ಮಂಗಳೂರು: ಆಸ್ತಿ ಬಾಕಿ ತೆರಿಗೆ ಪಾವತಿಸಲು ನಗರಪಾಲಿಕೆ ಸೂಚನೆ

Spread the love

ಮಂಗಳೂರು: ಆಸ್ತಿ ಬಾಕಿ ತೆರಿಗೆ ಪಾವತಿಸಲು ನಗರಪಾಲಿಕೆ ಸೂಚನೆ

ಮಂಗಳೂರು: 2026-27ನೇ ಸಾಲಿಗೆ ಮಾತ್ರ ರಾಜ್ಯದ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ, ಅನ್ವಯವಾಗುವಂತೆ ಆಸ್ತಿ ತೆರಿಗೆ ಮೇಲಿನ ಶೇ. 5 ರ ರಿಯಾಯಿತಿಯ ಕಾಲಾವಧಿಯನ್ನು ಮೇ 31 ರವರೆಗೆ ಸರ್ಕಾರ ವಿಸ್ತರಿಸಿರುತ್ತದೆ.

ಮಂಗಳೂರು ಮಹಾನಗರಪಾಲಿಕೆಯಲ್ಲಿ ಮೇ 2026 ತಿಂಗಳ ಅಂತ್ಯದವರೆಗೆ ಚಾಲ್ತಿ ಸಾಲಿನ ಆಸ್ತಿ ತೆರಿಗೆ ಮೇಲೆ ಶೇ. 5 ರ ರಿಯಾಯಿತಿ ಇದ್ದು, ಸಾರ್ವಜನಿಕರು ಕೂಡಲೇ ತಮ್ಮ ಆಸ್ತಿಗಳ ಬಾಕಿ ಇರುವ ತೆರಿಗೆಯನ್ನು ಹೆಚ್ಚಿನ ದಂಡನೆಗೆ ಅವಕಾಶ ಕೊಡದೇ ಪಾವತಿಸುವಂತೆ ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments