ಮನುಷ್ಯನಿಗೆ ಆರೋಗ್ಯ ಬಹಳ ಪ್ರಾಮುಖ್ಯ – ಡಾ.ಹೆಚ್ ಎಸ್ ಬಳ್ಳಾಲ್
ಉಡುಪಿಯ ಗಾಂಧಿ ಆಸ್ಪತ್ರೆಯ 30ನೇ ವರ್ಷದ ಸಂಭ್ರಮಾಚರಣೆಯನ್ನು ಸೋಮವಾರ ಆತ್ರಾಡಿ ಪಂಚಮಿ ಫೌಂಡೇಶನ್ನಲ್ಲಿ ಮದಗದ ಮಣಿಪಾಲ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಡಾ.ಹೆಚ್ ಎಸ್ ಬಳ್ಳಾಲ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಮನುಷ್ಯನಿಗೆ ಆರೋಗ್ಯ ಬಹಳ ಪ್ರಾಮುಖ್ಯ, ಅಂತಹ ಅಗತ್ಯ – ಸೇವೆಯನ್ನು ಬಡವರಿಗೆ ನೀಡುವ ಕೆಲಸವನ್ನು ಗಾಂಧಿ ಆಸ್ಪತ್ರೆ ಕಳೆದ 30 ವರ್ಷಗಳಿಂದ ಮಾಡುತ್ತಿದೆ. ಆಸ್ಪತ್ರೆಯಿಂದ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯ ಸಿಗಲಿ ಎಂದು ಹಾರೈಸಿದರು.
ಯೆನಪೋಯ ವಿಶ್ವವಿದ್ಯಾನಿಲಯದ ಪ್ರೊ. ಚಾನ್ಸೆಲರ್ ಡಾ.ಎಂ.ವಿಜಯಕುಮಾರ್ ಮಾತನಾಡಿ, ವೈದ್ಯರು ದೇವರಲ್ಲ. ಆದರೆ ಪ್ರತಿಯೊಬ್ಬ ವೈದ್ಯರೂ ರೋಗಿಗಳಿಗೆ ಅತ್ಯುತ್ತಮ ಸೇವೆ ನೀಡಲು ಪ್ರಯತ್ನಿಸುತ್ತಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಆಸ್ಪತ್ರೆ ಮುನ್ನಡೆಸುವುದು ಸವಾಲಿನ ಕಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಅವಲೋಕಿಸಿದರೆ ಗಾಂಧಿ ಆಸ್ಪತ್ರೆ ಯಶಸ್ವಿ ವೈದ್ಯಕೀಯ ಸೇವೆ ನೀಡುತ್ತಿದೆ ಎಂದರು. ಅತಿ ಹೆಚ್ಚು ಸಂದರ್ಶಕ ವೈದ್ಯರು ಗಾಂಧಿ ಆಸ್ಪತ್ರೆಗೆ ಭೇಟಿ ನೀಡುವುದರಿಂದ ಎಲ್ಲಾ ವೈದ್ಯರ ಪರವಾಗಿ ಕರಾವಳಿ ಐಎಂಎ ಅಧ್ಯಕ್ಷ ಡಾ.ಕೆ ಸುರೇಶ್ ಶೆಣೈ ರವರನ್ನು ಗೌರವಿಸಲಾಯಿತು.
ಆಸ್ಪತ್ರೆಯಲ್ಲಿ ಸೇವೆ ನೀಡಿದ ಸಿಬ್ಬಂದಿಗಳನ್ನು, 30 ವರ್ಷದ ಅವಧಿಯಲ್ಲಿ ಜನಿಸಿದ 12,000 ಮಕ್ಕಳಲ್ಲಿ ಏಳು ಜನ ಶ್ರೇಷ್ಠರಾದ ಮಕ್ಕಳನ್ನು, ವಿಶೇಷ ಮಕ್ಕಳ ಕಲಿಕಾ ಶಾಲೆಯ ಎಚ್ ರವೀಂದ್ರ, ಆಸ್ಪತ್ರೆಯಲ್ಲಿ ಜನಿಸಿದ 9 ಅವಳಿ ಮಕ್ಕಳನ್ನು, ಕಾರ್ಯಕ್ರಮಕ್ಕೆ ಸಹಕರಿಸಿದ ಪೂರ್ಣಿಮಾ ಜನಾರ್ದನ್ ದಂಪತಿಗಳನ್ನು, ಡಾ. ಶುಭ ಭಟ್, ಮಿರಾಕಲ್ ಆನ್ ವೀಲ್ಸ್ ನ ಡಾ. ಸೈಯದ್ ಎಸ್ ಪಾಷಾ ರವರನ್ನು ಗೌರವಿಸಲಾಯಿತು
ಆಸ್ಪತ್ರೆಯ ಸಿಬ್ಬಂದಿಗಳ ವತಿಯಿಂದ, ಕರಾವಳಿ ಐ ಎಂ ಎ ವತಿಯಿಂದ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಎಂ ಹರಿಶ್ಚಂದ್ರ ದಂಪತಿಗಳನ್ನು ಗೌರವಿಸಲಾಯಿತು.
ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಪ್ರವರ್ತಕ ಡಾ. ಜಿ ಶಂಕರ್, ಐಎಂಎ ಉಡುಪಿ ಕರಾವಳಿ ಅಧ್ಯಕ್ಷಡಾಕ್ಟರ್ ಕೆ ಸುರೇಶ್ ಶೆಣೈ, ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ ಹರಿಶ್ಚಂದ್ರ, ಲಕ್ಷ್ಮಿ ಹರಿಶ್ಚಂದ್ರ, ಡಾ. ಪಂಚಮಿ, ಡಾ. ವಿದ್ಯಾ ತಂತ್ರಿ ಉಪಸ್ಥಿತರಿದ್ದರು. ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾಕ್ಟರ್ ವ್ಯಾಸರಾಯ ತಂತ್ರಿ ಸ್ವಾಗತಿಸಿ, ಕೆ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿ ಡಾ. ವಿದ್ಯಾ ತಂತ್ರಿ ಧನ್ಯವಾದವಿತ್ತರು. ಸಭಾ ಕಾರ್ಯಕ್ರಮದ ಬಳಿಕ ದೆಹಲಿಯ ವಿಶೇಷ ಕಲಾವಿದರಿಂದ ಮಿರಾಕಲ್ ಆನ್ ವೀಲ್ಸ್ ಕಾರ್ಯಕ್ರಮ ನಡೆಯಿತು.