ಬಿಜೆಪಿಗೆ ಹಿಂದೂ ಅಸ್ತ್ರ ಪ್ರಯೋಗದಿಂದ ಗೆಲುವು; ಮೋದಿ ಅಲೆಯಿಂದಲ್ಲ: ಸಿದ್ದರಾಮಯ್ಯ

Spread the love

ಬಿಜೆಪಿಗೆ ಹಿಂದೂ ಅಸ್ತ್ರ ಪ್ರಯೋಗದಿಂದ ಗೆಲುವು; ಮೋದಿ ಅಲೆಯಿಂದಲ್ಲ: ಸಿದ್ದರಾಮಯ್ಯ

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಂದೂ ಅಸ್ತ್ರ ಪ್ರಯೋಗ ಮಾಡಿ ಗೆಲುವು ಸಾಧಿಸಿದೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಿಂದ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಹಿನ್ನೆಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಸ್ಮಶಾನ ಮತ್ತಿತರ ಭಾವನಾತ್ಮಕ ವಿಚಾರಗಳನ್ನು ಪ್ರಚಾರ ಮಾಡಿ ಬಿಜೆಪಿ ಅಲ್ಲಿ ಗೆದ್ದಿದೆ ಎಂದರು.

ಉತ್ತರ ಪ್ರದೇಶದಲ್ಲಿ ಮೋದಿ ಅಲೆ ಬಿಜೆಪಿ ಗೆಲುವಿಗೆ ಕಾರಣ ಎನ್ನುವುದಾದರೆ ಪಂಜಾಬ್, ಗೋವಾದಲ್ಲಿ ಏಕೆ ಆ ಅಲೆ ಕೆಲಸ ಮಾಡಲಿಲ್ಲ ಎಂದು ಸಿಎಂ ಪ್ರಶ್ನಿಸಿದರು.

ಸಣ್ಣ, ದೊಡ್ಡ ರಾಜ್ಯಗಳ ವಿಷಯ ಅಲ್ಲ. ಪಂಜಾಬ್, ಗೋವಾದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯವರು ಈಗ ಏಕೆ ಅಲ್ಲಿ ಗೆಲ್ಲಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ. ಜನ ಕೊಟ್ಟಿರುವ ತೀರ್ಪು ಒಪ್ಪಬೇಕಾಗುತ್ತದೆ ಎಂದು ಹೇಳಿದರು.

‘ಮೋದಿ ಅವರು ಪಂಬಾಬ್‍ನಲ್ಲಿ ಸಾಕಷ್ಟು ಚುನಾವಣಾ ಪ್ರಚಾರ ನಡೆಸಿದ್ದರು. ಸಚಿವ ರಮೇಶ್ ಜಾರಕಿಹೊಳಿ ಅವರ ನಿವಾಸದ ಮೇಲೆ ನಡೆದ ಐಟಿ ದಾಳಿ ವಿಚಾರವನ್ನೂ ಅಲ್ಲಿ ಪದೇ ಪದೇ ಪ್ರಸ್ತಾಪಿಸಿದ್ದರು. ಆದರೂ ಅಲ್ಲಿ ಮೋದಿ ಅಲೆಯಿಂದ ಕೆಲಸವಾಗಲಿಲ್ಲ. ಹಾಗಾದರೆ, ಅಲೆ ಕೇವಲ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವೇ?

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ಅಖಿಲೇಶ್‌ ಯಾದವ್ ಅವರು ಐದು ವರ್ಷ ಉತ್ತಮವಾಗಿ ಆಡಳಿತ ನಡೆಸಿದ್ದರು. ಆದರೂ ಆಡಳಿತ ವಿರೋಧಿ ಅಲೆ, ಮುಲಾಯಂ ಸಿಂಗ್ ಯಾದವ್ ಕುಟುಂಬದ ಜಗಳ, ಮತಗಳ ಧ್ರುವೀಕರಣ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬಿಜೆಪಿ ಹಿಂದೂ ಅಸ್ತ್ರವನ್ನು ಪ್ರಬಲವಾಗಿ ಪ್ರಯೋಗಿಸಿದ್ದರ ಪರಿಣಾಮ ಎಸ್ಪಿ-ಕಾಂಗ್ರೆಸ್ ಮೈತ್ರಿ ಕೂಟಕ್ಕೆ ಸೋಲಾಗಿದೆ ಎಂದು ಮುಖ್ಯಮಂತ್ರಿ ವಿಶ್ಲೇಷಿಸಿದರು.

