Spread the love
ಬಂಟ್ವಾಳ : 10 ತಿಂಗಳ ಹಸುಳೆಗೆ ಕೊರೋನ ಸೋಂಕು ದೃಢ
ಬಂಟ್ವಾಳ : ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಸುಳೆಗೆ ಕೊರೋನ ಸೋಂಕು ದೃಢಪಟ್ಟಿದೆ.
ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಜಿಪನಡು ಗ್ರಾಮದ 10 ತಿಂಗಳ ಹಸುಳೆಯನ್ನು ಮಾ.23ರಂದು ರಾತ್ರಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರನೆ ದಿನ ಮಗುವಿನ ಗಂಟಲ ದ್ರವವನ್ನು ಕೋವಿಡ್ – 19 ಪರೀಕ್ಷೆಗೆಂದು ಕಳುಹಿಸಲಾಗಿತ್ತು. ಇಂದು ಅದರ ವರದಿ ಬಂದಿದ್ದು ವರದಿಯಲ್ಲಿ ಕೊರೋನ ದೃಢಪಟ್ಟಿದೆ.
Spread the love













![Spanish Ambassador to India Launches ‘The Great Reset [CTRL+ALT+HUMAN]’ in Mangaluru](https://i0.wp.com/www.mangalorean.com/wp-content/uploads/2026/02/The-great-reset.471.jpg?resize=100%2C70&ssl=1)