ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ –ಆರೋಪಿಗಳಿಗೆ ಶಿಕ್ಷೆ ಯಾಗುವಂತೆ ಕಾರ್ಯ ನಿರ್ವಹಿಸಿ- ಉಗ್ರಪ್ಪ

Spread the love

ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ –ಆರೋಪಿಗಳಿಗೆ ಶಿಕ್ಷೆ ಯಾಗುವಂತೆ ಕಾರ್ಯ ನಿರ್ವಹಿಸಿ- ಉಗ್ರಪ್ಪ

ಉಡುಪಿ : ಮಹಿಳೆ ಮತ್ತು ಮಕ್ಕಳ ಮೆಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿನ ಆರೋಪಿಗಳಿಗೆ ಶಿಕ್ಷೆಯಾಗುವಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು ಎಂದು ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ಸಮಿತಿ ಅಧ್ಯಕ್ಷ ಹಾಗೂ ವಿಧನ ಪರಿಷತ್ ನ ಸದಸ್ಯ ಉಗ್ರಪ್ಪ ತಿಳಿಸಿದ್ದಾರೆ.

ಅವರು ಭಾನುವಾರ, ರಜತಾದ್ರಿಯ ಜಿಪಂ ಸಂಭಾಂಗಣದಲ್ಲಿ ಜಿಲ್ಲಾಧಿಕರಿಗಳು, ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು, ಮಹಿಳಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೆಲೆ ನಡೆಯವ ದೌರ್ಜನ್ಯ ಪ್ರಕರಣಗಳು ದಾಖಲಾಗುತ್ತಿದ್ದರೂ ಸಹ ಆರೋಪಿಗಳಿಗೆ ಶಿಕ್ಷೆ ಯಾಗುವ ಪ್ರಮಾಣ ಕಡಿಮೆಯಿದೆ, ಆರೋಪಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳದಂತೆ ಅಧಿಕಾರಿಗಳು ಕಾಯ್ ನಿರ್ವಹಿಸಬೇಕು, ಈ ಕುರಿತಂತೆ ಕಾನೂನಿನ ಸಮಗ್ರ ಮಾಹಿತಿ ಹೊಂದಿರಬೇಕು, ಶಿಕ್ಷೆಯ ಭಯ ಇಲ್ಲದಿದ್ದರೆ ಮತ್ತಷ್ಟು ದೌರ್ಜನ್ಯಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಉಇಗ್ರಪ್ಪ ಹೇಳಿದರು.

ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಅತ್ಯಾಚಾರ ನಿಯಂತ್ರಿಸುವ ಕುರಿತ ವರದಿಯನ್ನು ಇಂದು ತಿಂಗಳಲ್ಲಿ ಸರಕಾರಕ್ಕೆ ಸಲ್ಲಿಕೆಯಾಗಲಿದ್ದು, ಸಾರ್ವಜನಿಕರು ಮತ್ತು ಅಧಿಕಾರಿಗಳು ಸಮಿತಿಗೆ ಸಲಹೆಗಳನ್ನು ನೀಡಬಹುದಾಗಿದೆ ಎಂದು ಹೇಳಿದರು.

ಉಡುಪಿ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುವ ಸ್ಥಳದಲ್ಲಿ ಮಹಿಳೆ ಮೇಲೆ ನಡೆಯುವ ದೌರ್ಜನ್ಯ ಕುರಿತಂತೆ ವಿಶಾಖಾ ಮಾರ್ಗಸೂಚಿಯನ್ವಯ ಪ್ರತಿ ಇಲಾಖೆಯಲ್ಲಿ ಸಮಿತಿಯನ್ನು ರಚಿಸುವಂತೆ ಸೂಚಿಸಿದ್ದು, ಕೆಲವು ಇಲಾಖೆಗಳಲ್ಲಿ ಸಮಿತಿಗಳನ್ನು ರಚಿಸಿಲ್ಲ, ಸಮಿತಿ ರಚಿಸಿರುವ ಇಲಾಖೆಗಳು ಮಾರ್ಗಸೂಚಿಯನ್ವಯ ಸಮಿತಿ ರಚಿಸುವಂತೆ ತಿಳಿಸಿದ ಉಗ್ರಪ್ಪ, ದೌರ್ಜನ್ಯಕ್ಕೆ ಒಳಗಾದ ಮಹಿಳೆ ಮತ್ತು ಮಕ್ಕಳಿಗೆ ನೀಢಬೇಕಾದ ಗರಿಷ್ಠ ಪರಿಹಾರದ ಕುರಿತು ಅಧಿಕಾರಿಗಳು ಸಮರ್ಪಕ ಮಾಹಿತಿ ಹೊಂದಿರುವಂತೆ ಹಾಗೂ ಪರಿಹಾರ ಪಡೆಯುವ ಕುರಿತಂತೆ ಸಾರ್ವತ್ರಿಕ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸುವಂತೆ ಸೂಚಿಸಿದರು.

