ಬಿನ್ ಫಹದ್ ವಿಂಟರ್ ಟ್ರೋಫಿ 2017 ಕಪ್ ಇಂದಿನಿಂದ ಚಾಲನೆ

Spread the love

ಬಿನ್ ಫಹದ್ ವಿಂಟರ್ ಟ್ರೋಫಿ 2017 ಕಪ್ ಇಂದಿನಿಂದ ಚಾಲನೆ

ಬಿನ್ ಫಹದ್ ವಿಂಟರ್ ಟ್ರೋಫಿ 2017 ಕಪ್ ಪ್ರಾರಂಭಿಸುವ ಸಮಾರಂಭದಲ್ಲಿ ವಿಲೇಜ್  ರೆಸ್ಟೋರೆಂಟ್  ಸೌದಿ ಅರಬಿ್ಯಾದ ಜಿದ್ದಾ ದಲ್ಲಿ 03-ಜನವರಿ 2017 ರಂದು ನಡೆಯಿತು.

ಸಮಾರಂಭವು ಅಬ್ದುಲ್ ಸತ್ತಾರ್ ಬಾಬು ನಿಂದ ಪವಿತ್ರ ಕುರಾನ್ ಕಿರಾತ್ ನೊಂದಿಗೆ ಪ್ರಾರಂಭವಾಯಿತು.

ಅಬ್ದುಲ್ ಸಲೀಮ್ ಅಬ್ದುಲ್ ಗಾನಿ ಸಮಾರಂಭವನ್ನು ನಡೆಸಿಕೊಟ್ಟರು ಮತ್ತು ಬಿನ್ ಫಹದ್ ವಿಂಟರ್ ಟ್ರೋಫಿ 2017 ಯಲ್ಲಿ ನಡೆಯಲಿರುವ  ಪಂದ್ಯದ  ಬಗೆಗಿನ ಸಂಕ್ಷಿಪ್ತ  ವರದಿ ನೀಡಿದರು, ನಂತರ ಅನಾವರಣದಲ್ಲಿ ಶ್ರೀ ಮುತ್ತಲಿಬ್ ಪಡುಬಿದ್ರೆ (ಬಿನ್ ಪಹದ್  ಇಂಜನೀಯರಿಂಗ್ ಸೌದಿ ಅರೇಬಿಯಾ), ನಜೀರ್ ವಾಮಂಜೂರು (ಅಲ್ ಅಮ್ರಿ ಟ್ರೇಡಿಂಗ್ ಸೌದಿ ಅರೇಬಿಯಾ), ನಿಷಾದ್ ಅರ್ಚಲ್ (ಮ್ಯಾನೇಜರ್ ಲೊದರ್ಸ್ ಕ್ರಿಕೆಟ್ ಕ್ಲಬ್ ಜಿದ್ದಾ ಸೌದಿ ಅರೇಬಿಯಾ), ಯುನುಸ್  (ಬಿನ್ ಪಹದ್ ಸೌದಿ ಅರೇಬಿಯಾ) ಭಾಗವಹಿಸಿದ್ದರು.

ಬಿನ್ ಪಹದ್ ಮ್ಯಾನೆಜರ್ ಶ್ರೀ ಮುತ್ತಲಿಬ್  ತನ್ನ ಕೃತಜ್ಞತಾ ಭಾಷಣದಲ್ಲಿ  ಪಂದ್ಯಾವಳಿಯ ಎಲ್ಲಾ ಪ್ರಾಯೋಜಕರು ಧನ್ಯವಾದ ಮತ್ತು ಪಂದ್ಯಾವಳಿಯ ಸಂಘಟನಾ ಸಮಿತಿಯ ಶ್ರೀ ಝೈನುದ್ದೀನ್ ಮುನ್ನೂರು  ಮತ್ತು ಅವರ ತಂಡ,ಹಾಗೂ ಭಾಗವಹಿಸುವ ಎಲ್ಲಾ ತಂಡದ ಮುಖ್ಯಸ್ಥ ರಿಗೆ  ಧನ್ಯವಾದ ವ್ಯಕ್ತಪಡಿಸಿದರು ಅವರು ಈ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು.

ಈ ಪಂದ್ಯಾವಳಿಯಲ್ಲಿ ಜೆದ್ದಾ ಹಾಗೂ ಯಾಂಬು ನಿಂದ 12 ತಂಡದೊಂದಿಗೆ ಆಡಲಾಗುತ್ತದೆ.

ಭಾಗವಹಿಸುವ ತಂಡಗಳು.

1.ಮಂಗಳೂರು ಪ್ರೆಂಡ್ಸ್ ಜೆದ್ದಾ
2.ಯಂಗ್ ಸ್ಟಾರ್ ಜೆದ್ದಾ

  1. ಅಲ್ ಫಲಾಹ್ ಕ್ರಿಕೆಟ್ ಕ್ಲಬ್ ಯಾಂಬು
  2. ಟೀಮ್ ಬಿನ್ ಪಹದ್ ಯಾಂಬು
  3. ಲೋತರ್ಸ್ ಕ್ರಿಕೆಟ್ ಕ್ಲಬ್ ಜೆದ್ದಾ
  4. ಗಲ್ಫ್ ವೆಸ್ಟ್ ಕ್ರಿಕೆಟ್ ಕ್ಲಬ್ ಜೆದ್ದಾ
  5. ಕೇರಳ ನೈಟ್ ರೈಡರ್ಸ್ ಜೆದ್ದಾ
  6. ಕಾಕೋ ಕ್ರಿಕೆಟ್ ಕ್ಲಬ್ ಜೆದ್ದಾ
  7. ಅಝೀಝಿಯಾ ಡೆಕ್ಕನ್ ಜೆದ್ದಾ
  8. ಕೆ.ಸಿ. ಕೊಂಕಣ ಇಲೆವೆನ್ ಜೆದ್ದಾ
  9. Iಔಇ ಕ್ರಿಕೆಟಿರ್ಸ್ ಜೆದ್ದಾ
  10. ಪ್ರೆಂಡ್ಸ್ ಕ್ರಿಕೆಟ್ ಟೀಮ್ ಜೆದ್ದಾ

ಟೂರ್ನಮೆಂಟ್ 5 ಮತ್ತು 6 ನೇ ಜನವರಿ-2016 ರಂದು ಭಾರತ, ಪಾಕಿಸ್ತಾನ, ಶ್ರೀಲಂಕಾ,ಬಾಂಗ್ಲಾದೇಶ  ಎಲ್ಲಾ ಏಷ್ಯನ್ ಆಟಗಾರರೊಂದಿಗೆ  ಆಡಲಾಗುತ್ತದೆ.


Spread the love