ಭಾರಿ ಮಳೆ: ನೀಲಾವರ, ಮಟಪಾಡಿ ಪರಿಸರದಲ್ಲಿ ನೆರೆ- ಅಪಾರ ಹಾನಿ, ಸಂಚಾರ ಅಸ್ತವ್ಯಸ್ತ

Spread the love

ಭಾರಿ ಮಳೆ: ನೀಲಾವರ, ಮಟಪಾಡಿ ಪರಿಸರದಲ್ಲಿ ನೆರೆ- ಅಪಾರ ಹಾನಿ, ಸಂಚಾರ ಅಸ್ತವ್ಯಸ್ತ

ಬ್ರಹ್ಮಾವರ: ಕಳೆದ ಕೆಲವು ದಿನಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಬ್ರಹ್ಮಾವರ, ಮಟಪಾಡಿ ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ನೀಲಾವರ ಭಾಗದ ಹಲವು ಕಡೆಗಳಲ್ಲಿ ನೆರೆ ನೀರು ರಸ್ತೆಗೆ ನುಗ್ಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಶಾಲಾ ಕಾಲೇಜುಗಳಿಗೆ ಶುಕ್ರವಾರ ಕೂಡ ರಜೆ ಕೊಡಲಾಗಿದೆ.

ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರ ಮಳೆಯಾಗಿದೆ. ದಿನಕ್ಕೆ ಸರಾಸರಿ ನೂರು ಮಿಲಿ ಮೀಟರ್ ನಷ್ಟು ಮಳೆ ಬಿದ್ದಿದ್ದು, ನಾಲ್ಕು ದಿನದಲ್ಲಿ 500 ಮಿಲಿಮೀಟರ್ ಮಳೆಯಾಗಿದೆ. ಮುಂಗಾರು ಅಬ್ಬರಕ್ಕೆ ಜಿಲ್ಲೆಯ ಎಲ್ಲಾ ನದಿಗಳು ತುಂಬಿ ತುಳುಕಿದೆ.

ಪಶ್ಚಿಮಘಟ್ಟದ ತಪ್ಪಲಿನಲ್ಲಿ ಹುಟ್ಟಿ, ಹೆಬ್ರಿ ತಾಲೂಕು ದಾಟಿ, ಬ್ರಹ್ಮಾವರ ತಾಲೂಕಿನಲ್ಲಿ ಹಾದು ಸಮುದ್ರ ಸೇರುವ ಸೀತಾನದಿಯ ದೃಶ್ಯಗಳಿವು. ನೀಲಾವರದ ಸಿದ್ಧಾರ್ಥ್ ಎಂಬವರು ತಮ್ಮ ಡ್ರೋನ್ ಕ್ಯಾಮೆರಾ ಮೂಲಕ ಈ ಅದ್ಭುತ ದೃಶ್ಯವನ್ನು ಸೆರೆ ಹಿಡಿದ್ದಾರೆ.


Spread the love