ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

Spread the love

ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಸೊತ್ತು ಕಳವು

ಉಡುಪಿ: ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸುಮಾರು ಮೂರು ಲಕ್ಷ ರೂಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಹಾಗೂ ಇತರ ಸೊತ್ತುಗಳನ್ನು ಕಳವು ಮಾಡಿದ ಘಟನೆ ಶಿವಳ್ಳಿ ಗ್ರಾಮದ ಕಲ್ಸಂಕ-ಮಣಿಪಾಲ ರಸ್ತೆಯ ಸಮೀಪದ ಮನೆಯೊಂದರಲ್ಲಿ ನಡೆದಿದೆ.

ಅಮ್ಮುಂಜೆ ಪ್ರೇಮಾನಂದ ನಾಯಕ್ (65) ತಂದೆ: ದಿ. ಗೋಪಾಲಕೃಷ್ಣ ನಾಯಕ್ ವಾಸ: 1-2-26 ಶ್ರೀ. ವಿಘ್ನೇಶ್, ಕಲ್ಸಂಕ-ಮಣಿಪಾಲ್ ರಸ್ತೆ, ಶಿವಳ್ಳಿ ಗ್ರಾಮ, ಉಡುಪಿ ಇವರು ಮನೆಯಲ್ಲಿ ತನ್ನ ಕುಟುಂಬದೊಂದಿಗೆ ವಾಸವಾಗಿದ್ದು, ದಿನಾಂಕ 03/05/2017 ರಂದು ಸಂಜೆ 5:30 ಗಂಟೆಗೆ ಪೂನಾದಲ್ಲಿರುವ ತನ್ನ ಮೊಮ್ಮಗನ ಹುಟ್ಟುಹಬ್ಬದ ಕಾರ್ಯಕ್ರಮದ ಪ್ರಯುಕ್ತ ಪೂನಾಕ್ಕೆ ಹೋಗಿದ್ದು, ದಿನಾಂಕ 07/05/2017 ರಂದು ಅಮ್ಮುಂಜೆ ಪ್ರೇಮಾನಂದ ನಾಯಕ್ ರವರು ಬೆಳಿಗ್ಗೆ 07:30 ಗಂಟೆಗೆ ಮನೆಗೆ ಬಂದು ನೋಡಿದಾಗ ಮನೆ ಎದುರಿನ ಬಾಗಿಲು ಮುರಿದಿರುವುದು ಕಂಡುಬಂದಿದ್ದು, ಒಳಗಡೆ ಲಾಕ್ ಆಗಿರುವುದು ಕಂಡು ಬಂದಿರುತ್ತದೆ, ನಂತರ ಹಿಂಬದಿ ನೋಡಿದಾಗ ಹಿಂಬಾಗಿಲು ತೆರೆದಿದ್ದು ತನ್ನ ಸಂಬಂಧಿಕರಾದ ವೀರೇಂದ್ರ ನಾಯಕ್‌ರವರ ಜೊತೆಯಲ್ಲಿ ಹಿಂಬಾಗಿಲು ಮೂಲಕ ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿರುವ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು ಬೆಡ್‌ರೂಮಿನಲ್ಲಿದ್ದ ಕಪಾಟು ತೆರೆದಿದ್ದು ಕಂಡುಬಂದಿದೆ.

ನವರತ್ನದ ಉಂಗುರ ಸುಮಾರು 14 ಗ್ರಾಂ, ವಜ್ರದ ಉಂಗುರ ಸುಮಾರು 14 ಗ್ರಾಂ., ಲಕ್ಷ್ಮಿ ಪೆಂಡೆಂಟ್ ಸಹಿತ ಬಂಗಾರದ ಚೈನ್ ಸುಮಾರು 24 ಗ್ರಾಂ, ಬಂಗಾರದ ನೆಕ್ಲೆಸ್ ಸುಮಾರು 24 ಗ್ರಾಂ, ಚಿನ್ನದ 2 ಬಳೆ ಸುಮಾರು 16×2=32 ಗ್ರಾಂ, ಚಿನ್ನದ ನಾಣ್ಯ 5 ಗ್ರಾಂ (ದಾಮೋದರ ದೇವರ ಚಿತ್ರವಿದೆ),ಮಂಜೇಶ್ವರ ದೇವರ ಚಿತ್ರವಿರುವ ಬಂಗಾರದ ನಾಣ್ಯ 3 ಗ್ರಾಂ.ಲಕ್ಷ್ಮೀ ಚಿತ್ರವಿರುವ ಸುಮಾರು 4 ಗ್ರಾಂ ತೂಕದ ಬಂಗಾರದ ನಾಣ್ಯ. ಒಟ್ಟು 120 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕಳ್ಳರು ದೋಚಿಕೊಂಡು ಹೋಗಿರುತ್ತಾರೆ. ಇವುಗಳ ಅಂದಾಜು ಮೌಲ್ಯ ಮೂರು ಲಕ್ಷ ರೂಗಳಾಗಿದವೆ. ಅಲ್ಲದೆ ಗಾದ್ರೇಜ್ ನ ಸ್ಟೀಲ್ ಬಾಕ್ಸ್ ನಲ್ಲಿದ್ದ 35,0000 ನಗದನ್ನು ಕೂಡ ಕಳ್ಳರು ದೋಚಿದ್ದಾರೆ ಎಂದು ಅಮ್ಮುಂಜೆ ಪ್ರಭಾಕರ ನಾಯಕ್ ಉಡುಪಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.


Spread the love