ಮಂಗಳೂರು| ಕ್ಲಾಕ್ ಟವರ್ ಬಳಿ ಅಗ್ನಿ ಅವಘಡ: ಸುಟ್ಟು ಕರಕಲಾದ ಎರಡು ಅಂಗಡಿಗಳು

Spread the love

ಕ್ಲಾಕ್ ಟವರ್ ಬಳಿ ಅಗ್ನಿ ಅವಘಡ: ಸುಟ್ಟು ಕರಕಲಾದ ಎರಡು ಅಂಗಡಿಗಳು

ಮಂಗಳೂರು: ನಗರದ ಕ್ಲಾಕ್ ಟವರ್ ಬಳಿ ಅಗ್ನಿ ಅವಘಡ ಸಂಭವಿಸಿ ಎರಡು ಅಂಗಡಿಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ.

ಕ್ಲಾಕ್ ಟವರ್ ಬಳಿ ಇರುವ ಬಟ್ಟೆ ಅಂಗಡಿ ಮತ್ತು ಗುಜರಿ ಅಂಗಡಿಗೆ ಏಕಾಏಕಿ ಬೆಂಕಿ ತಗುಲಿದ್ದು,ತಕ್ಷಣ ಬೆಂಕಿಯ ಜ್ವಾಲೆ ಎಲ್ಲೆಡೆ ಹಬ್ಬಿದ್ದು ಎರಡೂ ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಪಾಂಡೇಶ್ವರ ಹಾಗೂ ಕದ್ರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸೋ ಕಾರ್ಯಾಚರಣೆ ನಡೆಸಿದ್ದರು. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರೋ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ


Spread the love
Subscribe
Notify of

0 Comments
Inline Feedbacks
View all comments