ಬಾಲನ್ಯಾಯ ಮಂಡಳಿ, ವರದಕ್ಷಿಣೆ ವಿರುದ್ದ ದಾಖಲಾಗುವ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವಂತೆ , ಜಿಲ್ಲೆಯ ಎಲ್ಲಾ ಹಾಸ್ಟೆಲ್ ಗಳಿಗೆ ಸಿಸಿಟಿವಿ ಅಳವಡಿಸಿ, ಬಿಸಿಯೂಟದಲ್ಲಿ ನೀಡುವ ಆಹಾರ ಪದಾರ್ಥಗಳ ನಿಯಮಿತ ಪರೀಕ್ಷೆ ನೆಡೆಸಿ , ಪ್ರಸವ ಲಿಂಗ ಪತೆ ಮಡುವ ಕೇಂದ್ರಗಳ ಕುರಿತು ನಿಗಾ ವಹಿಸುವಂತೆ ಉಗ್ರಪ್ಪ ಹೇಳಿದರು.

ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಅತ್ಯಾಚಾರ ನಿಯಂತ್ರಿಸುವ ಕುರಿತ ಮಧ್ಯಂತರ ವರದಿಯನ್ನು ಈಗಾಗಲೇ ಸರಕಾರಕ್ಕ ಸಲಿಸಿದ್ದು, ಮಧ್ಯಂತರ ವರದಿ ನಂತರವೂ ಹೇಳಿಕೊಳ್ಳುವಂತೆ ಪ್ರಾಮುಖ್ಯತೆ ರಾಜ್ಯದ ಅನೇಕ ಭಾಗದಲ್ಲಿ ದೊರೆತಿಲ್ಲ, ನಾಗರೀಕ ಸಮಾಜದಲ್ಲಿ 50% ಮಹಿಳೆಯರಿದ್ದು, ಮಕ್ಕಳ ಪ್ರಮಾಣ 38% ಇದೆ ಎರಡೂ ಒಟ್ಟು ಸೇರಿದರೆ ಸುಮಾರು 70 ರಿಂದ 75% ಇದ್ದಾರೆ ಆದರೂ ಅವರಿಗೆ ಸೂಕ್ತ ಪ್ರಾಧಾನ್ಯತೆ , ರಕ್ಷಣೆ ಸಿಕ್ಕಿಲ್ಲ, ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿದರೆ, ಕಡಿಮೆ ಮಾಡಲು ಸಾಧ್ಯವಿದೆ , ಮಕ್ಕಳ ಅಪಹರಣ. ಮಹಿಳೆಯರ ಮೆಲಿನ ದೌರ್ಜನ್ಯ, ಶೋಷಣೆ ತಡೆಯಲು ಜನ ಜಾಗೃತಿ ಮೂಡಿಸಬೇಕು, ಅವರಿಗೆ ಸೂಕ್ತ ರಕ್ಷಣೆ ಎಂಬ ಭಾವನೆಯನ್ನು ಜಿಲ್ಲಾಡಳಿತಗಳು ಮಾಡಬೇಕು ಎಂದು ಉಗ್ರಪ್ಪ ಹೇಳಿದರು.

ಸಭೆಯಲ್ಲಿ ಮಹಿಳೆ ಮತ್ತು ಮಕ್ಕಳ ಮೇಲಿನ ಶೋಷಣೆ, ದೌರ್ಜನ್ಯ ಅತ್ಯಾಚಾರ ನಿಯಂತ್ರಿಸುವ ಮತ್ತು ವರದಿ ನೀಡುವ ಸಮಿತಿ ಸದಸ್ಯೆ ಜ್ಯೋತಿ, ಹಾಗೂ ಚಂದ್ರಮೌಳಿ, ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರ್ಗಿ ಹಾಗೂ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love