ಮಂಗಳೂರು: 2006ರಲ್ಲಿ ನಡೆದ ವಿದ್ಯಾರಾಜ್ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ 9 ವರ್ಶಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೊಪಿ ಸೋಮೇಶ್ವರ ನಿವಾಸಿ ಉಮೇಶ್ ಯಾನೆ ಉಮ್ಮು (29) ಎಂಬಾತನನ್ನು ಮಂಗಳೂರು ಸಿಸಿಬಿ ಪೋಲಿಸರು ಬಂಧಿಸಿದ್ದಾರೆ.
ಮಂಗಳೂರು ಪಾಂಡೇಶ್ವರ ಒಲ್ಡ್ ಕೆಂಟ್ ರಸ್ತೆಯ ಮೊಹನ್ ದಾಸ್ ಅವರ ಪುತ್ರ ವಿದ್ಯಾರಾಜ್ (16)ಎಂಬಾತ ಮಂಗಳೂರಿನ ಸೋನಾ ಬ್ಯಾಂಕರ್ಸ್ ನಲ್ಲಿ ಆಫಿಸ್ ಬಾಯ್ ಕೆಲಸ ಮಾಡಿಕೊಂಡಿದ್ದು, ಜೂನ್ 3, 2006ರಲ್ಲಿ ಮ್ಹಾಲಕ ರೋಬರ್ಟ್ ಕ್ಯಾಸ್ತಲಿನೊ ನೀಡಿದ 62000 ಹಣವನ್ನು ಬಿಸಿರೋಡಿನ ಅಕ್ಷಯ ಫೈನ್ಸಾನ್ಸಿಗೆ ನೀಡುವಂತೆ ಕಳುಹಿಸಿಕೊಟ್ಟಿದ್ದರು. ಅಂದು ವಿದ್ಯಾರಾಜ್ ಫೈನ್ಸಾನ್ಗೂ ತೆರಳದೆ ಮನೆಗೂ ಬಾರದೆ ಕಾಣೆಯಾಗಿದ್ದು, ಈ ಕುರಿತು ಈತನ ತಂದೆ ಮಂಗಳೂರು ಉತ್ತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೋಲಿಸರು ವಿದ್ಯಾರಾಜ್ ಜೊತೆ ಕೆಲಸ ಮಾಡಿಕೊಂಡಿದ್ದ ಉಮೇಶ್ ಹಾಗೂ ಆತನ ಸ್ನಹಿತರಾದ ಸಂದೀಪ್ ಶೆಟ್ಟಿ, ರಾಜೇಶ್ ಪವನ್ ಎಂಬವರ ಮೇಲೆ ಸಂಶಯ ವ್ಯಕ್ತಪಡಿಸಿ ವಿಚಾರಣೆ ನಡೆಸಿದಾಗ ಇವರುಗಳು ಮಾರುತಿ 800 ಕಾರಿನಲ್ಲಿ ವಿದ್ಯಾರಾಜ್ ನನ್ನು ಅಪಹರಿಸಿ ಉಪ್ಪಿನಂಗಡಿ ನೆಲ್ಯಾಡಿಯ ಪೆರಿಯ ಶಾಂತಿ ಎಂಬಲ್ಲಿ ಅರಣ್ಯದಲ್ಲಿ ಒಂದು ಮೋರಿಯ ಬಳಿಯಲ್ಲಿ ಆತನ ಕುತ್ತಿಗೆಗೆ ಬಾತ್ ಟವೆಲ್ ಬಿಗಿದು ಕೊಲೆ ಮಾಡಿ ಮೋರಿಯ ಕೆಳಗೆ ಎಸೆದು ಆತನಲ್ಲಿದ್ದ 62000 ನಗದು ಹಾಗೂ ಆತನ ಚಿನ್ನಾಭರಣಗಳನ್ನು ಹಂಚಿಕೊಂಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿ ಉಮೇಶ್ ಎಂಬಾತ ತಲೆಮರೆಸಿಕೊಂಡಿದ್ದು ಈತನ ಪತ್ತೆಗೆ ಬಹಳಷ್ಟು ಶ್ರಮಪಟ್ಟರೂ ಪತ್ತೆಯಾಗಿರಲಿಲ್ಲ.
ಮೇ 15 ರಂದು ಉಮೇಶ್ ನಂತೂರು ಬಸ್ಸು ನಿಲ್ದಾಣದ ಬಳಿ ಇರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೋಲಿಸರು ಅಲ್ಲಿಗೆ ತೆರಳಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದ್ಯಾರಾಜ್ ಕೊಲೆ ಪ್ರಕರಣ ಆರೋಪಿಗಳ ಪೈಕಿ ಸಂದೀಪ್ ಶೆಟ್ಟಿಯನ್ನು 4 ವರ್ಶದ ಹಿಂದೆ ಆತನ ಮನೆಯ ಬಳಿ ಚೋನಿ ಯಾನೆ ಕೇಶವ ಪೂಜಿ ಮತ್ತು ಇತರರು ಸೇರಿ ಕೊಲೆ ಮಾಡಿದ್ದರು. ಆರೋಪಿ ಉಮೇಶ್ ಎಂಬಾತನ್ನನ್ನು ಮಂಗಳೂರು ಉತ್ತರ ಪೋಲಿಸ್ ಠಾಣೆಗೆ ಹಸ್ತಾಂತರಿಸಲಾಗಿದೆ.












