ಬ್ರಹ್ಮಾವರ| ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯ ನಿರ್ಲಕ್ಷ್ಯ: ಶಿಕ್ಷಕ ಅಮಾನತು

Spread the love

ಬ್ರಹ್ಮಾವರ| ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ಕಾರ್ಯ ನಿರ್ಲಕ್ಷ್ಯ: ಶಿಕ್ಷಕ ಅಮಾನತು

ಬ್ರಹ್ಮಾವರ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದಲ್ಲಿ ನಡೆಯುತ್ತಿರುವ ನಾಗರಿಕರ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಶೆಟ್ಟಿಬೆಟ್ಟು ಸ.ಪ್ರೌಢಶಾಲೆಯ ಸಹ ಶಿಕ್ಷಕ ವೆಂಕಟೇಶ್ ಪಿ.ಬಿ ಅವರನ್ನು ಅಮಾನತ್ತಿನಲ್ಲಿ ಇರಿಸುವ ಆದೇಶ ಹೊರಡಿಸಲಾಗಿದೆ.

ಜಿಲ್ಲಾ ಆಡಳಿತದ ಪ್ರಕಟಣೆಯ ಪ್ರಕಾರ, ವೆಂಕಟೇಶ್ ಪಿ.ಬಿ ಅವರಿಗೆ ಗಣತಿದಾರರಾಗಿ ನೇಮಕಾತಿ ಆದೇಶ ನೀಡಲಾಗಿದ್ದರೂ, ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು. ಹಲವಾರು ಬಾರಿ ದೂರವಾಣಿ ಮೂಲಕ ಸಂಪರ್ಕಿಸಿದರೂ ಪ್ರತಿಕ್ರಿಯೆ ನೀಡದೆ, ನೀಡಲಾದ ನೋಟಿಸ್‌ಗೂ ಸಮಜಾಯಿಷಿ ನೀಡಿರಲಿಲ್ಲ.

ಇದರಿಂದಾಗಿ ಸಮೀಕ್ಷಾ ಕಾರ್ಯಕ್ಕೆ ಅಡ್ಡಿ ಉಂಟಾಗಿರುವ ಹಿನ್ನೆಲೆಯಲ್ಲಿ ಶಿಕ್ಷಕರನ್ನು ಅಮಾನತ್ತಿನಲ್ಲಿ ಇರಿಸಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದೇ ತರಹ ಸಮೀಕ್ಷೆ ಕಾರ್ಯದಲ್ಲಿ ಇತರರು ನಿರ್ಲಕ್ಷ್ಯ ತೋರಿದರೆ ಅವರ ಮೇಲೂ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments