Spread the love
ಮಂಗಳೂರು | ಯುವತಿ ಕಾಣೆ : ಪತ್ತೆಗೆ ಮನವಿ
ಮಂಗಳೂರು: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ನಿವಾಸಿ ಅರ್ಪೈನ್ ಮೆಹ್ತಾಬ್ (18) ಎಂಬಾಕೆ ಜೂ.7ರಿಂದ ಮನೆಯಿಂದ ಹೋದವರು ಕಾಣೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
162 ಸೆಮೀ. ಎತ್ತರದ, ಗೋಧಿ ಮೈ ಬಣ್ಣದ, ಸಾಧಾರಣ ಶರೀರದ ಈಕೆ ಕಾಣೆಯಾದ ದಿನ ನೀಲಿ ಬಣ್ಣದ ಸೀರೆ, ನೀಲಿ ಬಣ್ಣದ ಬ್ಲೌಸ್ ಧರಿಸಿದ್ದರು. ಕನ್ನಡ, ಉರ್ದು ಭಾಷೆ ಮಾತನಾಡುತ್ತಾರೆ.
ಈಕೆಯ ಬಗ್ಗೆ ಮಾಹಿತಿ ಇದ್ದಲ್ಲಿ ಕಡಬ ಪೋಲಿಸ್ ಠಾಣೆಯನ್ನು ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Spread the love













