ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ವತಿಯಿಂದ ಎಮ್.ಪಿ.ಎಲ್. ಪಂದ್ಯಾಟ

Spread the love

ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ವತಿಯಿಂದ ಎಮ್.ಪಿ.ಎಲ್. ಪಂದ್ಯಾಟ

ಬ್ರಹ್ಮಾವರ: ಫ್ರೆಂಡ್ಸ್ ಮಟಪಾಡಿ ಯೂತ್ ಕ್ಲಬ್ ಮಟಪಾಡಿ ಇವರ ಆಶ್ರಯದಲ್ಲಿ ನಡೆಯುವ 40 ಗಜಗಳ ಕ್ರಿಕೆಟ್ ಪಂದ್ಯ ಕೂಟ ಮಟಪಾಡಿ ಪ್ರೀಮಿಯರ್ ಲೀಗ್ (ಎಮ್.ಪಿ.ಎಲ್) ಪಂದ್ಯಾಟವು ಮಟಪಾಡಿ ಶ್ರೀನಿಕೇತನ ಪ್ರೌಢಶಾಲೆಯ ಮೈದಾನದಲ್ಲಿ ಜರುಗಿತು.

ಪಂದ್ಯಾಟವನ್ನು ಶ್ರೀನಿಕೇತನ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ್ ಕುಮಾರ್ ಶೆಟ್ಟಿ ಮೈದಾನದಲ್ಲಿ ಬ್ಯಾಟಿಂಗ್ ಮಾಡುವುದರ ಮೂಲಕ ಉದ್ಘಾಟಿಸಿ, ಗ್ರಾಮೀಣ ಮಟ್ಟದಲ್ಲಿ ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸುವುದರೊಂದಿಗೆ ಯುವ ಸಮುದಾಯ ಹೆಚ್ಚು ಹೆಚ್ಚು ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗುತ್ತದೆ. ಈ ಮೂಲಕ ಯುವ ಸಮುದಾಯ ಕೆಟ್ಟ ಚಟಗಳಿಂದ ದೂರವಿರಲು ಸಹಾಕಾರಿಯಾಗುತ್ತದೆ. ಇಂತಹ ಪಂದ್ಯಾಟಗಳ ಮೂಲಕ ಗ್ರಾಮೀಣ ಮಟ್ಟದ ಪ್ರತಿಭೆಗಳು ರಾಷ್ಟ್ರಮಟ್ಟದಲ್ಲಿ ಅನಾವರಣಗೊಳ್ಳಲಿ ಎಂದು ಶುಭ ಹಾರೈಸಿದರು.

ಪಂದ್ಯಾಟದ ಮಧ್ಯಭಾಗದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಭೇಟಿ ನೀಡಿ ಕ್ರಿಕೆಟ್ ಪಂದ್ಯಾಟಕ್ಕೆ ಶುಭಕೋರಿದರು.

ಉದ್ಘಾಟನಾ ಸಮಾರಂಭದಲ್ಲಿ ಮಟಪಾಡಿ ಶ್ರೀನಿಕೇತನ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುಧಾಕರ್ ಶೆಟ್ಟಿ, ಶ್ರೀನಿಕೇತನ ಪ್ರೌಢ ಶಾಲೆಯ ದೈಹಿಕ ಶಿಕ್ಷಕರಾದ ಪ್ರವೀಣ್ ಕುಮಾರ್ ಶೆಟ್ಟಿ, ಶಿಕ್ಷಕರಾದ ದಿನಕರ್ ಶೆಟ್ಟಿ, ಪತ್ರಕರ್ತರಾದ ಮೈಕಲ್ ರೊಡ್ರಿಗಸ್, ಯಕ್ಷಗಾನ ಕಲಾವಿದ ಪ್ರಭಾಕರ ಆಚಾರ್ಯ, ಉದ್ಯಮಿಗಳಾದ ದೀಪಕ್ ಪೂಜಾರಿ, ಕೆಪಿ ಇಬ್ರಾಹಿಂ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ಎಂಟು ತಂಡಗಳಾದ ಫ್ರೆಂಡ್ಸ್ ಮಟಪಾಡಿ, ನಂದಿ ಫ್ರೆಂಡ್ಸ್, ಡಿಸೆಂಟ್ ಫ್ರೆಂಡ್ಸ್, ಬಲ್ಜಿ ವಾರಿಯರ್ಸ್, ಕುದ್ರು ಫ್ರೆಂಡ್ಸ್, ಸಿ.ಎಫ್.ಸಿ ಚಾಂತಾರು, ಮಾರಿ ಗುಡಿ ಫ್ರೆಂಡ್ಸ್, ಮಂಜು ಶ್ರೀ ಸೈಕರ್ಸ್ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟ ಜರುಗಿತು. ಚೇತನ್ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.


Spread the love