ಮಂಗಳೂರು| ಉದ್ಯೊಗದ ವೀಸಾ ವಂಚನೆ: ಇಬ್ಬರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ವಿದೇಶದಲ್ಲಿ ಉದ್ಯೋಗ ಮಾಡಲು ವೀಸಾ ಮಾಡಿಕೊಡುವುದಾಗಿ ಹೇಳಿ ಹಣ ಪಡೆದ ಬಳಿಕ ವೀಸಾ ನೀಡದೆ ವಂಚಿಸಿದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ತಾನು ವಿದೇಶದಲ್ಲಿ ಉದ್ಯೋಗ ಮಾಡುವ ಉದ್ದೇಶದಿಂದ ವಿದೇಶದಲ್ಲಿದ್ದ ಬೆಳ್ತಂಗಡಿಯ ಮುಹಮ್ಮದ್ ಅಝ್ಮಾನ್ ಬಳಿ 2025ರ ಜನವರಿಯಲ್ಲಿ ಮೊಬೈಲ್ ಮೂಲಕ ಮಾತುಕತೆ ನಡೆಸಿದ್ದೆ. 4.50 ಲಕ್ಷ ರೂ. ನೀಡಿದರೆ ವೀಸಾ ಮಾಡಿಕೊಡುವುದಾಗಿ ಆತ ತಿಳಿಸಿದ್ದು, ಹಾಗೇ ಮೇ 9ರಂದು ಆತ ತೌಸೀಫ್ ಎಂಬಾತನ ಜೊತೆಗೂಡಿ ಕಣ್ಣೂರಿನ ದಯಂಬುಗೆ ಬಂದಿದ್ದ. ನಂತರ ತನ್ನ ಹಾಗೂ ಅಣ್ಣ ಮುಹಮ್ಮದ್ ಅಝ್ಮೀನ್‌ರನ್ನು ಭೇಟಿ ಮಾಡಿ 2 ಲಕ್ಷ ರೂ. ನಗದು ಮತ್ತು ತನ್ನ ಅಣ್ಣ ಝುನ್‌ರೈನ್‌ರ ಹೆಸರಿನಲ್ಲಿ 1.90 ಲಕ್ಷ ರೂ.ವನ್ನು ಕರ್ಣಾಟಕ ಬ್ಯಾಂಕ್ ಖಾತೆಯ 2 ಚೆಕ್ ಮೂಲಕ ಹಾಗೂ ಮುಹಮ್ಮದ್ ತಾಸೀರ್‌ರಿಂದ 4 ಲಕ್ಷ ರೂ., ಮುಹಮ್ಮದ್ ಶಬೀಬ್‌ರಿಂದ 2 ಲಕ್ಷ ರೂ., ಮುಹಮ್ಮದ್ ಇಕ್ಬಾಲ್‌ರಿಂದ 3.30 ಲಕ್ಷ ರೂ, ಮುಹಮ್ಮದ್ ಅರ್ಷಾದ್‌ರಿಂದ 3.50, ಸಲ್ಮಾನ್ ಫಾರೀಸ್‌ರಿಂದ 2.50 ಲಕ್ಷ ರೂ. ಹೀಗೆ 19.20 ಲಕ್ಷ ರೂ.ವನ್ನು ಪಡೆದು ವೀಸಾ ನೀಡದೆ ವಂಚಿಸಿದ್ದಾರೆ ಎಂದು ಕಣ್ಣೂರು ದಯಂಬು ನಿವಾಸಿ ಮುಹಮ್ಮದ್ ಸಿನಾನ್ ದೂರು ನೀಡಿದ್ದಾರೆ.
ಆರೋಪಿ ಮುಹಮ್ಮದ್ ಅಝ್ಮಾನ್‌ಗೆ ಪೋನ್ ಮಾಡಿ ವೀಸಾದ ಬಗ್ಗೆ ವಿಚಾರಿಸಿದಾಗ ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಹಾಕಿಸುತ್ತೇನೆ, ನಮ್ಮ ಮನೆಗೆ ಹೋದರೆ ಅಕ್ರಮ ಪ್ರವೇಶ ಮಾಡಿರುತ್ತೀರಿ ಮತ್ತು ಮನೆಯಲ್ಲಿದ್ದ ಹೆಂಗಸರ ಮೇಲೆ ಕೈಹಾಕಿರುತ್ತೀರಿ ಎಂದು ಕೇಸು ಹಾಕುತ್ತೇನೆ ಎಂದೂ ಕೂಡ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.