ಮಂಗಳೂರಿನ ಬಲ್ಮಠ, ಸ.ಪ್ರ. ದರ್ಜೆ ಮಹಿಳಾ ಕಾಲೇಜಿನಲ್ಲಿ   ತುಳು ಕಥೆ ಮತ್ತು ಕವಿತೆ ಕಮ್ಮಟ

Spread the love

ಮಂಗಳೂರಿನ ಬಲ್ಮಠ, ಸ.ಪ್ರ. ದರ್ಜೆ ಮಹಿಳಾ ಕಾಲೇಜಿನಲ್ಲಿ   ತುಳು ಕಥೆ ಮತ್ತು ಕವಿತೆ ಕಮ್ಮಟ

ಮಂಗಳೂರು: ಪದವಿ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಸಾಹಿತ್ಯಿಕ ಅಭಿರುಚಿಯನ್ನು ಬೆಳೆಸುವ ಆಶಯದೊಂದಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ತುಳು ಭಾಷೆಯಲ್ಲಿ ಕಥೆ ಹಾಗೂ ಕವಿತೆ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
ತುಳು ಭಾಷೆ, ಸಂಸ್ಕøತಿ, ನಾಡು-ನುಡಿ, ಪ್ರಕೃತಿಯ ಕುರಿತಂತೆ ಕಥೆ ಹಾಗೂ ಕವಿತೆಯನ್ನು ತುಳು ಭಾಷೆಯಲ್ಲಿ ಫುಲ್ ಸ್ಕೇಪ್ ಹಾಳೆಯ ಒಂದೇ ಮಗ್ಗುಲಲ್ಲಿ ಬರೆದಿರಬೇಕು. ಗರಿಷ್ಠ ಮೂರು ಪುಟಗಳ ಮಿತಿಯಲ್ಲಿರಬೇಕು. ಲೇಖನಗಳು ಸ್ವತಂತ್ರವಾಗಿರಬೇಕು.
ವಿದ್ಯಾರ್ಥಿಗಳು ತಮ್ಮ ಹೆಸರು, ದೂರವಾಣಿ ಸಂಖ್ಯೆ, ತರಗತಿ ಕಾಲೇಜು ವಿಳಾಸ ಹಾಗೂ ಕಾಲೇಜಿನ ಪ್ರಾಂಶುಪಾಲರ ದೃಢೀಕರಣ ಪತ್ರದೊಂದಿಗೆ ತಮ್ಮ ಕಥೆ, ಕವಿತೆಗಳನ್ನು ಸಪ್ಟೆಂಬರ್ 10 ರ ಒಳಗೆ ಪ್ರಾಂಶುಪಾಲರು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಬಲ್ಮಠ ಮಂಗಳೂರು ಇವರಿಗೆ ಕಳುಹಿಸಲು ಕೋರಲಾಗಿದೆ.
ಸಪ್ಟೆಂಬರ್ 15 ರಂದು ಮಂಗಳೂರಿನ ಬಲ್ಮಠ ಸ.ಪ್ರ. ದರ್ಜೆ ಮಹಿಳಾ ಕಾಲೇಜಿನಲ್ಲಿ ಆಯೋಜಿಸಲಾಗುವ ಕಮ್ಮಟದಲ್ಲಿ ಆಸಕ್ತ ವಿದ್ಯಾರ್ಥಿ ಬರಹಗಾರರಿಗಾಗಿ ಸೃಜನ ಶೀಲ ಬರವಣಿಗೆಯ ಬಗ್ಗೆ ವಿಮರ್ಷೆ ಮತ್ತು ಮಾರ್ಗದರ್ಶನ ಕುರಿತು ಅನುಭವಿ ವ್ಯಕ್ತಿಗಳಿಂದ ಕಮ್ಮಟವನ್ನು ಆಯೋಜಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಮ್ಮಟವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರು ಪ್ರಕಟಣೆÂಯಲ್ಲಿ ವಿನಂತಿಸಿದ್ದಾರೆ.


Spread the love