ಮಹಾಕಾಳಿಪಡ್ಪು ಕೆಳ ಸೇತುವೆ ಅಪೂರ್ಣ ಕಾಮಗಾರಿಯು ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಮಂಗಳೂರು: ಜೆಪ್ಪು ಮಹಾಕಾಳಿಪಡ್ಪು ಅಂಡರ್ಬ್ರಿಜ್ಡ್ ಕಾಮಗಾರಿ ಪೂರ್ಣಗೊಳ್ಳದೇ ಉಂಟಾಗಿರುವ ತೊಂದರೆಯ ಬಗ್ಗೆ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ರೈಲ್ವೆ ಇಲಾಖೆಯ ನಿಧಾನಗತಿಯ ಕಾಮಗಾರಿಯನ್ನು ಖಂಡಿಸಿ ಪ್ರತಿಭಟನೆ
ಕಳೆದ 4 ವರ್ಷಗಳ ಹಿಂದೆ ಜೆಪ್ಪು ಮಹಾಕಾಳಿಪಡ್ಪು ಅಂಡರ್ಬ್ರಿಜ್ಡ್ ಕಾಮಗಾರಿ ಪೂರ್ಣಗೊಂಡಿದ್ದರೂ, ಇನ್ನು ಅದನ್ನು ಸಾರ್ವಜನಿಕರಿಗೆ ಬಿಟ್ಟುಕೊಡದೇ ಇದ್ದು ಇಲ್ಲಿ ನೀರು ತುಂಬಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದ ಬಗ್ಗೆ ದೂರುಗಳು ಇದ್ದರೂ ರೈಲ್ವೆ ಇಲಾಖೆಯವರು ಸಾರ್ವಜನಿಕ ಉಪಯೋಗಕ್ಕೆ ಬಿಟ್ಟುಕೊಡದೇ ಇರುವುದನ್ನು ಖಂಡಿಸಿ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಮಹಾಕಾಳಿ ಪಡ್ಪು ಜೆಪ್ಪು ಪಟ್ಣದ ಕೆನರಾ ಪಿಂಟೋ ಗ್ಯಾರೇಜ್ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು
ಈ ಪ್ರತಿಭಟನೆಯಲ್ಲಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ವಾರ್ಡ್ ಅಧ್ಯಕ್ಷರು, ಕಾಂಗ್ರೆಸ್ ಸಮಿತಿ ಪಧಾಧಿಕಾರಿಗಳು ಮಹಿಳಾ ಪದಾಧಿಕಾರಿಗಳು, ನಿಕಟ ಪೂರ್ವ ಕಾರ್ಪೋರೇಟರ್ಗಳು ಎಲ್ಲಾ ಕಾಂಗ್ರೆಸ್ನ ಸಹ ಸಂಘಟನೆಗಳು ಭಾಗವಹಿಸಿದ್ದರು
ಕಳೆದ ನಾಲ್ಕು ವರ್ಷಗಳಲ್ಲಿ ಅಂಡರ್ಬ್ರಿಜ್ಡ್ ಕಾಮಗಾರಿ ಪೂರ್ಣಗೊಂಡಿದ್ದರೂ, ಮಂಗಳೂರಿಗೆ ಹೆಬ್ಬಾಗಿಲಾಗಿ ಇರಬೇಕಾದ ಈ ಕಾಮಗಾರಿ ನೇರವೇರಿದ್ದರೂ, ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯು ಈ ಬಗ್ಗೆ ಅಸಡ್ಡೆಯ ವರ್ತನೆಯನ್ನು ತೋರಿಸುತ್ತಿರುವುದು ಮತ್ತು ದಸರಾ ಹಬ್ಬದ ಈ ಸಂದರ್ಭದಲ್ಲಿ ವಾಹನ ಚಾಲಕರು ಬೇರೆ ಬೇರೆ ರಸ್ತೆಗಳಲ್ಲಿ ತೆರಳುವ ಮೂಲಕ ಟ್ರಾಫಿಕ್ ಜಾಮ್ ಆಗುವುದಕ್ಕೆ ಈ ಬ್ರಿಜ್ಡ್ ಪ್ರಮುಖ ಕಾರಣವಾಗಿದೆ. ಈ ಬ್ರಿಜ್ಡ್ ಚಾಲನೆ ಅಗಿದ್ದಲ್ಲಿ ಕೇರಳ ಹಾಗೂ ಉಳ್ಳಾಲ ಕಡೆಯಿಂದ ಬರುವ ಎಲ್ಲಾ ವಾಹನಗಳು ಮಂಗಳೂರು ನಗರಕ್ಕೆ ಸುಗಮವಾಗಿ ಬರಲು ಇದೊಂದೆ ದಾರಿ ಇದ್ದು ಇದನ್ನು ಕಳೆದ ನಾಲ್ಕು ವರ್ಷಗಳಿಂದ ಅಂಡರ್ಬ್ರಿಡ್ಜ್ನ ಕಾಮಗಾರಿಯು ಅಮೆಗತಿಯಲ್ಲಿ ನಡೆಯುತ್ತಿದ್ದು ಇದನ್ನು ಯಾವುದೇ ರೀತಿಯಲ್ಲಿ ಗಮನವಹಿಸದೇ ಇರುವುದನ್ನು ಕಂಡು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಐವನ್ ಡಿʼಸೋಜಾ ತಿಳಿಸಿದ್ದಾರೆ.