ಮಂಗಳೂರು ಎ.ಪಿ.ಎಮ್. ಸಿ ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ಬಿಜೆಪಿ ಸಂಸದ, ಶಾಸಕರು ಮೌನ ಯಾಕೆ – ಕಾಂಗ್ರೆಸ್

Spread the love

ಮಂಗಳೂರು ಎ.ಪಿ.ಎಮ್. ಸಿ ಮಾರುಕಟ್ಟೆ ಅವ್ಯವಸ್ಥೆ ಬಗ್ಗೆ ಬಿಜೆಪಿ ಸಂಸದ, ಶಾಸಕರು ಮೌನ ಯಾಕೆ – ಕಾಂಗ್ರೆಸ್

ಮಂಗಳೂರು: ಮಂಗಳೂರು ಎ.ಪಿ.ಎಮ್. ಸಿ ಆವರಣದಲ್ಲಿ ಮಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯ ಕೇಂದ್ರ ಮಾರುಕಟ್ಟೆಯ ಸಗಟು ತರಕಾರಿ ಮತ್ತು ಹಣ್ಣು-ಹಂಪಲು ವ್ಯಾಪಾರಸ್ಥರಿಗೆ ಜಿಲ್ಲಾಡಳಿತ ವತಿಯಿಂದ ನೀಡಿದಂತಹಾ ಸ್ಥಳದಲ್ಲಿ ವ್ಯಾಪಾರ ಮಾಡಲು ಸೂಚಿಸಿದ್ದು ದಿ:2-4-2020ರಂದು ಜಿಲ್ಲಾಧಿಕಾರಿಯವರ ಆದೇಶದಂತೆ ತಿಳಿಸಿದ್ದು, ಸದ್ರಿ ಆದೇಶದಂತೆ ವ್ಯಾಪಾರಸ್ಥರು ಎ.ಪಿ.ಎಮ್. ಸಿ ಆವರಣವನ್ನು ವ್ಯಾಪಾರ ನಡೆಸಲು ಇರುವ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿದ್ದರೂ ಕೂಡಾ ಈ ಭಾಗದ ಸಂಸದರಾದ .ನಳೀನ್ ಕುಮಾರ್ ಕಟೀಲ್ರವರು ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ವ್ಯಾಪಾರಸ್ಥರ ಪ್ರತಿನಿಧಿಗಳ ಸಭೆ ನಡೆಸಿ ಯಾವುದೇ ಸಮಸ್ಯೆ ಇದ್ದರೂ ಕೂಡಾ ವ್ಯಾಪಾರಸ್ಥರು ಮಂಗಳೂರು ಮಹಾ ನಗರ ಪಾಲಿಕೆಯ ಕೇಂದ್ರ ಮಾರುಕಟ್ಟೆಯನ್ನು ತೆರವು ಗೊಳಿಸಿ ಎ.ಪಿ.ಎಮ್. ಸಿ ಆವರಣದಲ್ಲಿ ವ್ಯವಹಾರ ಮಾಡಬೇಕೆಂದು ತಿಳಿಸಿದಾಗ ವ್ಯಾಪಾರಸ್ಥರ ಸಂಘದ ಪ್ರತಿನಿಧಿಗಳು ಸಂಬಂಧಪಟ್ಟ ಕ್ಷೇತ್ರದ ಶಾಸಕರಾದ ಶ್ರೀ.ವೇದವ್ಯಾಸ್ ಕಾಮತ್ ಮತ್ತು ಭರತ್ ಶೆಟ್ಟಿಯವರು ವ್ಯಾಪಾರದ ಪ್ರತಿನಿಧಿಗಳಿಗೆ ಭರವಸೆ ನೀಡಿ ನೀವು ಕೂಡಲೇ ವ್ಯಾಪಾರ ಆರಂಭಿಸಿ ಒಂದು ವಾರದೊಳಗೆ ಅಲ್ಲಿ ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುತ್ತೇವೆ. ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳತ್ತೇವೆ. ಈ ಸೌಕರ್ಯಗಳಿಗೆ ಸುಮಾರು 10 ಲಕ್ಷ ವನ್ನು ಸಂಸದರ ನಿಧಿಯಿಂದ ಒದಗಿಸಲಾಗುವುದು ಎಂದು ಸಂಸದರಾದ ಶ್ರೀ ನಳೀನ್ ಕುಮಾರ್ ಕಟೀಲ್, ಶಾಸಕರಾದ ಶ್ರೀ. ವೇದವ್ಯಾಸ್ ಕಾಮತ್ ಮತ್ತು ಶ್ರೀ ಭರತ್ ಶೆಟ್ಟಿ ರವರು ಆಶ್ವಾಸನೆ ನೀಡಿದರಿಂದ ವ್ಯಾಪಾರಸ್ಥರು ಸ್ಥಳಾಂತರಿಸಲು ಒಪ್ಪಿಗೆ ನೀಡಿದ್ದರು ಆದರೆ ಆಶ್ವಾಸನೆ ಕೊಟ್ಟು 50 ದಿನಗಳು ಕಳೆದರೂ ಸಂಸದರಾಗಲೀ, ಶಾಸಕರಾಗಲೀ ಹಜಹಜ ಆವರಣಕ್ಕೆ ಆಗಮಿಸದೇ ಮತ್ತು ಯಾವುದೇ ಮೂಲಭೂತ ಸೌಖರ್ಯಗಳನ್ನು ಒದಗಿಸದೆ ಇರುವುದರಿಂದ ವ್ಯಾಪಾರಸ್ಥರು ಗಂಬೀರ ಸಮಸ್ಯೆಯನ್ನು ಎದುರಿಸುವಂತಾಗಿದೆ.

