ಬೆಳ್ತಂಗಡಿ: ವಿದ್ಯುತ್ ಶಾಕ್ ನಿಂದ ಸಹಾಯಕ ಪವರ್ ಮ್ಯಾನ್ ಮೃತ್ಯು

Spread the love

ಬೆಳ್ತಂಗಡಿ: ವಿದ್ಯುತ್ ಶಾಕ್ ನಿಂದ ಸಹಾಯಕ ಪವರ್ ಮ್ಯಾನ್ ಮೃತ್ಯು

ಬೆಳ್ತಂಗಡಿ: ವಿದ್ಯುತ್ ಪರಿವರ್ತಕದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಸಹಾಯಕ ಪವರ್ ಮ್ಯಾನ್ ಓಡಿಲ್ನಾಳ ನಿವಾಸಿ ವಿಜೇಶ್ ಕುಮಾರ್ ಕೆ. (35) ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಕುವೆಟ್ಟು ಗ್ರಾಮದ ಅಮರಜಾಲು ಎಂಬಲ್ಲಿ ಪರಿವರ್ತಕದ ಪ್ಯೂಸ್ ಹಾಕಲು ಅವರು ಹೋಗಿದ್ದರು. ಅವಿವಾಹಿತರಾಗಿದ್ದ ಅವರು ಕಳೆದ ಎಂಟು ವರ್ಷಗಳಿಂದ ಇಲಾಖೆಯಲ್ಲಿ ಸಹಾಯಕ ಪವರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ‘ಕೆಲಸ ನಿರ್ವಹಿಸುವುದಕ್ಕಾಗಿ ಜಿಒಎಸ್ನಲ್ಲಿ ವಿದ್ಯುತ್ ಕಡಿತಗೊಳಿಸಿ ಅವರು ಪರಿವರ್ತಕದ ಮೇಲ್ಬಾಗಕ್ಕೆ ಹತ್ತಿ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟರು. ಜಿಒಎಸ್ನಲ್ಲಿ ಸರಿಯಾಗಿ ವಿದ್ಯುತ್ ಕಡಿತಗೊಳ್ಳದೆ ಇದ್ದಿರುವುದು ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love