ಮಂಗಳೂರು: ಉತ್ತಮ ಸೇವೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ರೆಡ್‍ಕ್ರಾಸ್ ಪ್ರಶಸ್ತಿ

Spread the love

ಮಂಗಳೂರು (ಕರ್ನಾಟಕ ವಾರ್ತೆ): ದಕ್ಷಿಣಕನ್ನಡ ಜಿಲ್ಲೆ ರೆಡ್‍ಕ್ರಾಸ್ ಸಂಘ 2013-14 ರ ಸಾಲಿನಲ್ಲಿ ಉತ್ತಮ ಸೇವೆ ಮಾಡಿದ್ದಕ್ಕಾಗಿ ಕರ್ನಾಟಕ ರಾಜ್ಯ ರಾಜ್ಯಪಾಲರಾದ ಶ್ರೀ ವಾಜುಭಾಯಿ ರುಡಾವಾಲ ಅವರು ರನ್ನರ್ ಅಪ್ ಪ್ರಶಸ್ತಿಯನ್ನು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರಿಗೆ ಇತ್ತಿಚೇಗೆ ರಾಜಭವನದಲ್ಲಿ ಜರುಗಿದ ಭಾರತೀಯ ರೆಡ್‍ಕ್ರಾಸ್ ಸಂಘದ ವಾರ್ಷಿಕ ಸಮಾರಂಭದಲ್ಲಿ ನೀಡಿದರು.

red_cross_

ದಕ್ಷಿಣಕನ್ನಡ ಜಿಲ್ಲಾ ಭಾರತೀಯ ರೆಡ್‍ಕ್ರಾಸ್ ಸಂಘದ ಶಾಖೆಯು 2013-14ನೇ ಸಾಲಿನಲ್ಲಿ ಜಿಲ್ಲೆಯ ಅತ್ಯಂತ ಕುಗ್ರಾಮವಾದ ಬಂಜಾರುಮಲೆ (ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ 34ಕಿ.ಮಿ ದೂರ) ಇಲ್ಲಿ ಆರೋಗ್ಯ ಶಿಬಿರವನ್ನು ಆಯೋಜಿಸುವ ಮೂಲಕ ಆ ಭಾಗದ ಜನರಿಗೆ ಆರೋಗ್ಯ ಭಾಗ್ಯ ಒದಗಿಸಿದ ಬಗ್ಗೆ ಹಾಗೂ ಇನ್ನೂ ಅನೇಕ ಜನೋಪಯೋಗಿ ಕಾರ್ಯಗಳನ್ನು ನೆರವೇರಿಸಿರುವ ಕುರಿತು 2013-14 ನೇ ಸಾಲಿಗೆ ರನ್ನರ್ ಅಪ್ ಪ್ರಶಸ್ತಿಯನ್ನು ನೀಡಲಾಗಿದೆ. ಭಾರತೀಯ ರೆಡ್‍ಕ್ರಾಸ್ ಸಂಘದ ದಕ್ಷಿಣಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭಾಕರ ಶ್ರೀಯಾನ್, ಉಪಾಧ್ಯಕ್ಷ ರೊನಾಲ್ಡ್ ಅನಿಲ್ ಫರ್ನಾಂಡೀಸ್, ಕಾರ್ಯದರ್ಶಿ ಕೆ.ವಿ.ನಾಗರಾಜ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.


Spread the love