ಮಹಿಳೆ ಸರ ಕಸಿದು ಪರಾರಿ; ಇಬ್ಬರ ಬಂಧನ

Spread the love

ಮಹಿಳೆ ಸರ ಕಸಿದು ಪರಾರಿ; ಇಬ್ಬರ ಬಂಧನ

ಮಂಗಳೂರು: ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ವೇಳೆ ಮಹಿಳೆಯ ಕುತ್ತಿಗೆಯಿಂದ ಚಿನ್ನವನ್ನು ಎಳೆದುಕೊಂಡು ಪರಾರಿಯಾಗುತ್ತಿದ್ದ ವ್ಯಕ್ತಿಗಳು ಪೊಲೀಸರು ಬಂಧಿಸಿದ್ದಾರೆ.

ಜನವರಿ 18 ರಂದು ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ ಕುಲಾಲ ಮಂದಿರದ ಬಳಿ ಇರುವ ಶ್ರೀಮತಿ ದಯಾ ಎಂಬವರ ಮಾಲಕತ್ವದ ದಿನಸಿ ಅಂಗಡಿಗೆ ಮೂರು ಜನ ಅಪರಿಚಿತರು ತೆರಳಿ ಹಗಲು 11.00 ಗಂಟೆಗೆ ಹೋಗಿ ಸಾಮಾನು ಖರೀದಿ ಮಾಡುವ ನೆಪದಲ್ಲಿ ಅಲ್ಲಿಯೇ ನಿಂತು ಇತರ ಗಿರಾಕಿಗಳಿಗೆ ಸಾಮಾನುನೀಡಿ ಬಳಿಕ ನಮಗೆ ಸಾಕು ಎಂದು ಶ್ರೀಮತಿ ದಯಾರವರಲ್ಲಿ ಹೇಳಿ ಹಗಲು 11.20 ಗಂಟೆಯ ವೇಳೆ ಮೂವರಲ್ಲಿ ಒರ್ವನು ಪೊಟೇಟೊ ಬೇಕು, ನೀರುಳ್ಳಿ ಬೇಕು ಎಂದು ಹೇಳಿದಾಗ ದಯಾರವರು ಕೊಟ್ಟಿದ್ದು ಪುನಃ ನೀರುಳ್ಳಿ ಬೇಕು ಎಂದಾಗ ಅದೇ ಅಂಗಡಿಗೆ ಬಂದಿದ್ದ  ದಯಾರವರ ಪರಿಚಯದ ಶ್ರೀರಾಜ್ ಎಂಬವರು ನೀರುಳ್ಳಿ ತೆಗೆಯುತ್ತಿದ್ದಾಗ ಇವರಲ್ಲಿ ಒರ್ವನು ಅಂಗಡಿಯೊಳಗೆ ಹೋಗಿ ಶ್ರೀಮತಿ ದಯಾರವರ ಬಾಬ್ತು ಸುಮಾರು 22,000/- ಮೌಲ್ಯದ 10 ಗ್ರಾಂ ತೂಕದ ಬಂಗಾರದ ನೆಕ್ಲೆಸ್, ಸುಮಾರು 500 ರೂ ಬೆಲೆಬಾಳುವ ಮೊಬೈಲ್ ಇರುವ ವ್ಯಾನಿಟಿ ಬ್ಯಾಗನ್ನು ಕಳವುಮಾಡಿಕೊಂಡು ಪರಾರಿಯಾಗಿದ್ದರು

ಈ ವಿಚಾರವನ್ನು ತಿಳಿದ ಕುವೆಟ್ಟು ಗ್ರಾಮದ ಬೀಟು ನಂಬ್ರ 04 ರ ಸದಸ್ಯರಾದ ಅರುಣ್ ಎಂಬವರು ಬೀಟು ಅಧಿಕಾರಿಯಾಗಿರುವ ಪಿ.ಸಿ 389 ನೇ ಅಶೋಕ್ರವರಿಗೆ ಈ ಬಗ್ಗೆ ಮಾಹಿತಿ ನೀಡಿ ಆರೋಪಿಗಳು ಪರಾರಿಯಾದ ಕಾರು ನಂಬ್ರ ಮತ್ತು ಕಾರಿನ ಬಣ್ಣವನ್ನು ತಿಳಿಸಿದ್ದು ಕೂಡಲೇ ಕಾರ್ಯಪ್ರವೃತ್ತರಾದ ಪಿ.ಸಿ 389 ಅಶೋಕರವರು ದ್ವಿಚಕ್ರ ವಾಹನದಲ್ಲಿ ತೆರಳಿ ಬೆಳ್ತಂಗಡಿ ಸಂತೆಕಟ್ಟೆಯ ಬಳಿಯಲ್ಲಿ ಮೇಲ್ಕಾಣಿಸಿದ ವಾಹನವನ್ನು ತಡೆದು ನಿಲ್ಲಿಸಿ ಸಾರ್ವಜನಿಕ ಸಹಕಾರದೊಂದಿಗೆ ಇಬ್ಬರನ್ನು ವಶಕ್ಕೆ ಪಡೆದು ಕಳವಾದ ಸೊತ್ತನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿರುತ್ತಾರೆ.


Spread the love