ಮಂಗಳೂರು: ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಸೂಚನೆ
ಮಂಗಳೂರು: 2006-07ನೇ ಸಾಲಿನಲ್ಲಿ ಭಾಗ್ಯಲಕ್ಷ್ಮಿ ಯೋಜನೆಯಡಿ ನೋಂದಾಯಿಸಿ, 18 ವರ್ಷ ಪೂರ್ಣಗೊಂಡಿರುವ ಅರ್ಹ ಫಲಾನುಭವಿಗಳಿಂದ (ಮರಣ ಹೊಂದಿರುವ ಹಾಗೂ ಅನರ್ಹ ಫಲಾನುಭವಿಗಳನ್ನು ಹೊರತುಪಡಿಸಿ) ಪರಿಪಕ್ವ ಮೊತ್ತ ರೂ.32351 ಎಲ್.ಐ.ಸಿ ಸಂಸ್ಥೆಯಿಂದ ನೇರವಾಗಿ ಫಲಾನುಭವಿಗಳ ಖಾತೆಗೆ ಪಾವತಿಸುವ ಪ್ರಕ್ರಿಯೆ ಚಾಲ್ತಿಯಲ್ಲಿರುತ್ತದೆ.
ಜಿಲ್ಲೆಯಲ್ಲಿ ಒಟ್ಟು 3,155 ಫಲಾನುಭವಿಗಳನ್ನು ನೋಂದಾಯಿಕೊಂಡಿದ್ದು, ಅವರಲ್ಲಿ ಕೆಲವು ಫಲಾನುಭವಿಗಳು ವಲಸೆ ಹೋಗಿರುವುದು ಮತ್ತು ದಾಖಲಾತಿಗಳನ್ನು ತಡವಾಗಿ ಸಲ್ಲಿಸುತ್ತಿರುವುದು ಕಂಡುಬಂದಿದ್ದು, ಅರ್ಹ ಫಲಾನುಭವಿಗಳ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ಅಳವಡಿಸಲು ಅಕ್ಟೋಬರ್ 31 ಕೊನೆಯ ದಿನ.
ಅರ್ಹ ಫಲಾನುಭವಿಗಳು, ಭಾಗ್ಯಲಕ್ಷ್ಮಿ ಮೂಲ ಬಾಂಡ್, ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ಕಡ್ಡಾಯವಾಗಿ ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ Payment Module ನಲ್ಲಿ ಮಾಹಿತಿಯನ್ನು ಅಳವಡಿಸುವಂತೆ ಸೂಚಿಸಲಾಗಿದೆ.
2007-08ನೇ ಸಾಲಿನಲ್ಲಿ ಯೋಜನೆಯಡಿ ನೋಂದಾಯಿಸಿ 18 ವರ್ಷ ಪೂರ್ಣಗೊಂಡಿರುವ ಅರ್ಹ ಫಲಾನುಭವಿಗಳಿಂದ ಪರಿಪಕ್ವ ಮೊತ್ತ ಪಾವತಿಗಾಗಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.