ಮಂಗಳೂರು: ನದಿಗೆ ಬಿದ್ದು ಮೀನುಗಾರ ಸಾವು
ಮಂಗಳೂರು: ಮೀನುಗಾರಿಕಾ ಬೋಟ್ ಲಂಗರು ಹಾಕುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ನದಿಗೆ ಬಿದ್ದು ಮೀನುಗಾರ ಸಾವನ್ನಪ್ಪಿದ ಘಟನೆ ಹಳೆ ಬಂದರ್ ನಲ್ಲಿ ನಡೆದಿದೆ.
ಚತ್ತೀಸ್ ಘಡ ಜಸ್ಪುರ್ ಜಿಲ್ಲೆಯ ಬರ್ಖಾಸ್ ಪಾಲಿ ಗ್ರಾಮದ ನಿವಾಸಿ ಪ್ರಹ್ಲಾದ್ ಚೌಹಾನ್(33) ಮೃತ ಮೀನುಗಾರ.
ವರ್ಷದ ಹಿಂದೆ ಮಂಗಳೂರಿಗೆ ಬಂದು ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ಸ ಇವರು, ಸೋಮವಾರ ರಾತ್ರಿ 11 ಗಂಟೆ ಹೊತ್ತಿಗೆ ಹಳೆ ಬಂದರ್ ಉಪ್ಪುಧಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ಹಸನ್ ಅಲ್ ಬಹಾರ್’ ಪರ್ಸಿನ್ ಬೋಟಿನ ಹಗ್ಗ ಕಟ್ಟುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದಾನೆ. ಈ ಸಂದರ್ಭ ಬೋಟ್ ನಲ್ಲಿದ್ದ ಇತರ ಮೀನುಗಾರರು ಕಾರ್ಯಾಚರಣೆ ನಡೆಸಿ ನೀರಿನಿಂದ ಮೇಲಕ್ಕೆ ಎತ್ತಿದರೂ ಪ್ರಹ್ಲಾದ್ ಅದಾಗಲೇ ಸಾವೀಗೀಡಾಗಿದ್ದ. ಮೃತದೇಹದ ಶವಪರೀಕ್ಷೆ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಿದ ಬಳಿಕ ವಿಮಾನದ ಮೂಲಕ ತವರೂರಿಗೆ ಕಳುಹಿಸಿಕೊಡಲಾಗಿದೆ.
ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.













