ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಶ್ರೀಮನ್ನಾಗಮಂಡಲ : ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

Spread the love

ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಶ್ರೀಮನ್ನಾಗಮಂಡಲ : ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

ಹೆಬ್ರಿ: ಕೃಷಿಲೋಕ ಮುನಿಯಾಲಿನ ಗೋಧಾಮವನ್ನು ಕಂಡು ಯುವಕರು ಕೃಷಿಯಲ್ಲಿ ತೊಡಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 21 ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲಕ್ಕೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಗುರುವಾರ ಭಕ್ತಿ ವೈಭವದ ಚಾಲನೆ ನೀಡಲಾಯಿತು.

ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್ ಮತ್ತು ಕುಟುಂಬಸ್ಥರು ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ಸಹಿತ ಋತ್ವಿಜರನ್ನು ಸ್ವಾಗತಿಸಿದರು. ೬ ಕಾಯಿ ಗಣಯಾಗ, ಉಗ್ರಾಣ ಮುಹೂರ್ತ, ಅನ್ನಾರಾಧನ ಮುಹೂರ್ತ ಸಹಿತ ವಿವಿಧ ಧಾರ್ಮಿಕ ವಿಧಿವಿಧಾನಗಳು ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿಗಳ ನೇತ್ರತ್ವದಲ್ಲಿ ವಾಸುದೇವ ಭಟ್ ಅವರ ಸಹಯೋಗದಲ್ಲಿ ನಡೆಯಿತು.

ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ. ಜಿ ರಾಮಕೃಷ್ಣ ಆಚಾರ್, ಸವಿತಾ ಆರ್ ಆಚಾರ್, ಅನುಷಾ ಆಚಾರ್, ಪ್ರಜ್ವಲ್, ಆಚಾರ್, ಪೂಜಾ ಆಚಾರ್, ತೇಜಸ್ ಆಚಾರ್, ರಕ್ಷತ್ ಆಚಾರ್, ಹಾಗೂ ಕುಟುಂಬಸ್ಥರು, ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ, ದಾಮೋಧರ ಶರ್ಮ ಬಾರ್ಕೂರು, ಅರವಿಂದ ಆಚಾರ್ಯ ಬೆಳುವಾಯಿ, ಪ್ರಭಾಕರ ಆಚಾರ್ಯ ಗುಡ್ಡೆಯಂಗಡಿ, ಮಾರ್ಗದರ್ಶಕರಾದ ಸುಕೇಶ ಹೆಗ್ಡೆ ಕಡ್ತಲ, ಮುನಿಯಾಲು ದಿನೇಶ ಪೈ, ಸಂತೋಷ ಆಮೀನ್, ಜ್ಯೋತಿ ಹರೀಶ್, ನಾಗಪ್ಪಯ್ಯ ಆಚಾರ್ಯ ಗುಜ್ಜಾಡಿ, ಪ್ರಮುಖರಾದ ಡಾ.ಹರೀಶ ಆಚಾರ್ಯ ಜಲಕದಕಟ್ಟೆ ಮಂಗಳೂರು, ಉಪೇಂದ್ರ ಆಚಾರ್ಯ ಪೆರ್ಡೂರು, ಡಾ.ಕೆ.ಸುದರ್ಶನ್ ಹೆಬ್ಬಾರ್ ಮುನಿಯಾಲು, ಗೋಪಿನಾಥ ಭಟ್ ಮುನಿಯಾಲು, ಬೆಳುವಾಯಿ ಸೀತಾರಾಮ ಆಚಾರ್ಯ, ಸಮಿತಿಯ ಸದಸ್ಯರು,ಪದಾಧಿಕಾರಿಗಳು, ಗಣ್ಯರು, ಪ್ರಮುಖರು, ಸಂಘಸಂಸ್ಥೆಗಳ ಪ್ರಮುಖರು ಭಾಗವಹಿಸಿದ್ದರು.

ಫೆಬ್ರವರಿ 19ರ ಗುರುವಾರ ಋತಿಜ್ವರ ಸ್ವಾಗತ, ಋತಿಗ್ವರಣ, ಫಲನ್ಯಾಸ-ಪ್ರಾರ್ಥನೆ, ಆದ್ಯಶುದ್ಧಿ- ಪುಣ್ಯಾಹ, ಮಾತೃಕಪೂಜನಮ್, ನಾಂದೀಸಮಾರಾಧನ್, ಸಪ್ತರ್ಷಿ ಪೂಜನಮ್, ಅರಣಿಮಥನ, ಬ್ರಹ್ಮ ಕೂರ್ಚ ಹೋಮ, 6 ಕಾಯಿ ಗಣಯಾಗ, ನವಗ್ರಹ ಯಾಗ, ಪ್ರತಿಸರಬಂಧಪೂರ್ವಕ ಕಂಕಣಬಂಧನ, ಶ್ರೀಮದ್ ಭಾಗವತ ಪಾರಾಯಣರಂಭ, ಉಗ್ರಾಣ ಮುಹೂರ್ತ, ಅನ್ನರಾಧನ ಉಗ್ರಾಣ ಮುಹೂರ್ತ, ಅಂಕೂರ ಪೂಜೆ, ಸಪ್ತಶುದ್ಧಿ, ಭೂ ಶುದ್ದಿ, ವಾಸ್ತು ವಿದ್ಯಾ ಕಲಪ, ರಾಕ್ಷೋಘ್ನಸೂಕ್ತಯಾಗ, ಪ್ರಕಾರ ಬಲಿ ನಡೆಯಿತು.

