ಮಂಗಳೂರು: ಇಬ್ಬರು ಮಾದಕ ದ್ರವ್ಯ ಮಾರಾಟಗಾರರ ಬಂಧನ

Spread the love

ಮಂಗಳೂರು: ಇಬ್ಬರು ಮಾದಕ ದ್ರವ್ಯ ಮಾರಾಟಗಾರರ ಬಂಧನ

ಮಂಗಳೂರು: ಮಾದಕ ದ್ರವ್ಯ ವ್ಯಸನ, ನಿಯಂತ್ರಣ ಮತ್ತು ಮಾರಾಟ ತಡೆಗಟ್ಟು ನಿಟ್ಟಿನಲ್ಲಿ ಪೊಲೀಸ್ ಆಯುಕ್ತರು ಮಂಗಳೂರು ನಗರ ರವರ ಆದೇಶದಂತೆ ರಚಿತವಾಗಿರುವ ANTI DRUG TEAM ಕೇಂದ್ರ ಉಪ ವಿಭಾಗ ಮಂಗಳೂರು ನಗರ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ಭಾನುವಾರ ರಾತ್ರಿ ಮಂಗಳೂರು ನಗರದ ಬಲ್ಮಠ ನ್ಯೂ ರೋಡ್ ನಲ್ಲಿರುವ ಕೆ ಎಂ ಸಿ ಆಸ್ಪತ್ರೆಯ ವಿಸಿಟರ್ಸ್ ವಾಹನ ಪಾರ್ಕಿಂಗ್ ಬಳಿ ಸಾರ್ವಜನಿಕ ರಸ್ತೆ ಬದಿಯಲ್ಲಿ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಅತ್ತಾವರ ನಿವಾಸಿ ಆದಿತ್ಯ ಕೆ (29) ಮತ್ತು ಅಡ್ಯಾರ್ ಪದವು ನಿವಾಸಿ ರೋಹನ್ ಸಿಕ್ವೇರಾ (33) ಎಂದು ಗುರುತಿಸಲಾಗಿದೆ

ಬಂಧಿತರ ವಶದಿಂದ ಸುಮಾರು ರೂ 50,000/- ಮೌಲ್ಯದ 27 ಗ್ರಾಂ ಹೈಡ್ರೋವೀಡ್ ಗಾಂಜ, ಸುಮಾರು ರೂ 1,00,000/- ಮೌಲ್ಯದ 2 ಕೆಜಿ 95 ಗ್ರಾಂನ ಗಾಂಜ, ರೂ 8000/- ಮೌಲ್ಯದ ಗಾಂಜ ಆಷ್ ಆಯಿಲ್ , ರೂ,16,800/- ಮೌಲ್ಯದ ಎಲ್.ಎಸ್.ಡಿ ಸ್ಟಾಂಫ್. ಡಿಜಿಟಲ್ ತೂಕ ಮಾಪನಗಳು-2, ಕೃತ್ಯಕ್ಕೆ ಬಳಸಿದ ರೂ 90,000/- ಮೌಲ್ಯದ ಎರಡು ಮೊಬೈಲ್ ಪೋನ್ ಮತ್ತು ರೂ 20 ಲಕ್ಷ ಮೌಲ್ಯದ ಕಪ್ಪು ಬಣ್ಣದ ಹುಂಡೈ ಕಂಪೆನಿಯ ವೆರ್ನ ಮಾಡೆಲ್ ನ ಕಾರು-1 ಮತ್ತು ಇತರ ಸೊತ್ತುಗಳನ್ನು ಸ್ವಾದೀನಪಡಿಸಿಕೊಂಡು, ಆರೋಪಿಗಳ ವಿರುದ್ದ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಎನ್ ಡಿ ಪಿ ಎಸ್ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಕಾರ್ಯಾಚರಣೆಯನ್ನು ಮಂಗಳೂರು ನಗರ ಪೊಲೀಸ್ ನ ಪೊಲೀಸ್ ಆಯುಕ್ತರಾದ ಅನುಪಮ್ ಅಗ್ರವಾಲ್, ಐ.ಪಿ.ಎಸ್, ರವರ ನಿರ್ದೇಶನದಂತೆ, ಸಿದ್ದಾರ್ಥ್ ಗೋಯಲ್ ಐ.ಪಿ.ಎಸ್ ಉಪ ಪೊಲೀಸ್ ಆಯುಕ್ತರು ( ಕಾನೂನು ಸುವ್ಯವಸ್ಥೆ), ದಿನೇಶ್ ಕುಮಾರ್ ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ) ರವರ ಮಾರ್ಗದರ್ಶನದಲ್ಲಿ, ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಪ್ರತಾಪ್ ಸಿಂಗ್ ತೋರಟ್ ರವರ ನೇತೃತ್ವದಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯ ನಿರೀಕ್ಷಕರಾದ ಅಜ್ಮತ್ ಆಲಿ ಮತ್ತು ANTI DRUG TEAM ಕೇಂದ್ರ ಉಪ ವಿಭಾಗದ ಅಧಿಕಾರಿ ಪಿಎಸ್ ಐ ಪ್ರದೀಪ್ ಟಿ ಆರ್ ಮತ್ತು ಸಿಬ್ಬಂದಿಗಳು ನಡೆಸಿರುವುದಾಗಿದೆ.


Spread the love