ಈ ಬಗ್ಗೆ ಶಾಸಕರಾದ ಯು.ಟಿ.ಖಾದರ್ ಗಮನಕ್ಕೆ ತಂದಾಗ ಶ್ರೀಯುತರು ಎ.ಪಿ.ಎಮ್. ಸಿ ಆವರಣಕ್ಕೆ ಆಗಮಿಸಿ ಸಮಸ್ಯೆ ಬಗ್ಗೆ ತಿಳಿದುಕೊಂಡು ಈ ಬಗ್ಗೆ ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿರುತ್ತಾರೆ. ದಿ:19-05-2020 ರಂದು ಜಿಲ್ಲೆಯಲ್ಲಿ ದಿಢೀರಣೆ ಮಳೆ ಪ್ರಾರಂಭವಾಗಿ ಎ.ಪಿ.ಎಮ್. ಸಿ ಸಂಪೂರ್ಣ ನೀರು ತುಂಬಿ ವ್ಯಾಪಾರಸ್ಥರ ತರಕಾರಿ ಮತ್ತು ಹಣ್ಣುಹಂಪಲು ನೀರಿನಲ್ಲಿ ಹೋಗುವಂತಾಯಿತು ಇದರಿಂದಾಗಿ ವ್ಯಾಪಾರಸ್ಥರಿಗೆ ಅಂದಾಜು ರೂ 50 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿರುವುದಲ್ಲದೇ ಸಾರ್ವಜನಿಕರಿಗೆ ಬಹಳ ಸಮಸ್ಯೆಯಾಗಿದೆ. ಈ ಕುರಿತು ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ .ಹರೀಶ್ ಕುಮಾರ್ ಗಮನಕ್ಕೆ ಬಂದಾಗ ಶ್ರೀಯುತರು ಕೂಡಲೇ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕರಾದ ಶ್ರೀ.ಅಬ್ದುಲ್ ರವೂಫ್ ನೇತೃತ್ವದಲ್ಲಿ ಪರಿಶೀಲನಾ ಸಮಿತಿಯನ್ನು ರಚಿಸಲಾಯಿತು. ಸಮಿತಿಯ ಸದಸ್ಯರುಗಳಾದ ಶಶಿಧರ ಹೆಗ್ಡೆ ,ಸದಾಶಿವ ಉಳ್ಳಾಲ್,ಭಾಸ್ಕರ್ ಕೆ, ಸಾಹುಲ್ ಹಮೀದ್,ನವೀನ್ ಡಿಸೋಜ, ವಸಂತ್ ಬರ್ನಾಡ್,ಪ್ರವೀಣ್ ಚಂದ್ರ ಆಳ್ವ,ಅನಿಲ್ ಕುಮಾರ್, ಪ್ರತಿಭಾ ಕುಳಾಯಿ ಅವರುಗಳು ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೀ.ಅಬ್ದುಲ್ ರವೂಫ್ ನೇತೃತ್ವದಲ್ಲಿ 19-05-2020ರಂದು ಬೆಳಿಗ್ಗೆ 8.00 ಗಂಟೆಗೆ ಂPಒಅ ಮಾರುಕಟ್ಟೆ ಸ್ಥಳಕ್ಕೆ ಭೇಟಿನೀಡಿ ಅಲ್ಲಿನ ವ್ಯಾಪಾರಸ್ಥರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸ್ಥಳ ವೀಕ್ಷಣೆ ಮಾಡಿದಾಗ ಸದ್ರಿ ಆವರಣದಲ್ಲಿ ವ್ಯಾಪಾರ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ.ಮುಖ್ಯವಾಗಿ ಕೋವಿಡ್ 19 ರ ಕೊರೋನಾ ವೈರಸ್ ಗಳು ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗೆ ಹೆಚ್ಚಾಗಿ ಹರಡುವ ಸಾಧ್ಯತೆ ಕಂಡು ಬಂದಿದೆ. ಅಲ್ಲದೇ ಈ

