ಫ್ರೆಂಡ್ಸ್ ಮಟಪಾಡಿ ತಂಡಕ್ಕೆ ಎಮ್.ಪಿ.ಎಲ್ – 2020  ಟ್ರೋಫಿ

Spread the love

ಫ್ರೆಂಡ್ಸ್ ಮಟಪಾಡಿ ತಂಡಕ್ಕೆ ಎಮ್.ಪಿ.ಎಲ್ – 2020  ಟ್ರೋಫಿ

ಬ್ರಹ್ಮಾವರ: ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ಇವರ ಆಶ್ರಯದಲ್ಲಿ ಮಟಪಾಡಿ ಶ್ರೀನಿಕೇತನ ಶಾಲೆಯ ಮೈದಾನದಲ್ಲಿ ಜರುಗಿದ 40 ಗಜಗಳ ಕ್ರಿಕೆಟ್ ಪಂದ್ಯಾಟವನ್ನು ಫ್ರೆಂಡ್ಸ್ ಮಟಪಾಡಿ ತಂಡ ಜಯಿಸುವುದರ ಮೂಲಕ ಮಟಪಾಡಿ ಪ್ರೀಮಿಯರ್ ಲೀಗ್ (ಎಮ್.ಪಿ.ಎಲ್) ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಡಿಸೇಂಟ್ ಫ್ರೆಂಡ್ಸ್ ಮಟಪಾಡಿ ನೀಲಾವರ ರನ್ನರ್ಸ್ ಸ್ಥಾನಕ್ಕೆ ತೃಪ್ತಿಗೊಂಡಿತು.

ಕ್ರಿಕೆಟ್ ಪಂದ್ಯಾಟದ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಡಿಸೆಂಟ್ ಫ್ರೆಂಡ್ಸ್ ಇದರ ಶ್ರೀಕಾಂತ್, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಫ್ರೆಂಡ್ಸ್ ಮಟಪಾಡಿ ತಂಡದ ರಾಘವೇಂದ್ರ, ಉತ್ತಮ ದಾಂಡಿಗ ಪ್ರಶಸ್ತಿಯನ್ನು ಫ್ರೆಂಡ್ಸ್ ಮಟಪಾಡಿ ತಂಡದ ಸುಬ್ರಹ್ಮಣ್ಯ ಆಚಾರ್ಯ, ಹಾಗೂ ಉತ್ತಮ ಎಸೆತಗಾರ ಪ್ರಶಸ್ತಿಯನ್ನು ಫ್ರೆಂಡ್ಸ್ ಮಟಪಾಡಿಯ ಶರತ್ ನಾಯಕ್ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಶ್ರೀನಿಕೇತನ ಪ್ರೌಢ ಶಾಲೆಯ ಕ್ರೀಡಾ ಪಟು ತ್ರಪ್ತಿ ಆರ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಟಪಾಡಿ ಶ್ರೀನಿಕೇತನ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುಧಾಕರ್ ಶೆಟ್ಟಿ, ಶ್ರೀನಿಕೇತನ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಉದ್ಯಮಿ ಕೆ ಪಿ ಇಬ್ರಾಹಿಂ, ಗೋಪಾಲ ಪೂಜಾರಿ, ತಂಡಗಳ ಮ್ಹಾಲಕರಾದ ಫ್ರೆಂಡ್ಸ್ ಮಟಪಾಡಿ ತಂಡದ ವಿಜಯ ನಾಯಕ್, ನಂದಿ ಫ್ರೆಂಡ್ಸ್ ಅಶೋಕ್ ಪೂಜಾರಿ, , ಡಿಸೆಂಟ್ ಫ್ರೆಂಡ್ಸ್ ತಂಡದ ಸುರೇಶ್ ಎನ್ ಕರ್ಕೇರಾ, ಬಲ್ಜಿ ವಾರಿಯರ್ಸ ತಂಡದ ಅಣ್ಣಪ್ಪ ಗಾಣಿಗ , ಕುದ್ರು ಫ್ರೆಂಡ್ಸ್ ತಂಡದ ಪ್ರವೀಣ್ ಲೂವಿಸ್, ಸಿ.ಎಫ್.ಸಿ ಚಾಂತಾರು ತಂಡದ ದೀಪಕ್ ಪೂಜಾರಿ, ಮಾರಿ ಗುಡಿ ಫ್ರೆಂಡ್ಸ್ ತಂಡದ ಫ್ರಥ್ವಿ, ಮಂಜು ಶ್ರೀ ಸೈಕರ್ಸ್ ತಂಡದ ಸುಜಯ ನಾಯಕ್, ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ಇದರ ಶರೋನ್ ಉಪಸ್ಥಿತರಿದ್ದರು. ಚೇತನ್ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.


Spread the love