ಮಂಗಳೂರು ವಿಶ್ವ ವಿದ್ಯಾಲಯದಿಂದ ವಿನಾಯಕ ಭಟ್ಟರಿಗೆ ಪಿಎಚ್‍ಡಿ ಪ್ರದಾನ

Spread the love

ಮಂಗಳೂರು ವಿಶ್ವ ವಿದ್ಯಾಲಯದಿಂದ ವಿನಾಯಕ ಭಟ್ಟರಿಗೆ ಪಿಎಚ್‍ಡಿ ಪ್ರದಾನ

ಮೂಡಬಿದಿರೆ: “ಭಗವದ್ಗೀತೆಯಲ್ಲಿ ಮನೋನಿರ್ವಹಣೆ ಹಾಗೂ ನಿರ್ವಹಣಾ ವಿಜ್ಞಾನ” ಕುರಿತು ಮಂಡಿಸಿದ ಮಹಾ ಪ್ರಬಂಧಕ್ಕೆ ವಿನಾಯಕ ಭಟ್ಟ ಗಾಳಿಮನೆ ಅವರಿಗೆ ಮಂಗಳೂರು ವಿಶ್ವವಿದ್ಯಾಲುವು ಪಿಎಚ್‍ಡಿ ಪ್ರದಾನ ಮಾಡಿದೆ.

ವಿದ್ವಾಂಸ ಜಿ.ಎನ್ ಭಟ್ಟ ಹರಿಗಾರ ಮಾರ್ಗದರ್ಶನದಲ್ಲಿ ಮಂಡಿಸಿದ ಪ್ರಬಂಧ ಇದಾಗಿದ್ದು, ಕಳೆದ ವರ್ಷ ಮಹಾಪ್ರಬಂಧವನ್ನು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದರು. ವಿನಾಯಕ ಭಟ್ಟ ಗಾಳಿಮನೆ ಲೇಖಕರಾಗಿ, ತಾಳಮದ್ದಲೆ ಅರ್ಥದಾರಿಯಾಗಿ ಈಗಾಗಲೇ ಹೆಸರು ಮಾಡಿದ್ದು, ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ಪದವಿ ಸಂಸ್ಕøತ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮೂಲತಃ ಸಿದ್ಧಾಪುರ ತಾಲೂಕಿನ ಗಾಳಿಮನೆಯ ವಿದ್ವಾನ್ ಚಂದ್ರಶೇಖರ ಭಟ್ಟ ಹಾಗೂ ಸವಿತಾ ಭಟ್ಟ ದಂಪತಿಯ ಪುತ್ರ. ಇವರು ಈ ಮೊದಲು ಉಮ್ಮಚಗಿ ಶ್ರೀಮಾತಾ ಸಂಸ್ಕøತ ಕಾಲೇಜಿನ ವಿದ್ಯಾರ್ಥಿ ಕೂಡ ಆಗಿದ್ದು, ಇಲ್ಲಿನ ಪ್ರಾಧ್ಯಾಪಕಿ ಶರಾವತಿ ಗಜಾನನ ಭಟ್ಟ ಅವರಿಂದ ಭಗವದ್ಗೀತಾ ಉಪದೇಶ ಪಡೆದು ಮೂರು ವರ್ಷಗಳಲ್ಲಿ ಸಂಪೂರ್ಣ ಗೀತೆ ಬಾಯಿಪಾಠ ಮಾಡಿದ್ದರು ಎಂಬುದು ಉಲ್ಲೇಖನೀಯ.


Spread the love