Spread the love
ಮಂಗಳೂರು| ಉದ್ಯೋಗಾವಕಾಶ: ಮೇ 19 ರಂದು ಸಂದರ್ಶನ
ಮಂಗಳೂರು: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಮೆಡ್ಪ್ಲಸ್ ಕಂಪೆನಿ, ಬೆಂಗಳೂರು ಮತ್ತು ಮಂಗಳೂರಿನಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇರ ಸಂದರ್ಶನ ಮೇ 19 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1:30 ರವರೆಗೆ ಪಡೀಲ್ ಜಿಲ್ಲಾಡಳಿತ ಕಚೇರಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನಡೆಯಲಿದೆ.
ಹುದ್ದೆಗಳ ವಿವರ:
- ಫಾರ್ಮಾಸಿಸ್ಟ್ ಹುದ್ದೆಗೆ ಡಿ.ಫಾರ್ಮಾ /ಬಿ.ಫಾರ್ಮಾ (ಪಿ.ಸಿ.ಐ ಸರ್ಟಿಫಿಕೇಟ್ನೊಂದಿಗೆ) ವಿದ್ಯಾರ್ಹತೆ ಹೊಂದಿರಬೇಕು. ವೇತನ (ಸಿ.ಟಿ.ಸಿ) 3.83 ರಿಂದ 4.16 ಎಲ್.ಪಿ.ಎ.
- ಫಾರ್ಮಾಸಿ ಯೇಡ್ ಹುದ್ದೆಗೆ ಎಸ್.ಎಸ್.ಎಲ್.ಸಿ/ ಪಿ.ಯು.ಸಿ/ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವೇತನ (ಸಿ.ಟಿ.ಸಿ) 2.70 ರಿಂದ 3.42 ಎಲ್.ಪಿ.ಎ.
- ಸಿ.ಎಸ್.ಎ ಹುದ್ದೆಗೆ ಎಸ್.ಎಸ್.ಎಲ್.ಸಿ/ ಪಿ.ಯು.ಸಿ ವಿದ್ಯಾರ್ಹತೆ ಹೊಂದಿರಬೇಕು. ವೇತನ (ಸಿ.ಟಿ.ಸಿ) 2.52 ಎಲ್.ಪಿ.ಎ.
- ಅಪ್ರೆಂಟಿಸ್- ಪಿ.ಯು.ಸಿ ವಿದ್ಯಾರ್ಹತೆ ಹೊಂದಿರಬೇಕು. ವೇತನ (ಸಿ.ಟಿ.ಸಿ) 1.92 ಎಲ್.ಪಿ.ಎ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0824 2457139 ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಪ್ರಕಟಣೆ ತಿಳಿಸಿದೆ.
Spread the love