20 ರ ಶುಕ್ರವಾರ ಮೃತ್ಯುಂಜಯ ಹೋಮ, ಕೂಷ್ಮಂಡಯಾಗ, ಭೂತನಾಥ ಪ್ರಿತೀಕರ ಪ್ರತ್ಯಕ್ಷ ಅಶ್ವಪೂಜಾ, ಪ್ರಸನ್ನ ಪೂಜೆ, ಸಾನ್ನಿಧ್ಯಾರ್ಥ ನೂರುಂಪಾಲುಮ್, ಚಕ್ರಬ್ಜಮಂಡಲ ಪೂಜಾ, ಭದ್ರಕ ಮಂಡಲ ಪೂಜೆ ನಡೆಯಲಿದೆ.

ಫೆಬ್ರವರಿ 21ರ ಶನಿವಾರ ಆಶ್ಲೇಷ ಬಲಿದಾನ, ಪಂಚ ವಿಂಶತಿ ದ್ರವ್ಯ ಮಿಳಿತ ಕಲಶ, ಪ್ರಧಾನಯಾಗ, ಸರ್ಪತ್ರಯ ಮಂತ್ರ ಯಾಗ, ಪವಮಾನ ಸೂಕ್ತಯಾಗ, ತಿಲಯಾಗ, ಬ್ರಹ್ಮಚಾರಿ ಆರಾಧನೆ, ಪ್ರಸನ್ನ ಪೂಜೆ, ಪಲ್ಲಪೂಜೆ, ಅನ್ನರಾದನೆ, ದುರ್ಗ ನಮಸ್ಕಾರ, ಹಾಲಿಟ್ಟು ಸೇವೆ, ಏಕ ಪವಿತ್ರ ಶ್ರೀಮನ್ನಾ ನಾಗಮಂಡಲ ಸೇವೆ, ಅನುಗ್ರಹ ವಾಕ್ಯ ಪ್ರಧಾನ, ಪ್ರಸಾದ ವಿತರಣೆ, ಪ್ರಸನ್ನ -ಉತ್ತರ ಪೂಜೆ, ಮಹಾ ಅನ್ನಸಂತರ್ಪಣೆ ಜರುಗಲಿದೆ.
ಫೆಬ್ರವರಿ 20ರಂದು ಶುಕ್ರವಾರ ಕೃಷಿ ಮಂಡಲ ಶಿರ್ಷಿಕೆಯಡಿ ಬೆಳಗ್ಗೆ 10:30ಕ್ಕೆ ನಡೆಯಲಿರುವ ಕೃಷಿ ವಿಚಾರಗೋಷ್ಠಿಯನ್ನು ಪದ್ಮಶ್ರೀ ಸತ್ಯನಾರಾಯಣ ಬೆಳೆರೀ ಉದ್ಘಾಟಿಸಲಿದ್ದಾರೆ. ಪ್ರಸ್ತಾವನೆಯನ್ನು ಶ್ರೀಕಾಂತ್ ಶೆಟ್ಟಿ ಮಾಡಲಿದ್ದಾರೆ.

ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಮೊದಲ ಕೃಷಿ ವಿಚಾರಗೋಷ್ಠಿಯಲ್ಲಿ ಕರಾವಳಿ ಕೃಷಿ ಬಹುತ ಮತ್ತು ಧಾರ್ಮಿಕ ನಂಬಿಕೆಗಳು ಎನ್ನುವ ವಿಷಯದ ಮೇಲೆ ಸಂಪನ್ಮೂಲ ವ್ಯಕ್ತಿ ನಿವೃತ್ತ ಪ್ರಾಧ್ಯಾಪಕ ಮತ್ತು ಪ್ರಸಿದ್ಧ ಕೃಷಿ ಅಂಕಣಕಾರ ಡಾ. ನರೇಂದ್ರ ರೈ ದೇರ್ಲ ನಡೆಸಿಕೊಡಲಿದ್ದಾರೆ.

