾಖೆ ಪ್ರಕರಣದ ಬೆನ್ನು ಬಿದ್ದಿದ್ದು, ಇಂತಹ ಘಟನೆಗಳ ಬಗ್ಗೆ ಮಾಹಿತಿ ನೀಡುವಂತೆ ಎಸ್‌ಪಿ ಅಣ್ಣಾಮಲೈ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


Spread the love