ಬೆಂಗಳೂರು ನಗರದ ಮೇಲೆ ಪಾಕ್​ ಉಗ್ರರ ದಾಳಿ ಭೀತಿ: ನಗರದಾದ್ಯಂತ ಹೈಅಲರ್ಟ್​ ಘೋಷಣೆ

Spread the love

ಬೆಂಗಳೂರು ನಗರದ ಮೇಲೆ ಪಾಕ್​ ಉಗ್ರರ ದಾಳಿ ಭೀತಿ: ನಗರದಾದ್ಯಂತ ಹೈಅಲರ್ಟ್​ ಘೋಷಣೆ

ಬೆಂಗಳೂರು: ರಾಷ್ಟ್ರದ ಸಿಲಿಕಾನ್​ ಸಿಟಿ ಎಂದೇ ಪ್ರಖ್ಯಾತವಾದ ಬೆಂಗಳೂರು ನಗರದ ಮೇಲೆ ಪಾಕಿಸ್ತಾನದ ಉಗ್ರರ ಕಾಕದೃಷ್ಟಿ ಬಿದ್ದಿದೆ. ಉದ್ಯಾನ ನಗರಿಯ ಮೇಲೆ ನಡೆಸಲು ಅದು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಾದ್ಯಂತ ಹೈ ಅಲರ್ಟ್​ ಘೋಷಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್​ ಆಯುಕ್ತರು ದಿಢೀರನೆ ಬೆಂಗಳೂರು ನಗರದಾದ್ಯಂತ ಕಟ್ಟೆಚ್ಚರ ಘೋಷಿಸಿದ್ದಾರೆ. ಈ ಕುರಿತು  ಮಾತನಾಡಿರುವ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​,ಬೆಂಗಳೂರು ಮಾತ್ರವಲ್ಲ, ರಾಷ್ಟ್ರದ ಹಲವು ಪ್ರಮುಖ ನಗರಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ. ಆದ್ದರಿಂದ ಬೆಂಗಳೂರು ನಗರದಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ ಎಂದು ಹೇಳಿದ್ದಾರೆ.

ನಗರದ ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್​ ಪಡೆಯ ತುಕುಡಿಗಳನ್ನು ಭದ್ರತಾ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.


Spread the love