ಬಂಟ್ವಾಳ| ಅಕ್ರಮ ಕಸಾಯಿಖಾನೆ ಪ್ರಕರಣ: ಆರೋಪಿಯ ಮನೆ ಮುಟ್ಟುಗೋಲು
ಬಂಟ್ವಾಳ: ಅಕ್ರಮ ಕಸಾಯಿಖಾನೆ ನಡೆಸಿದ ಆರೋಪದಲ್ಲಿ ಆರೋಪಿಯ ಮನೆ/ಕಸಾಯಿ ಖಾನೆಯನ್ನು ಮುಟ್ಟುಗೋಲು ಹಾಕಿದ ದ.ಕ. ಜಿಲ್ಲೆಯಲ್ಲಿ ಮೊಟ್ಟ ಮೊದಲ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಿಪಳ್ಳ ಸಮೀಪದ ಪಾಡಿ ಎಂಬಲ್ಲಿ ನಡೆದಿದೆ.
ಪುದು ಗ್ರಾಮದ ಪಾಡಿ ನಿವಾಸಿ ಹಸನಬ್ಬಗೆ ಸೇರಿದ ಮನೆಯನ್ನು ಅಕ್ರಮ ಕಸಾಯಿ ಖಾನೆ ನಡೆಸಿದ ಆರೋಪದಲ್ಲಿ ಜಪ್ತಿ ಮಾಡಿ ಸರಕಾರದ ವಶಕ್ಕೆ ಪಡೆಯಲಾಗಿದೆ.
ಹಸನಬ್ಬ ವಿರುದ್ಧ ಗೋ ಕಳವು, ಗೋವಧೆಯಂತಹ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 123/2025 ಕಲಂ 303 ಬಿ ಎನ್ ಎಸ್ ಕಲಂ 4,7,12 ಗೋ ಸಂರಕ್ಷಣಾ ಕಾಯಿದೆ ಮತ್ತು 11(ಡಿ) ಗೋಹತ್ಯೆ ನಿಷೇಧ ಕಾಯಿದೆಯಡಿ ದಾಖಲಾದ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಎಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈತನ ವಿರುದ್ಧ 2017ನೇ ಸಾಲಿನಲ್ಲಿ ಅಪರಾಧ ಕ್ರಮಾಂಕ 65/2017 ಕಲಂ 379 ಐಪಿಸಿ ಮತ್ತು 4,5,11 ಗೋ ಸಂರಕ್ಷಣಾ ಕಾಯಿದೆ ಮತ್ತು 11(ಎಲ್) ಗೋಹತ್ಯೆ ನಿಷೇಧ ಕಾಯಿದೆ, 2008ನೇ ಸಾಲಿನಲ್ಲಿ ಅಪರಾಧ ಕ್ರಮಾಂಕ 88/2018 ಕಲಂ 379 ಐಪಿಸಿ ಮತ್ತು 4,5,11 ಗೋಸಂರಕ್ಷಣಾ ಕಾಯಿದೆ ಮತ್ತು 11(ಎಲ್) ಗೋಹತ್ಯೆ ನಿಷೇಧ ಕಾಯಿದೆಯಂತೆ ಪ್ರಕರಣಗಳು ದಾಖಲಾಗಿವೆ. ಈತನ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮಂಗಳೂರು ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳಿಗೆ ಪೊಲೀಸರು ವರದಿ ಸಲ್ಲಿಸಿದ್ದರು.
ಪೊಲೀಸರ ಮನವಿಯಂತೆ ಮಂಗಳೂರು ಸಹಾಯಕ ಆಯುಕ್ತರು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 ರ ಕಲಂ 8(4) 8(5) ಅಡಿಯಲ್ಲಿ ಸೆ. 25ರಂದು ಪ್ರಕರಣ ಸಂಖ್ಯೆ ಎಂ ಎ ಜಿ/ ಎಸ್ ಆರ್ 44/2025 ರಂತೆ ಠಾಣಾ ಅಪರಾಧ ಕ್ರಮಾಂಕ 123/2025ರಂತೆ ಹಸನಬ್ಬನ ವಶದಲ್ಲಿರುವ ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರಿಪಳ್ಳ ಪಾಡಿ ಎಂಬಲ್ಲಿರುವ ಮನೆ ನಂಬ್ರ 6-54 ಹಾಗೂ 6-54(1) ಗೆ ಒಳಪಟ್ಟ ಮನೆ/ ಅಕ್ರಮ ಕಸಾಯಿ ಕಾಣೆಯನ್ನು ಜಪ್ತು ಮಾಡಿ ಸರಕಾರದ ವಶಕ್ಕೆ ಪಡೆಯಲಾಗಿದೆ.
ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲು ಎಂದು ಜಿಲ್ಲಾ ಎಸ್ಪಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.