ಬೀಜಾಡಿ: ಕಚೇರಿಯಲ್ಲಿ ಇದ್ದ ಮೊಬೈಲ್ ಕಳವು 

Spread the love

ಬೀಜಾಡಿ: ಕಚೇರಿಯಲ್ಲಿ ಇದ್ದ ಮೊಬೈಲ್ ಕಳವು 

ಕುಂದಾಫುರ: ಇಲ್ಲಿಗೆ ಸಮೀಪದ ಬೀಜಾಡಿಯ ಕಚೇರಿಯೊಂದರಲ್ಲಿ ಇಟ್ಟಿದ್ದ ಬೆಲೆ ಬಾಳುವ 2 ಮೊಬೈಲ್ ಫೋನ್ ಗಳನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿರುವ ಬಗ್ಗೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬೀಡಾಡಿ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿನ ಮನೆಗೆ ಹೊಂದಿಕೊಂಡಿರುವ ನಾಗೇಶಕುಮಾರ ಅವರ ಕಚೇರಿಯ ಮೇಜಿನ ಮೇಲೆ ಬುಧವಾರ ಸಂಜೆ ಅವರ ಪುತ್ರಿ ಐಶ್ವರ್ಯ ಎನ್ನುವವರು ಐಪೋನ್-11 ಹಾಗೂ ರೆಡ್‌ಮಿ ನೋಟ್ ಮಾದರಿಯ ಅಂದಾಜು 45000 ರೂಪಾಯಿ ಮೌಲ್ಯದ 2 ಮೊಬೈಲ್ ಫೋನ್ ಗಳನ್ನು ಇಟ್ಟು ಹೋಗಿದ್ದರು. ವಾಪಾಸು ಬಂದು ನೋಡುವಾಗ ಮೊಬೈಲ್ ಕಳುವಾಗಿರುವುದು ತಿಳಿದು ಬಂದಿದೆ.

ಸಂಜೆ 6.30 ರಿಂದ 7 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಬಾಗಿಲು ತೆರೆದು ಕಚೇರಿ ಒಳ ಪ್ರವೇಶಿಸಿ ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.


Spread the love