ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಕೂಟದಲ್ಲಿ ಆನಂದ ಅಮೀನ್ ಅವರಿಗೆ ಆರು ಪದಕ

Spread the love

ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಕೂಟದಲ್ಲಿ ಆನಂದ ಅಮೀನ್ ಅವರಿಗೆ ಆರು ಪದಕ

ಮಂಗಳೂರು :ಬೆಂಗಳೂರಿನ ವಿಜಯನಗರ ಈಜುಕೊಳದಲ್ಲಿ ಇತ್ತೀಚೆಗೆ ನಡೆದ 20ನೇ ಕರ್ನಾಟಕ ರಾಜ್ಯ ಮಾಸ್ಟರ್ಸ್ ಸ್ವಿಮ್ಮಿಂಗ್ ಚಾಂಪಿಯನ್ ಶಿಪ್ ಕೂಟದಲ್ಲಿ ನಗರದ ಸಿಂಡಿಕೇಟ್ ಉದ್ಯೋಗಿ ಬೆಂಗ್ರೆ ಆನಂದ ಅಮೀನ್ ಅವರು ನಾಲ್ಕು ಚಿನ್ನ ಸಹಿತ ಆರು ಪದಕ ಗೆದ್ದುಕೊಂಡಿದ್ದಾರೆ.

ಆನಂದ್ ಅಮೀನ್ ಅವರು 50 ಮೀಟರ್ ಮತ್ತು 100 ಮೀ.ಬ್ರೆಸ್ಟ್ ಸ್ಟ್ರೋಕ್, 50 x4 ಮಿಡ್ಲೆ ರಿಲೇ ಮತ್ತು 50 x4 ಫ್ರೀ ಸ್ಟೈಲ್ ರಿಲೇ ಯಲ್ಲಿ ಚಿನ್ನದ ಪದಕ, 50 ಮೀ.ಬಟರ್ ಫ್ಲೈ ವಿಭಾಗದಲ್ಲಿ ಬೆಳ್ಳಿ , 50 ಫ್ರೀ ಸ್ಟೈಲ್ ವಿಭಾಗದಲ್ಲಿ ಕಂಚು ಗೆದ್ದುಕೊಂಡಿದ್ದಾರೆ.

ಅಮೀನ್ ಅವರು ಸಿಂಡಿಕೇಟ್ ಬ್ಯಾಂಕ್ ಮಿಷನ್ ಸ್ಟ್ರೀಟ್ ಬ್ರಾಂಚ್ ಉದ್ಯೋಗಿ ಮತ್ತು ಬೆಂಗ್ರೆ ವಿದ್ಯಾರ್ಥಿ ಸಂಘ ಸ್ವಿಮ್ಮಿಂಗ್ ಕ್ಲಬ್ ಸದಸ್ಯರಾಗಿದ್ದಾರೆ. ಕುಸ್ತಿ ಪಟು ಕೂಡ ಆಗಿರುವ ಅಮೀನ್ ಹಲವು ಮಂದಿಗೆ ಈಜು ಮತ್ತು ಕುಸ್ತಿ ತರಬೇತು ನೀಡುತ್ತಿದ್ದಾರೆ.


Spread the love