ಕೆಳಗಿನ ನ್ಯೂನತೆಗಳನ್ನು ಗಮನಿಸಲಾಗಿದೆ.
1. ವ್ಯಾಪಾರ ನಡೆಸಲು ಮಳೆ ಬಿಸಿಲಿನ ರಕ್ಷಣೆಗೆ ಯಾವುದೇ ಮೇಲ್ಚಾವಣಿ ವ್ಯವಸ್ಥೆ ಇಲ್ಲ.
2. ವಿದ್ಯುತ್ ಸರಬರಾಜು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಶೌಚಾಲಯ ವ್ಯವಸ್ಥೆ ಇರುವುದಿಲ್ಲ. ಒಳಚರಂಡಿ ,ರಸ್ತೆಯ ವ್ಯವಸ್ಥೆ , ವ್ಯಾಪಾರ ನಡೆಸುವ ಸ್ಥಳ ಸಂಪೂರ್ಣವಾಗಿ ಕಲುಷಿತಗೊಂಡು ಇದರಿಂದಾಗಿ ಸಾಂಕ್ರಾಮಿಕ ರೋಗವು ಹರಡುವ ಸಾಧ್ಯತೆಗಳಿವೆ. ಸ್ಥಳದಲ್ಲಿ ಗಿಡ ಗಂಟೊಗಳು ಬೆಳೆದಿದ್ದು ವ್ಯಾಪಾರ ಮಾಡುವ ಸ್ಥಳದಲ್ಲಿ ವಿಷಪೂರಿತ ನಾಗರಹಾವು , ಹೆಬ್ಬಾವುಗಳು ತುಂಬಿದೆ. ತರಕಾರಿ ಹಣ್ಣು ಖರೀದಿಸಲು ಸರಿಯಾದ ವ್ಯವಸ್ಥೆಯೂ ಇಲ್ಲ. ಒಟ್ಟಾರೆಯಾಗಿ ಇಲ್ಲಿ ವ್ಯಾಪಾರ ನಡೆಸಲು ಇಲ್ಲಿ ಯಾವುದೇ ಭದ್ರತೆ ಇಲ್ಲದಾಗಿದೆ.

ಈ ಎಲ್ಲಾ ಸಮಸ್ಯೆಗಳ ಬಗ್ಗೆ ಲೋಕಸಭಾ ಸದಸ್ಯರಾದ ಸಂಸದರಾದ ನಳೀನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಶ್ರೀ ಭರತ್ ಶೆಟ್ಟಿ ರವರು ಆಶ್ವಾಸನೆ ಕೊಟ್ಟದ್ದಲ್ಲದೇ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪತ್ರಿಕಾ ಗೋಷ್ಠಿಯಲ್ಲಿ ಮನಪಾ ವಿರೋಧ ಪಕ್ಷದ ನಾಯಕರಾದ ಅಬ್ದುಲ್ ರವೂಫ್ ರವರು ತಿಳಿಸಿರುತ್ತಾರೆ.

ಪತ್ರಿಕಾ ಗೋಷ್ಠಿಯಲ್ಲಿ ಶಶಿಧರ ಹೆಗ್ಡೆ , ಸದಾಶಿವ ಉಳ್ಳಾಲ್, ಬಾಸ್ಕರ್ ಕೆ, ಶಾಹುಲ್ ಹಮೀದ್, ನವೀನ್ ಡಿಸೋಜ, ಪ್ರವೀಣ್ ಚಂದ್ರ ಆಳ್ವ, ವಸಂತ್ ಬರ್ನಾಡ್, ಪ್ರತಿಭಾ ಕುಳಾಯಿ ಉಪಸ್ಥಿತರಿದ್ದರು.


Spread the love