ಎರಡನೇ ಗೋಷ್ಠಿ 12 ಗಂಟೆಗೆ ಆರಂಭವಾಗಲಿದ್ದು, ಯುವಜನತೆ ಮತ್ತು ಭವಿಷ್ಯದಲ್ಲಿ ಕೃಷಿ ಸಾಧ್ಯತೆಗಳು ಇದರ ಬಗ್ಗೆ ಸಂಪನ್ಮೂಲ ವ್ಯಕ್ತಿ ಪುತ್ತೂರು ಗ್ರಾಮಜನ್ಯದ ನಿರಂಜನ ಪೊಳ್ಯ ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಹಾಗೂ ಪ್ರಗತಿಪರ ಕೃಷಿಕ ಗುಣಪಾಲ ಕದಂಬ ವಹಿಸಲಿದ್ದಾರೆ.

ಮಧ್ಯಾಹ್ನ 2:30ಕ್ಕೆ ನಡೆಯಲಿರುವ ಕೃಷಿಗೋಷ್ಠಿಯಲ್ಲಿ ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಸತಿಯ ಅನುಭವ ವಿಷಯದ ಮೇಲೆ ಕುರುಡಪದವು ಮೈರುಗ ಇಲ್ಲಿಯ ಪ್ರಯೋಗಶೀಲ ಕೃಷಿಕ ಪ್ರವೀಣ್ ಕೇಶವ್ ಮಾತನಾಡದಿದ್ದಾರೆ. ಅಧ್ಯಕ್ಷತೆಯನ್ನು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಧನಂಜಯ ವಹಿಸಲಿದ್ದಾರೆ.

ಮಧ್ಯಾಹ್ನ 3:30ಕ್ಕೆ ಬಡಗುತ್ತಿಟ್ಟಿನ ಖ್ಯಾತ ಭಾಗವಾತರಾದ ರಾಘವೇಂದ್ರ ಆಚಾರ್ಯ ಜನಸಾಲೆ ಹಾಗೂ ತೆಂಕುತಿಮ್ಮ ಖ್ಯಾತ ಭಾಗವತರಾದ ರವಿಚಂದ್ರ ಕನ್ನಡಿ ಕಟ್ಟೆ ಬಳಗದಿಂದ ಯಕ್ಷಗಾನವಲ್ಲರಿ ನಡೆಯಲಿದೆ.

ಸಂಜೆ 5:00 ಗಂಟೆಗೆ ಶ್ರೀನಿವಾಸ ಸಭಾ ಮಂಟಪದಲ್ಲಿ ರೈತಪೀಠ ಪ್ರಶಸ್ತಿ ಪ್ರಧಾನ ನಡೆಯಲಿದೆ. ಇನ್ನೂರಕ್ಕು ಅಧಿಕ ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ ಅಪರೂಪದ ಕೃಷಿ ಋಷಿ ಪದ್ಮಶ್ರೀ ಬಿಕೆ ದೇವರಾಯ ಮಿತ್ತಬಾಗಿಲು ಇವರಿಗೆ ರೈತ ಪೀಠ ಪ್ರಶಸ್ತಿ ಪ್ರಧಾನ ನಡೆಯಲಿದೆ.

ದಿವ್ಯ ಸಾನಿಧ್ಯದಲ್ಲಿ ಮಹಾರಾಷ್ಟ್ರ ಕೊಲ್ಲಾಪುರ ಸಿದ್ದಗಿರಿ ಮಠದ ಪೂಜ್ಯಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಬೆಳಗಾವಿ ನಿಡಸೋಸಿ ಶ್ರೀ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠ ಇಲ್ಲಿಯ ಪೂಜ್ಯಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಡಿ, ಗೋಧಾಮದ ಪ್ರವರ್ತಕ ಡಾ. ಜಿ. ರಾಮಕೃಷ್ಣ ಆಚಾರ್, ಮಂಗಳೂರು ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಹರೀಶ್ ಆಚಾರ್ಯ ಜಲಕದಕಟ್ಟೆ,, ಎಸ್ ಕೆ ಜಿ ಐ ಕೋಆಪರೇಟಿವ್ ಸೊಸೈಟಿ ಮಂಗಳೂರು ಇದರ ಅಧ್ಯಕ್ಷ ಪಿ ಉಪೇಂದ್ರ ಆಚಾರ್ಯ ಉಪಸ್ಥಿತರಿರುತ್ತಾರೆ.

ಪ್ರವರ್ತಕ ಡಾ. ಜಿ ರಾಮಕೃಷ್ಣ ಆಚಾರ್ಯ ಅವರ ಸಾಧನೆ ಯಶುಗಾತಿಯನ್ನು ದಾಖಲಿಸಿದ ರೈತಪೀಠ ಇದು ಈ ನೆಲದ ಜ್ಞಾನಪೀಠ ಕೃತಿಯ ಬಿಡುಗಡೆ ನಡೆಯಲಿದೆ.


Spread the love
Subscribe
Notify of

0 Comments
Inline Feedbacks
View all comments