ಮಂಗಳೂರು : ವಿಡಿಯೋ ಮಾಡಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ ನಾಲ್ವರ ಹೆಸರು ಬರೆದಿಟ್ಟು ಆತ್ಮಹತ್ಯೆ
ಮಂಗಳೂರು ; ಖಾಸಗಿ ವಿಡಿಯೋ ತೋರಿಸಿ ಹನಿಟ್ರ್ಯಾಪ್ ಮಾಡಿ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆಂದು ದೆತ್ತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಮೃತ ಯುವಕನನ್ನು ನಿಟ್ಟೆ ಪರಪಾಡಿ ನಿವಾಸಿ ಅಭಿಷೇಕ್ ಎಂದು ಗುರುತಿಸಲಾಗಿದೆ.
ಈತ ಸರಕಾರಿ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬಯೋಮೆಡಿಕಲ್ ಆಗಿ ಕೆಲಸ ನಿರ್ವಹಿಸುತ್ತಿದ್ದನು .ಈತ ಆತ್ಮಹತ್ಯೆ ಗೈಯ್ಯುವ ಮೊದಲು ಡೀಟೆಲ್ ಆಗಿ ಯಾರೆಲ್ಲ ಕಿರುಕುಳ ನೀಡಿದ್ದಾರೆಂದು ಮತ್ತು ಯಾವ ವಿಚಾರಕ್ಕೆಂದು ನೋಟ್ ನಲ್ಲಿ ಬರೆದು ಆತ್ಮಹತ್ಯೆ ಮಾಡಿದ್ದಾನೆ,ಈತನಿಗೆ ನೀಡಿದ ಕಿರುಕುಳದಿಂದ ಬೇಸತ್ತು ಈ ನಿರ್ಧಾರ ತೆಗೆದಿದ್ದಾನೆ.
ಈತ ಡೆತ್ ನೋಟ್ ನಲ್ಲಿ ನಿರೀಕ್ಷಾ,ರಾಹುಲ್,ರಾಕೇಶ ಹಾಗೂ ತಸ್ಲಿಂ ಎಂಬವರ ಹೆಸರನ್ನು ಬರೆದಿದ್ದು ಈ ಮೇಲಿನವರು ಹಾಗೂ ಇನ್ನಿತರರು ಸೇರಿ ಹಣಕ್ಕಾಗಿ ತುಂಬಾನೆ ಕಿರುಕುಳ ಮಾಡುತ್ತಿದ್ದು ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ ಮಾನಸಿಕವಾಗಿ ದೈಹಿಕವಾಗಿ ತುಂಬಾನೆ ಹಿಂಸೆ ನೀಡಿದ್ದಾರೆ,ಕೊಲೆ ಮಾಡಿ ರೋಡ್ ನಲ್ಲಿ ಎಸೆಯುತ್ತೆನೆಂದು ಬೆದರಿಕೆ ಹಾಕಿದ್ದಾರೆಂದು ಬರೆದಿದ್ದಾನೆ.
ಈ ಪ್ರಕರಣದಲ್ಲಿ ದೆತ್ತ್ ನೋಟ್ ನಲ್ಲಿ ಬರೆದಿಟ್ಟ ಮಾಹಿತಿಯಂತೆ ತನಿಖೆ ನಡೆದರೆ ಆತ್ಮಹತ್ಯೆ ಗೆ ಕಾರಣರಾದ ಯುವಕ ಯುವತಿಯರು ಜೈಲೂಟ ಅನುಭವಿಸುವ ಸಾಧ್ಯತೆ ಗಳಿವೆ. ಒಟ್ಟಿನಲ್ಲಿ ಹನಿಟ್ರ್ಯಾಪ್ ಹಾಗೂ ಕಿರುಕುಳಕ್ಕೆ ಮುಂದೆ ಬಾಳಿ ಬದುಕಬೇಕಾದ ಯುವಕ ಮೃತಪಟ್ಟಿರುವುದು ಖೆದಕರ.