ಪಂಜಾಬ್‍ನಲ್ಲೂ ಬಿಜೆಪಿ ಹಿಂದೂ ಹೆಸರಲ್ಲಿ ಮತಗಳಿಸುವ ಪ್ರಯತ್ನ ನಡೆಸಿತು. ಆದರೆ, ಅವರ ಪ್ರಯತ್ನ ಫಲ ನೀಡಲಿಲ್ಲ ಎಂದರು.

ರಾಜ್ಯದಲ್ಲೂ ಆಡಳಿತ ವಿರೋಧಿ ಅಲೆ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಯನ್ನು ತಳ್ಳಿ ಹಾಕಿದ ಮುಖ್ಯಮಂತ್ರಿ, ಆ ರೀತಿ ಇರಲು ಸಾಧ್ಯವಿಲ್ಲ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿಯವರು ಮಾಡಿದ ಪಾಪದ ಕೆಲಸವನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ ಎಂದು ಹೇಳಿದರು.

ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣಾ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾಗಾದರೆ ಪಂಬಾಜ್ ಫಲಿತಾಂಶ ನಮಗೆ ನೆರವಾಗಬಹುದಲ್ಲವೇ? ಎಂದು ಪ್ರಶ್ನಿಸಿದರು.

ಕ್ರಪೆ : ಪ್ರಜಾವಾಣಿ


Spread the love

3 Comments

  1. Says the guy whose party is notorious for exploiting minority ‘vote bank’ to grab power!! LOL

  2. Can you imagine someone in India frankly expressing truth and facts as Geert Wilders does in the following video clip? Well, not until we get rid of pseudo-secularism disease that is rampant in our media and politics. I hope that he wins the general elections and delivers one more blow towards eminent death of pseudo-secularism.

    https://www.youtube.com/watch?v=Zz5WmxvwQK4

  3. As the BJP romps home with more than 300 seats in a 403-member UP assembly after two decades, the crux of the UP election is that Modi’s opponents could not match him in weaving a broader political narrative around development. While Modi communalised his development narrative, there was no secular alternative. The SP, Congress and BSP displayed a conspicuous lack of imagination and creativity in challenging Modi’s message and this finally led to their downfall. In this context, the BJP was seen by a major section of the state’s Hindu voters as the only viable option.
    For all its talk about developmental politics and Prime Minister Narendra Modi’s “sabka saath sabka vikas”, it seems that the BJP is not averse to lean on the tried and tested, but regressive and divisive, path of communal polarisation. This is unfortunate and unacceptable. It is unfortunate because the BJP, which runs the government at the Centre, has an advantage to set the discourse, and it is unacceptable because elections in the most populous state in India should be held without the spectre of communalisation. The BJP, as is expected of other parties, should set an example by shunning disruptive politics.
    There are many reasons why BJP has swept Uttar Pradesh. There is the popularity of prime minister Narendra Modi, the management of president Amit Shah, the anti-incumbency against the Samajwadi Party, there is Hindutva and the division of Muslim votes, there’s the positive ratings for demonetisation. But the most important reason why the BJP has won UP is caste.
    Yes there is Hindutva, but the BJP has benefited less from polarisation and more from the split of Muslim votes. The Congress alliance gave the impression that SP-Congress would get a bulk of Yadav and Muslim votes, further alienating any non-Yadav OBCs or upper castes who were thinking of voting SP for the sake of Akhilesh Yadav.
    None of this is to take away from Modi’s popularity or Amit Shah’s strategies. It’s not one or the other, it’s a combination of factors. The most important of these was caste.
    Man who showed ‘EVM loopholes’ held
    https://www.youtube.com/watch?v=t61Vq3LC30M
    http://www.veoh.com/watch/v505707dgewqMsB

    Lucknow encounter that ended Wednesday morning, and has described it as a tactic by the central government to polarize the last phase of election in UP in the BJP’s favor.
    A similar attempt was made in Sambhal in the first phase of election but the Jat voters punctured the plan, said Yadav. “Such a questionable action on eve of election shows the desperation on part of the Modi government,” he said.
    A Blast Here, a Temple Visit There: Elections and the Making of a Media Stunt
    https://thewire.in/115601/a-blast-temple-visit-up-elections-the-making-of-a-media-stunt/
    Last phase of 2017 election is somewhat similar to ‘Godhra’ and encounters which led to 2012 riots and subsequent massive win to BJP.Vote percentage of opposition parties and BJP vote share is the testimony that EVM’s are fraud which BJP top leadership once cast doubts.

    Ji Hind

Comments are closed.